ಉತ್ತರ ಪ್ರದೇಶದಲ್ಲಿ ಯಡವಟ್ಟು: ವರ್ಗಾವಣೆ ಪಟ್ಟಿಯಲ್ಲಿ ಸತ್ತ ಪೊಲೀಸ್ ಅಧಿಕಾರಿ ಹೆಸರು!
ಲಕ್ನೋ, ಜನವರಿ 12: ಕಳೆದ ತಿಂಗಳು ಮೃತಪಟ್ಟಿದ್ದ ಪೊಲೀಸ್ ಅಧಿಕಾರಿಯನ್ನು 'ವರ್ಗಾವಣೆ' ಮಾಡುವ ಮೂಲಕ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಅಪಹಾಸ್ಯಕ್ಕೀಡಾಗಿದೆ.
Its a matter of deep regret that in today’s transfer list of Dy.SP’s a cancellation order has been issued for late Dy.SP Sri Satya Narain Singh.
— DGP UP (@dgpup) 11 January 2019
Such blunder is unpardonable and i apologise for it as HOD. I’ll take strict action & remedial measures for better sync of information
ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸತ್ಯನಾರಾಯಣ್ ಸಿಂಗ್ ಕಳೆದ ತಿಂಗಳು ಮೃತಪಟ್ಟಿದ್ದರು. ಆದರೆ, ಅದಕ್ಕೂ ಮೊದಲೇ ಅವರ ವರ್ಗಾವಣೆ ಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ, ಅದರಲ್ಲಿ ತಿದ್ದುಪಡಿ ಮಾಡದೆಯೇ ಪಟ್ಟಿಯನ್ನು ಬಿಡುಗಡೆ ಮಾಡಿ ಯಡವಟ್ಟು ಮಾಡಿಕೊಂಡಿದೆ.
ಈ ತಪ್ಪು ಬಹಿರಂಗವಾದ ಕೂಡಲೇ ಎಚ್ಚೆತ್ತ ಪೊಲೀಸ್ ಮಹಾ ನಿರ್ದೇಶಕ ಓಪಿ ಸಿಂಗ್ ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ದಿವಂಗತ ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ ಸಿಂಗ್ ಅವರಿಗೆ ವರ್ಗಾವಣೆ ಆದೇಶ ಹೊರಡಿಸಿದ್ದನ್ನು ರದ್ದುಗೊಳಿಸಲಾಗಿದ್ದು, ಇದು ತೀವ್ರ ಪಶ್ಚಾತ್ತಾಪದ ಸಂಗತಿಯಾಗಿದೆ. ಇಂತಹ ತಪ್ಪು ಅಕ್ಷಮ್ಯ ಮತ್ತು ಅದರ ಮುಖ್ಯಸ್ಥನಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಓಪಿ ಸಿಂಗ್ ಹೇಳಿದ್ದಾರೆ.












Click it and Unblock the Notifications