ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ: ಯೋಗಿ ಆದಿತ್ಯನಾಥ್ ಯಾರು? ಸನ್ಯಾಸಿ-ರಾಜಕಾರಣಿಯ ಪ್ರಯಾಣ

|
Google Oneindia Kannada News

ಲಕ್ನೋ ಮಾರ್ಚ್ 25: ಉತ್ತರ ಪ್ರದೇಶದ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಶುಕ್ರವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಧಾರ್ಮಿಕ ಮುಖಂಡರೊಂದಿಗೆ ಬಿಜೆಪಿಯ ರಾಜಕೀಯ ಪ್ರಮುಖರು ಭಾಗವಹಿಸಲಿದ್ದಾರೆ. ಆರ್‌ಎಸ್‌ಎಸ್ ಬೆಂಬಲದ ಮೂಲಕ 2017 ರಲ್ಲಿ ಯೋಗಿ ಸಿಎಂ ಗದ್ದುಗೆಗೆ ಏರಿದ ಯೋಗಿ ಆದಿತ್ಯನಾಥ್ ಅವರ ಸನ್ಯಾಸಿ-ರಾಜಕೀಯ ಜೀವನ ಅತ್ಯಂತ ಕುತೂಹಲಕಾರಿಯಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೈಗೆತ್ತುಕೊಂಡ ನಿರ್ಧಾರಗಳು ಯೋಗಿ ಆದಿತ್ಯನಾಥ್ ಅವರ ರಾಜಕೀಯ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳನ್ನೇ ತಂದಿವೆ.

ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯಿಂದ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡುವ ಮೊದಲು ಅವರ ದ್ವೇಷದ ಭಾಷಣಗಳು ಕೆಂಗಣ್ಣಿಗೆ ಗುರಿಯಾಗಿದ್ದವು. ಇದರಿಂದಾಗಿ ಅಭ್ಯರ್ಥಿಗಳ ದ್ವೇಷದ ಬಾಷಣಗಳಿಂದಾಗಿ ಕೇಸರಿ ಪಕ್ಷವು ಇಬ್ಭಾಗವಾಗಿತ್ತು. ಆದರೆ ಆರ್‌ಎಸ್‌ಎಸ್ ಬೆಂಬಲದ ಮೂಲಕ ಅವರನ್ನು ಭಾರತದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಜೊತೆಗೆ ಐದು ವರ್ಷಗಳ ನಂತರ ಯೋಗಿ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದಾರೆ. ಹಿಂದಿನ ಅಧಿಕಾರಾವಧಿಯಲ್ಲಿ ಅವರ ಕಾರ್ಯಕ್ರಮಗಳು ಅವರ ಆಡಳಿತ ಕೌಶಲ್ಯದ ಮೇಲೆ ಜನರಿಗೆ ಮತ್ತು ಪಕ್ಷಕ್ಕೆ ವಿಶ್ವಾಸವನ್ನು ನೀಡಿವೆ.

ಸನ್ಯಾಸಿ-ರಾಜಕಾರಣಿಯ ಪ್ರಯಾಣ

ಸನ್ಯಾಸಿ-ರಾಜಕಾರಣಿಯ ಪ್ರಯಾಣ

ಜೂನ್ 5, 1972 ರಂದು ಪೌರಿ ಗರ್ವಾಲ್‌ನ ಪಂಚೂರ್‌ನಲ್ಲಿ (ಈಗ ಉತ್ತರಾಖಂಡ್) ಜನಿಸಿದ ಆದಿತ್ಯನಾಥ್, 1990 ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಅಭಿಯಾನದಲ್ಲಿ ಸೇರಲು ಮನೆ ತೊರೆದರು. ಅವರು ಗೋರಖ್‌ಪುರದ ಗೋರಖನಾಥ ದೇವಾಲಯದ ಮಹಂತ್ ಅವೈದ್ಯನಾಥರ ಶಿಷ್ಯರೂ ಆಗಿದ್ದರು. ಆದಿತ್ಯನಾಥ್ ಅವರು ತಮ್ಮ ಹಳ್ಳಿಯಲ್ಲಿ ಶಾಲೆಯ ಜೀವನ ಕಲಿತಿದ್ದಾರೆ. ನಂತರ ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.

