ಉತ್ತರ ಪ್ರದೇಶದಲ್ಲಿ ಅರೆನಗ್ನ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆ
ಲಕ್ನೋ,ಫೆಬ್ರವರಿ 24: ಅರೆನಗ್ನ ಸ್ಥಿತಿಯಲ್ಲಿ, ಸುಟ್ಟ ಗಾಯಗಳೊಂದಿಗೆ ಕಾಲೇಜು ವಿದ್ಯಾರ್ಥಿನಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಹಜನಾಪುರದ ಕಾಲೇಜು ಕ್ಯಾಂಪಸ್ ನಿಂದ ಸೋಮವಾರ ನಾಪತ್ತೆಯಾಗಿದ್ದ 21 ವರ್ಷದ ವಿದ್ಯಾರ್ಥಿನಿ, ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯ ಬಳಿ ಸುಟ್ಟ ಗಾಯಗಳಿಂದ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದಾಳೆ.
ತನ್ನ ಸ್ನೇಹಿತೆ ಪಿಂಕಿಯ ಬಾವ ಮನೀಶ್ ಕರೆ ಮಾಡಿದ್ದರಿಂದ ಹೋಗಿದ್ದಾಗಿ ಪ್ರಜ್ಞೆ ಬಂದ ಬಳಿಕ ಯುವತಿ ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಆದರೆ ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದಿಲ್ಲ, ಯುವತಿಯ ಹೇಳಿಕೆಗಳು ಸಮಂಜಸವಾಗಿಲ್ಲ, ಪಿಂಕಿಗೆ ಈ ಎಲ್ಲಾ ವಿಷಯ ತಿಳಿದಿದೆ ಎಂದು ಹೇಳಿದ್ದಾಳೆ, ಆದರೆ ಪಿಂಕಿ ಈ ವಿಷಯವನ್ನು ನಿರಾಕರಿಸಿದ್ದಾಳೆ.
ತನ್ನ ಸ್ನೇಹಿತೆಯ ಬಾವ ಕರೆ ಮಾಡಿದ್ದರಿಂದ ಹೋಗಿದ್ದಾಗಿ, ಆದರೆ ಅವಳನ್ನು ಜೀವಂತವಾಗಿ ಸುಡಲು ಪ್ರಯತ್ನಿಸಿದ್ದಾಗಿ, ಹೇಗೋ ತಪ್ಪಿಸಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ.
ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ನಡೆಸುತ್ತಿರುವ ಮುಮುಕ್ಷು ಆಶ್ರಮದ ಆಶ್ರಯದಲ್ಲಿ ಬಾಲಕಿ ಎಸ್‌ಎಸ್ ಕಾಲೇಜಿನಲ್ಲಿ ಪದವಿಪೂರ್ವ ಕೋರ್ಸ್ ಓದುತ್ತಿದ್ದಳು.












Click it and Unblock the Notifications