ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಲಕ್ನೋ, ಡಿಸೆಂಬರ್ 04: ಉತ್ತರ ಪ್ರದೇಶದ ಬಿಜೆಪಿ ಮುಖಂಡರಲ್ಲೊಬ್ಬರಾಗಿದ್ದ ಪ್ರತ್ಯುಷ್ ಮಣಿ ತ್ರಿಪಾಠಿ(34) ಎಂಬುವವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಬಾದಶಾಹ್ ನಗರದಲ್ಲಿ ಸೋಮವಾರ ರಾತ್ರಿ ಅವರ ಮೇಲೆ ದದುಷ್ಕರ್ಮಿಗಳು ದಾಳಿ ನಡೆಸಿದ್ದು, ದಾಳಿಯ ನಂತರ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬದುಕಿದ್ದ ಅವರನ್ನು ದಾರಿಹೋಕರೊಬ್ಬರು ನೋಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸುಮಾರು ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆಂದು ವೈದ್ಯರು ತಿಳಿಸಿದರು.

ಮೃತರಾಗುವ ಕೆಲವೇ ಕ್ಷಣಗಳ ಮೊಸಲು ಅವರು ತಮ್ಮ ಮೇಲೆ ಹಲ್ಲೆ ನಡೆಸಿದವರು ಯಾರೆಂಬುದನ್ನು ಪತ್ನಿಗೆ ತಿಳಿಸಿದ್ದಾರೆ ಎಂದು ಅವರ ಪತ್ನಿಯೇ ಹೇಳಿದ್ದಾರೆ. ಆದರೆ ಹೆಸರುಗಳನ್ನು ಪೊಲೀಸರು ಸದ್ಯಕ್ಕೆ ಬಹಿರಂಗ ಪಡಿಸಿಲ್ಲ.

Uttar Pradesh: BJP leader stabbed to death

ಇತ್ತೀಚೆಗಷ್ಟೇ ನೆರೆಹೊರೆಯವರೊಂದಿಗೆ ಕೆಲವು ಗಲಾಟೆಯಾಗಿದ್ದರಿಂದ ಅವರೇ ತ್ರಿಪಾಠಿ ಅವರನ್ನು ಕೊಂದಿರಬಹುದು ಎಂಬ ಅನುಮಾನ ಎದ್ದಿದೆ. ತ್ರಿಪಾಠಿ ಅವರ ಹತ್ಯೆಯ ನಂತರ ಅವರ ಸಾಕಷ್ಟು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಈ ಪ್ರದೇಶದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+