2014 ರಲ್ಲಿ ಅವೈದ್ಯನಾಥ್ ಅವರ ಮರಣದ ನಂತರ, ಅವರು ಗೋರಖನಾಥ ಮಠದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರು ಈಗಲೂ ಮಠದ ಮುಖ್ಯಸ್ಥರಾಗಿದ್ದಾರೆ. ಪೂರ್ವ ಯುಪಿ ಪಟ್ಟಣಕ್ಕೆ ಆಗಾಗ್ಗೆ ಪ್ರವಾಸ ಮಾಡುತ್ತಾರೆ. ಜೊತೆಗೆ ಹಿಂದೂ ಯುವ ವಾಹಿನಿ ಎಂಬ ತಮ್ಮದೇ ಆದ ಸ್ವಯಂಸೇವಕರ ತಂಡವನ್ನು ಸ್ಥಾಪಿಸಿದರು.

ಹಿಂದುತ್ವದ ಪ್ರತಿಪಾದಕ

ಹಿಂದುತ್ವದ ಪ್ರತಿಪಾದಕ

ಅವರು 1998 ರಲ್ಲಿ ತಮ್ಮ ಗುರುಗಳ ನಿರ್ದೇಶನದ ಮೇರೆಗೆ ರಾಜಕೀಯಕ್ಕೆ ಪ್ರವೇಶಿಸಿದರು. 28 ನೇ ವಯಸ್ಸಿನಲ್ಲಿ ಗೋರಖ್‌ಪುರದಿಂದ ಗೆದ್ದು ಕಿರಿಯ ಲೋಕಸಭಾ ಸದಸ್ಯರಾದರು. ಅವರು ಮಾರ್ಚ್ 19, 2017 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವವರೆಗೆ ನಾಲ್ಕು ಬಾರಿ ಸಂಸದೀಯ ಸ್ಥಾನವನ್ನು ಪ್ರತಿನಿಧಿಸಿದರು.

ಸಿಎಂ ಆದ ಬಳಿಕ ಹಿಂದುತ್ವದ ಪ್ರತಿಪಾದಕ ಎಂದು ತಮ್ಮ ಇಮೇಜ್ ಅನ್ನು ದೃಢಪಡಿಸುವ ನಿರ್ಧಾರಗಳನ್ನು ತೆಗೆದುಕೊಂಡರು. ಅವರ ಅವಧಿಯ ಆರಂಭದಲ್ಲಿ ಅವರು ಅಕ್ರಮ ಕಸಾಯಿಖಾನೆಗಳನ್ನು ನಿಷೇಧಿಸಿದರು ಮತ್ತು ಗೋಹತ್ಯೆಯನ್ನು ಹತ್ತಿಕ್ಕಿದರು. ಅವರ ಸರ್ಕಾರವು ಒಂದು ಸುಗ್ರೀವಾಜ್ಞೆಯನ್ನು ತಂದು ಇದರ ಪ್ರಕಾರ ಬಲವಂತ ಅಥವಾ ವಂಚನೆಯ ಮೂಲಕ ಧಾರ್ಮಿಕ ಮತಾಂತರದ ವಿರುದ್ಧ ಮಸೂದೆಯನ್ನು ತಂದಿದೆ. ಈ ಕ್ರಮ ಅಂತರ್ಧರ್ಮೀಯ ವಿವಾಹಗಳನ್ನು ಗುರಿಯಾಗಿಸಿಕೊಂಡಂತೆ ತೋರುತ್ತಿದೆ.

