ವಿಡಿಯೋ: ಬಿಜೆಪಿ ಶಾಸಕನಿಗೆ ಕಪಾಳಮೋಕ್ಷ ಮಾಡಿದ ರೈತ
ಲಕ್ನೋ ಜನವರಿ 09: 2022 ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೆಲವೇ ವಾರಗಳ ಹಿಂದೆ ರೈತರು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿದರು. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ರೈತರೊಬ್ಬರು ಬಿಜೆಪಿ ಶಾಸಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಚಿತ್ರೀಕರಿಸಲಾದ ವಿಡಿಯೋ ಕ್ಲಿಪ್‌ನಲ್ಲಿ ಉನ್ನಾವೋದ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರು ಪ್ರತಿಮೆ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದಾರೆ. ಹಸಿರು ಟೋಪಿಯನ್ನು ಹಾಕಿರುವ ಒಬ್ಬ ವಯಸ್ಸಾದ ವ್ಯಕ್ತಿ ಗುಪ್ತಾ ಸಮೀಪಕ್ಕೆ ಬರುತ್ತಾನೆ. ನಂತರ ಗುಪ್ತಾ ಅವರಿಗೆ ಕಪಾಳಮೋಕ್ಷವನ್ನು ಮಾಡುವುದನ್ನು ಕಾಣಬಹುದು. ಪೊಲೀಸ್ ಅಧಿಕಾರಿಗಳು ಮತ್ತು ಇತರ ಒಂದಿಬ್ಬರು ಇದನ್ನು ಗಮನಿಸಿ ರೈತನನ್ನು ವೇದಿಕೆಯಿಂದ ಕೆಳಗಿಳಿಸುತ್ತಾರೆ.
ಸಮಾಜವಾದಿ ಪಕ್ಷವು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ವಿಡಿಯೊವನ್ನು ಟ್ವೀಟ್ ಮಾಡಿದೆ, "ಬಿಜೆಪಿ ಶಾಸಕ ಪಂಕಜ್ ಗುಪ್ತಾ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ, ರೈತ ಮುಖಂಡರೊಬ್ಬರು ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದು ಶಾಸಕರಿಗಾಗಿ ಅಲ್ಲ, ಆದರೆ ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರ್ಕಾರದ ಕಳಪೆ ನೀತಿಗಳು, ಕಳಪೆ ಆಡಳಿತ ಮತ್ತು ನಿರಂಕುಶಾಧಿಕಾರಕ್ಕಾಗಿ" ಎಂದು ಬರೆಯಲಾಗಿದೆ.

ಆದರೆ ಬಿಜೆಪಿ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಇದು ಕಪಾಳಮೋಕ್ಷವಲ್ಲ, ಕೇವಲ ಕೆನ್ನೆಯ ಮೇಲೆ ಸುಮ್ಮನೆ ತಟ್ಟಿದ್ದು' ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಗುಪ್ತಾ ರೈತನೊಂದಿಗೆ ಮಾತುಕತೆ ನಡೆಸಿ ಘಟನೆಯ ಬಗ್ಗೆ ವಿವರಣೆ ನೀಡಿದರು.
ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ಸಿಂಗ್ ಅವರ ಜನ್ಮದಿನವಾದ ಜನವರಿ 5ರಂದು ಎರಭಾದಿಯಭಾರ್‌ನಲ್ಲಿ ಗುಲಾಬ್ ಸಿಂಗ್ ಲೋಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆದಿತ್ತು. ಈ ಆತ್ಮೀಯ ಘಟನೆಗೆ ವಿರೋಧಪಕ್ಷದವರು ಬಣ್ಣ ಕಟ್ಟಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವ ಸಂಚು ನಡೆಸುತ್ತಿದ್ದಾರೆ ಎಂದು ಪಂಕಜ್ ಟೀಕಿಸಿದ್ದಾರೆ.
A video of Pankaj Gupta , a @BJP4UP MLA from Unnao in UP purportedly being ‘slapped’ by a farmer during a recent public meeting has gone viral …incident reportedly 3 days ago … reasons unclear … however now there has been a patch-up… in a new video (in next tweet) pic.twitter.com/GDzfUXjuky
— Alok Pandey (@alok_pandey) January 7, 2022
ಈ ಘಟನೆಯನ್ನು ಸಮಾಜವಾದಿ ಪಕ್ಷ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧದ ಟೀಕೆಗೆ ಬಳಸಿಕೊಂಡಿದೆ. 'ಬಿಜೆಪಿ ಶಾಸಕ ಪಂಕಜ್ ಗುಪ್ತಾ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಹಿರಿಯ ನಾಯಕರು ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಏಟು ಶಾಸಕನಿಗೆ ಮಾತ್ರವಲ್ಲ, ಆದರೆ ಯೋಗಿ ಆದಿತ್ಯನಾಥ್ ಸರ್ಕಾರದ ಕೆಟ್ಟ ನೀತಿಗಳು, ಕೆಟ್ಟ ಆಡಳಿತ ಹಾಗೂ ನಿರಂಕುಶ ಪ್ರಭುತ್ವಕ್ಕೆ ನೀಡಿರುವುದು' ಎಂದು ಟೀಕಿಸಿದೆ.
Recommended Video
ವಿಡಿಯೋದಲ್ಲಿರುವ ಹಿರಿಯ ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಶಾಸಕರನ್ನು ವೇದಿಕೆಯ ಮೇಲೆ ಹೊಡೆದ ನಂತರ ಪೊಲೀಸರು ಆತನನ್ನು ಕರೆದುಕೊಂಡು ಹೋಗುತ್ತಿರುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸಲಾಗಿದೆ. ರೈತ ಕೋಪದಲ್ಲಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ. 'ನನಗೆ ಶಾಸಕನ ಜತೆಗೆ ಯಾವುದೇ ಕೋಪ ಇಲ್ಲ. ಶಾಸಕರು ವೇದಿಕೆ ಮೇಲೆ ಆರಾಮಾಗಿ ಕುಳಿತಿದ್ದರು. ಹಿರಿಯನಾದ ನಾನು ಅವರನ್ನು ಪ್ರೀತಿಯಿಂದ ಹೊಡೆದಿದ್ದೆ. ಅವರನ್ನು ಏನೋ ಕೇಳಿದ್ದೆ. ಮಗ ಎಂದೇ ಅವರನ್ನು ಮಾತನಾಡಿಸಿದ್ದೆ' ಎಂದು ಚತ್ರಪಾಲ್ ಅವರು ಹೇಳಿದ್ದಾರೆ.












Click it and Unblock the Notifications