ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UP Cabinet Minister List 2022: ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 52 ಸಚಿವರ ಸಂಪೂರ್ಣ ಪಟ್ಟಿ

|
Google Oneindia Kannada News

ಲಕ್ನೋ ಮಾರ್ಚ್ 26: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಶುಕ್ರವಾರ (ಮಾರ್ಚ್ 25) ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಆದಿತ್ಯನಾಥ್ ಜೊತೆಗೆ ಇಬ್ಬರು ಉಪ ಮುಖ್ಯಮಂತ್ರಿಗಳು ಸೇರಿದಂತೆ 52 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಕ್ನೋದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಆದಿತ್ಯನಾಥ್ ಮತ್ತು ಅವರ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಯೋಗಿ ಆದಿತ್ಯನಾಥ್ ಜೊತೆಗೆ 52 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಲ್ಲಿ ಒಟ್ಟು 18 ಕ್ಯಾಬಿನೆಟ್ ಮಂತ್ರಿಗಳನ್ನು ಮಾಡಲಾಗಿದೆ. ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಉಪ ಮುಖ್ಯಮಂತ್ರಿಗಳಾಗಿದ್ದಾರೆ. 14 ಮಂದಿಯನ್ನು ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರನ್ನಾಗಿ ಮಾಡಲಾಗಿದೆ ಮತ್ತು ನಂತರ 20 ಶಾಸಕರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಆಜಾದ್ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ, ಅವರು ಯೋಗಿ ಆದಿತ್ಯನಾಥ್ ಅವರ ಸಂಪುಟದ ಏಕೈಕ ಮುಸ್ಲಿಂ ಸಚಿವರಾಗಿದ್ದಾರೆ.

ಸಂಪುಟ ಸಚಿವರು (18)

ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್, ಸೂರ್ಯ ಪ್ರತಾಪ್ ಶಾಹಿ, ಸುರೇಶ್ ಕುಮಾರ್ ಖನ್ನಾ, ಸ್ವತಂತ್ರ ದೇವ್ ಸಿಂಗ್, ಬೇಬಿ ರಾಣಿ ಮೌರ್ಯ, ಲಕ್ಷ್ಮಿ ನಾರಾಯಣ ಚೌಧರಿ, ಜೈವೀರ್ ಸಿಂಗ್, ಧರಂಪಾಲ್ ಸಿಂಗ್, ನಂದ ಗೋಪಾಲ್ ಗುಪ್ತಾ ನಂದಿ, ಭೂಪೇಂದ್ರ, ಸಿಂಗ್ ಚೌಧರಿ, ಅನಿಲ್ ರಾಜ್‌ಭರ್, ಜಿತಿನ್ ಪ್ರಸಾದ್, ರಾಕೇಶ್ ಸಚನ್, ಅರವಿಂದ್ ಕುಮಾರ್ ಶರ್ಮಾ, ಯೋಗೇಂದ್ರ ಉಪಾಧ್ಯಾಯ, ಆಶಿಶ್ ಪಟೇಲ್ ಮತ್ತು ಸಂಜಯ್ ನಿಶಾದ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

Uttar Pradesh: Complete list of ministers of Yogi Adityanath, 52 ministers including two deputy CMs

ರಾಜ್ಯ ಸ್ವತಂತ್ರ ಉಸ್ತುವಾರಿ ಸಚಿವರು (14)

ನಿತಿನ್ ಅಗರ್ವಾಲ್, ಕಪಿಲ್ದೇವ್ ಅಗರ್ವಾಲ್, ರವೀಂದ್ರ ಜೈಸ್ವಾಲ್, ಸಂದೀಪ್ ಸಿಂಗ್, ಗುಲಾಬ್ ದೇವಿ, ಗಿರೀಶ್ ಚಂದ್ರ ಯಾದವ್, ಧರ್ಮವೀರ್ ಪ್ರಜಾಪತಿ, ಅಸೀಮ್ ಅರುಣ್, ಜೆಪಿಎಸ್ ರಾಥೋಡ್, ದಯಾಶಂಕರ್ ಸಿಂಗ್, ನರೇಂದ್ರ ಕಶ್ಯಪ್, ದಿನೇಶ್ ಪ್ರತಾಪ್ ಸಿಂಗ್, ಅರುಣ್ ಕುಮಾರ್ ಸಕ್ಸೇನಾ ಮತ್ತು ದಯಾಶಂಕರ್ ಮಿಶ್ರಾ ದಯಾಶಂಕರ್ ರಾಜ್ಯ ಸಚಿವರಾಗಿದ್ದಾರೆ.

ರಾಜ್ಯ ಸಚಿವರು (20)

ಮಾಯಂಕೇಶ್ವರ್ ಸಿಂಗ್, ದಿನೇಶ್ ಖಾತಿಕ್, ಸಂಜೀವ್ ಗೌರ್, ಬಲದೇವ್ ಸಿಂಗ್ ಓಲಾಖ್, ಅಜಿತ್ ಪಾಲ್, ಜಸ್ವಂತ್ ಸೈನಿ, ರಾಮಕೇಶ್ ನಿಶಾದ್, ಮನೋಹರ್ ಲಾಲ್ ಮನ್ನು ಕೋರಿ, ಸಂಜಯ್ ಗಂಗ್ವಾರ್, ಬ್ರಿಜೇಶ್ ಸಿಂಗ್, ಕೆಪಿ ಮಲಿಕ್, ಸುರೇಶ್ ರಾಹಿ, ಸೋಮೇಂದ್ರ ತೋಮರ್, ಅನೂಪ್ ಪ್ರಧಾನ್, ಪ್ರತಿಭಾ ಶುಕ್ಲಾ, ರಾಕೇಶ್ ರಾತೋರೆ ಗುರು, ರಜನಿ ತಿವಾರಿ, ಸತೀಶ್ ಶರ್ಮಾ, ದಾನಿಶ್ ಆಜಾದ್ ಅನ್ಸಾರಿ ಮತ್ತು ವಿಜಯ್ ಲಕ್ಷ್ಮಿ ಗೌತಮ್ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Uttar Pradesh: Complete list of ministers of Yogi Adityanath, 52 ministers including two deputy CMs

ಬಿಜೆಪಿಗೆ ದೊಡ್ಡ ಗೆಲುವು

Recommended Video

ಮುಂದಿನ‌ ಶೈಕ್ಷಣಿಕ ವರ್ಷದಿಂದ‌ ಟಿಪ್ಪು ಪಠ್ಯಕ್ಕೆ ಬ್ರೇಕ್!! ಕಾಂಗ್ರೆಸ್,BJP ಹೇಳಿದ್ದೇನು? | Oneindia Kannada

ಮಾರ್ಚ್ 10 ರಂದು ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶಗಳಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ರಾಜ್ಯದ 403 ಸ್ಥಾನಗಳ ಪೈಕಿ 274 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತವನ್ನು ಪಡೆದುಕೊಂಡಿವೆ. ಇದಾದ ನಂತರ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. 2017ರಲ್ಲೂ ಬಿಜೆಪಿ ಗೆದ್ದಿತ್ತು.

English summary
Yogi Adityanath took oath as the Chief Minister of Uttar Pradesh today. Along with Yogi Adityanath, 52 ministers including two deputy CMs have also taken oath.Complete list of ministers of Yogi Adityanath, 52 ministers including two deputy CMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X