ಆಸ್ತಿ ಹಾನಿ

ಆಸ್ತಿ ಹಾನಿ

ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿರುವ ವಿಚಾರಗಳು ಪರ ವಿರೋಧಕ್ಕೆ ಕಾರಣವಾದವು. ಪ್ರತಿಭಟನೆಗಳಾದವು. ಸರ್ಕಾರ ಆಸ್ತಿ ಹಾನಿಯನ್ನು ಪಾವತಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯ ಬಗ್ಗೆ ವಿರೋಧ ಪಕ್ಷಗಳು ಅವರ ಸರ್ಕಾರವನ್ನು ಟೀಕಿಸಿದವು. ಯೋಗಿ ಸರ್ಕಾರ ನಕಲಿ ಎನ್‌ಕೌಂಟರ್ ನೀತಿಯನ್ನು ಅನುಸರಿಸುತ್ತದೆ ಎಂದು ಆರೋಪಿಸಿದರು. ಆದರೆ ಈ ಆರೋಪವನ್ನು ಅಧಿಕಾರಿಗಳು ಅಲ್ಲಗಳೆಯುತ್ತಾರೆ. ಈ ಅಭಿಯಾನದ ಸಮಯದಲ್ಲಿ, ಅವರು ರಾಜ್ಯದ ಎರಡು ಪ್ರಮುಖ ಸಮುದಾಯಗಳ ಧ್ರುವೀಕರಣದ ಆರೋಪವನ್ನೂ ಸಹ ಹೊಂದಿದ್ದಾರೆ.

ಡಬಲ್ ಇಂಜಿನ್ ಸರ್ಕಾರಕ್ಕೆ ಶಾಘನೆ

ಡಬಲ್ ಇಂಜಿನ್ ಸರ್ಕಾರಕ್ಕೆ ಶಾಘನೆ

ಹೀಗಾಗಿ ಕಳೆದ ವರ್ಷ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬಿಜೆಪಿ ಬಯಸಿಲ್ಲ ಎಂಬ ಊಹಾಪೋಹವಿತ್ತು. ಆದರೆ 2024 ರಲ್ಲಿ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಲು ಪ್ರಯತ್ನಿಸಿದರೆ 2022 ರ ಚುನಾವಣೆಯಲ್ಲಿ ಯೋಗಿ ಅವರು ಮತ್ತೆ ಸಿಎಂ ಆಗುವ ಅಗತ್ಯತೆ ಇಲ್ಲ ಎನ್ನುವ ವದಂತಿಗಳು ಸತ್ತುಹೋದವು.

ಪಕ್ಷದ ನಾಯಕರು ರಾಜ್ಯದಲ್ಲಿ ಆದಿತ್ಯನಾಥ್-ನರೇಂದ್ರ ಮೋದಿ ಡಬಲ್ ಇಂಜಿನ್ ಸರ್ಕಾರವನ್ನು ಶ್ಲಾಘಿಸಿದರು. ಬಿಜೆಪಿಯ 2022 ರ ವಿಧಾನಸಭಾ ಚುನಾವಣೆಯ ಗೆಲುವು ಪಕ್ಷದಲ್ಲಿ ಅವರ ಸ್ಥಾನವನ್ನು ಮತ್ತಷ್ಟು ದೃಢಪಡಿಸಿದೆ. ಯುಪಿ ರಾಜ್ಯ ಚುನಾವಣೆಯಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಲು ಕೇಸರಿ ಪಕ್ಷವು ಸಜ್ಜಾಗಿದೆ. ಇದು ಮೂರು ದಶಕಗಳಲ್ಲಿ ಯಾವುದೇ ಪಕ್ಷ ಸಾಧಿಸದ ಸಾಧನೆಯಾಗಿದೆ. ಆದಿತ್ಯನಾಥ್ ಅವರನ್ನು ಕೆಲವರು ದೂಷಿಸಿದ್ದಾರೆ. ಇನ್ನೂ ಕೆಲವರು ಯೋಗಿ ಅಪರಾಧದ ವಿರುದ್ಧ ಹೋರಾಡಲು ಬಲವಾದ ತಂತ್ರಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಪ್ರಶಂಸಿಸಿದ್ದಾರೆ.

ಹೀಗೆ ಯೋಗಿ ಆದಿತ್ಯನಾಥ್ ಸಿಎಂ ಹಾದಿಯಲ್ಲಿ ಹಲವಾರು ವಿಚಾರಗಳಿಗೆ ಹೊಗಳಲ್ಪಟ್ಟರೆ, ಇನ್ನೂ ಹಲವಾರು ವಿಚಾರಗಳಿಗೆ ನಿಂದಿಸಲ್ಪಟ್ಟಿದ್ದಾರೆ.

English summary
Yogi Adityanath will take oath as the Chief Minister of Uttar Pradesh for the second term on Friday. The event will have the participation of political heavy-weights from the BJP along with industralists and religious leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X