ಯುಪಿ: ದಲಿತ ಯುವಕನ ಮೇಲೆ ಅಮಾನುಷ ಹಲ್ಲೆ, ಖಾಸಗಿ ಅಂಗಕ್ಕೆ ಥಳಿಸಿದ ಗುಂಪು
ಲಕ್ನೋ, ಜು.10: ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಗುಂಪೊಂದು 20 ವರ್ಷದ ದಲಿತ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಯುವಕನನ್ನು ಎಳದಾಡಿ, ಕೋಲುಗಳಿಂದ ಹೊಡೆಯುವ, ಕಾಲಿಂದ ಒದೆಯುವ, ಪ್ಯಾಂಟ್ ಜಾರಿಸಿ ಖಾಸಗಿ ಅಂಗಕ್ಕೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಎರಡು ದಿನಗಳ ಹಿಂದೆ ನಡೆದು ತಡವಾಗಿ ಬೆಳಕಿಗೆ ಬಂದಿರುವ ಈ ಘಟನೆ ಕಾನ್ಪುರ್ ದೇಹತ್‌ನ ಅಕ್ಬರ್‌ಪುರ ಪ್ರದೇಶದಿಂದ ಬಂದಿದೆ.
ಇನ್ನು ''ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇತರ ಅಪರಾಧಿಗಳ ಪತ್ತೆ ಕಾರ್ಯ ನಡೆಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ,'' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುವಕನನ್ನು ಥಳಿಸಿದ ಈ ಗುಂಪು ಆತನ ಬಳಿ ಜಾತಿ ಯಾವುದೆಂದು ಕೇಳಿದ್ದು, ಯುವಕ ತನ್ನ ಜಾತಿ ಹೇಳುತ್ತಿದ್ದಂತೆ ಇನ್ನಷ್ಟು ಕ್ರೂರವಾಗಿ ಥಳಿಸಲು ಆರಂಭಿಸಿದ್ದಾರೆ.
पीटने वाला: "कौन कास्ट हो?"
— Kamal khan (@kamalkhan_NDTV) July 10, 2021
पिटने वाला: "चमार हैं."
फिर डंडों की बौछार बढ़ जाती है।उसे लात, घूसों,डंडों से बेरहमी से पीटा। जिस्म के नाज़ुक हिस्सों में डंडे घुसेड़े।कानपुर देहात में मामला प्रेम प्रसंग का बताते हैं।पुलिस ने एफ़ आई आर कर एक को पकड़ लिया है।दो की तलाश है। pic.twitter.com/BAU4QN2IiZ
ಇನ್ನು ಈ ಬಗ್ಗೆ ಎನ್‌ಡಿ ಟಿವಿಗೆ ಪ್ರತಿಕ್ರಿಯೆ ನೀಡಿದ ಕಾನ್ಪುರ್ ದೇಹತ್ ಹೆಚ್ಚುವರಿ ಎಸ್ಪಿ ಘಾನ್ಶ್ಯಾಮ್ ಚೌರಾಸಿಯಾ, ವಿಡಿಯೋ ಬಗ್ಗೆ ನಮಗೆ ತಿಳಿದ ಕೂಡಲೇ ಈ ವಿಷಯದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿತ್ತು. ವೈರಲ್ ವೀಡಿಯೊದಲ್ಲಿ ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಜನರು ದಲಿತ ಯುವಕರನ್ನು ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಇಬ್ಬರ ವಿವರವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಇಬ್ಬರ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು ಮತ್ತೊಂದು ವಿಡಿಯೋದಲ್ಲಿ ಯುವಕನ ಪ್ಯಾಂಟ್ ಅನ್ನು ಜಾರಿಸಿ ಆತನನ್ನು ಮರಕ್ಕೆ ತಳ್ಳಿ ಹಿಡಿದು, ಖಾಸಗಿ ಅಂಗಗಳಿಗೆ ಕೋಲಿನಿಂದ ಥಳಿಸಿದ್ದಾರೆ. ಯುವಕನನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಕ್ಕೂ ಮುನ್ನ, ಉತ್ತರ ಪ್ರದೇಶದದ ಲಖಿಂಪುರ ಖೇರಿಯಲ್ಲಿ ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ಅವಮಾನ ಮಾಡಿರುವ ಘಟನೆ ಲ್ಲಿ ನಡೆದಿದೆ. ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರ ಮೇಲೆ ಕೈ ಮಾಡಿ, ಬಳಿಕ ಸೀರೆ ಎಳೆದು ಅವಮಾನ ಮಾಡಿದ್ದಾರೆ, ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
(ಒನ್‌ಇಂಡಿಯಾ ಸುದ್ದಿ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications