ಗಣರಾಜ್ಯೋತ್ಸವ: ಅಯೋಧ್ಯೆ ರಾಮಮಂದಿರ ಸ್ತಬ್ಧಚಿತ್ರ ಪ್ರದರ್ಶನ
ಲಕ್ನೋ, ಡಿಸೆಂಬರ್ 12: ಭಾರತದ ಗಣರಾಜ್ಯೋತ್ಸವ ದಿನಾಚರಣೆ ಸಿದ್ಧತೆ ಭರದಿಂದ ಸಾಗಿದೆ.
ಪ್ರತಿ ವರ್ಷವೂ ಹಲವು ರಾಜ್ಯಗಳಿಂದ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ.ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.
ಅಯೋಧ್ಯೆಯ ಮಂದಿರವಷ್ಟೇ ಅಲ್ಲದೇ ಅಲ್ಲಿನ ಹಾಗೂ ದೇವಾಲಯದ ಸಂಸ್ಕೃತಿ-ಸಂಪ್ರದಾಯಗಳನ್ನೂ ಸ್ತಬ್ಧ ಚಿತ್ರದಲ್ಲಿ ವಿವರಿಸಲಾಗುತ್ತದೆ.ಒಡಿಶಾದ ಟ್ಯಾಬ್ಲೋ ಜೊತೆಗೆ ಉತ್ತರ ಪ್ರದೇಶದ ಟ್ಯಾಬ್ಲೋ ಕಾಣಸಿಗಲಿದೆ.

ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಅಯೋಧ್ಯೆ ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ ಎಂಬ ಥೀಮ್ ನಡಿಯಲ್ಲಿ ಟ್ಯಾಬ್ಲೋ ಪ್ರದರ್ಶನವಾಗಲಿದೆ. ಅಯೋಧ್ಯೆಯ ದೀಪೋತ್ಸವವೂ ಈ ಸ್ತಬ್ಧ ಚಿತ್ರದಲ್ಲಿ ಕಾಣಬಹುದಾಗಿದೆ.
ಗಣಾರಾಜ್ಯೋತ್ಸವದ ಪರೇಡ್ ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ಲಭಿಸಿದೆ.












Click it and Unblock the Notifications