ಸುಪ್ರೀಂ ಗೇಟ್ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುಪಿ ಯುವತಿ ಮೃತ್ಯು
ಲಕ್ನೋ, ಆಗಸ್ಟ್ 25: ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ತನ್ನ ಮೇಲೆ 2019 ರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ ಗೇಟ್‌ನ ಮುಂಭಾಗದಲ್ಲಿ ತನ್ನ ಮೇಲೆ ಬೆಂಕಿ ಹಾಕಿಕೊಂಡಿದ 24 ವರ್ಷದ ಯುವತಿ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಒಂದು ವಾರದ ಹಿಂದು 24 ವರ್ಷದ ಯುವತಿ ಹಾಗೂ ಆಕೆಯ ಸ್ನೇಹಿತನೋರ್ವ 2019 ರಲ್ಲಿ ಯುವತಿಯ ಮೇಲೆ ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿ ಸುಪ್ರೀಂ ಕೋರ್ಟ್ ಗೇಟ್‌ನ ಹೊರ ಭಾಗದಲ್ಲಿ ತಮ್ಮ ಮೇಲೆ ತಾವೇ ಬೆಂಕಿ ಹಾಕಿಕೊಂಡಿದ್ದರು. ಈ ಪೈಕಿ ಒಂದು ವಾರದ ಚಿಕಿತ್ಸೆ ಬಳಿಕ ಯುವತಿಯು ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ, ಇನ್ನು ಯುವತಿಯು ಸ್ನೇಹಿತನು ಶನಿವಾರವೇ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮಗಳು ತಿಳಿಸಿದೆ.
ಉತ್ತರ ಪ್ರದೇಶದ ಯುವತಿಯು ತಾನು ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ವಿರುದ್ದ ವಾರಾಣಾಸಿಯಲ್ಲಿ ದೂರು ದಾಖಲು ಮಾಡಿದ್ದಾಗಿ ಈ ಹಿನ್ನೆಲೆ ಪೊಲೀಸರು ಸಂಸದ ಅತುಲ್ ರಾಯ್ ಹಾಗೂ ಆತನ ಕುಟುಂಬಸ್ಥರನ್ನು ಬಂಧನ ಮಾಡಿದ್ದರು ಎಂದು ಹೇಳಿದ್ದರು.

ಯುವತಿಯ ದೇಹವು ಸುಮಾರು ಶೇಕಡ 85 ರಷ್ಟು ದಹನವಾಗಿದ್ದರೆ, 27 ವರ್ಷದ ಯುವಕನ ದೇಹವು ಸುಮಾರು ಶೇಕಡ 65 ರಷ್ಟು ದಹನವಾಗಿತ್ತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಬ್ಬರನ್ನು ದೆಹಲಿಯ ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಉತ್ತರ ಪ್ರದೇಶದ ಗೋಸಿ ಕ್ಷೇತ್ರದ ಬಿಎಸ್‌ಪಿ ಸಂಸದ ಅತುಲ್ ರಾಯ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪ ಮಾಡಿ ಯುವತಿಯು 2019 ರಲ್ಲಿ ಆಕೆಯ ನಿವಾಸದ ವ್ಯಾಪ್ತಿಗೆ ಒಳಬರುವ ವಾರಾಣಾಸಿಯಲ್ಲಿ ದೂರು ದಾಖಲು ಮಾಡಿದ್ದರು. ಸುಮಾರು ತಿಂಗಳುಗಳ ಕಾಲ ಪೊಲೀಸ್ ವಶದಲ್ಲಿದ್ದ ಸಂಸದರನ್ನು ಬಳಿಕ ಬಂಧನ ಮಾಡಲಾಗಿದೆ.
2020 ರ ನವೆಂಬರ್‌ನಲ್ಲಿ ಈ ಸಂಸದ ಅತುಲ್ ರಾಯ್‌ನ ಸಹೋದರ ಯುವತಿಯ ವಿರುದ್ದ ವಾರಾಣಾಸಿಯಲ್ಲಿ ನಕಲಿ ದೂರು ದಾಖಲು ಮಾಡಿದ ಆರೋಪದಲ್ಲಿ ಪೊಲೀಸ್ ದೂರು ದಾಖಲು ಮಾಡಿದ್ದರು. ಆದರೆ ಆಕೆಯು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ಕೋರ್ಟ್‌ಗೆ ಹೇಳಿದ ಹಿನ್ನೆಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಕೋರ್ಟ್ ಆಕೆಯ ವಿರುದ್ದ ಬೇಲ್ ಲಭಿಸಿದ ವಾರಂಟ್ ಜಾರಿ ಮಾಡಿತ್ತು.
ಆಗಸ್ಟ್ 16 ರಂದು ಮಹಿಳೆ ಹಾಗೂ ಆಕೆಯ ಸ್ನೇಹಿತ ದೆಹಲಿಗೆ ಬಂದಿದ್ದು ಫೇಸ್ ಬುಕ್ ಲೈವ್ ಮಾಡಿ ತಮ್ಮ ಮೇಲೆ ಬೆಂಕಿ ಹಾಕಿಕೊಂಡಿದ್ದರು. ಈ ವಿಡಿಯೋದಲ್ಲಿ ಪೊಲೀಸರು ಸಂಸದರು ಹಾಗೂ ಆತನ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು ನಮಗೆ ಯಾವುದೇ ನ್ಯಾಯ ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ತನ್ನ ವಿರುದ್ದ ಬಲಿಯಾ ಹಾಗೂ ವಾರಾಣಾಸಿ ಎರಡು ಕಡೆಗಳಲ್ಲಿ ಅರೆಸ್ಟ್ ವಾರಂಟ್ ಜಾರಿ ಮಾಡಿದ್ದಾರೆ ಎಂದಿದ್ದರು.
ಹಾಗೆಯೇ "ಅವರ ಎಲ್ಲಾ ಗುರಿಯನ್ನು ನಾವು ತಲುಪಿದ್ದೇವೆ. ಕಳೆದ ಎರಡು ವರ್ಷದಿಂದ ಅವರು ಮಾಡಿದ ಎಲ್ಲಾ ಪ್ರಯತ್ನವನ್ನು ತಿಳಿಯಲು ನಾವು ಬಂದಿದ್ದೇವೆ," ಎಂದು ಕೂಡಾ ಯುವತಿ ಹೇಳಿದ್ದರು. ಹಾಗೆಯೇ ಯುವತಿ ಈ ವಿಡಿಯೋವನ್ನು ಎಲ್ಲಿ ಮಾಡುತ್ತಿರುವುದಾಗಿ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿರಲಿಲ್ಲ ಎಂದು ಹೇಳಲಾಗಿದೆ.
ಇನ್ನು ಈ ಘಟನೆಯ ಹಿನ್ನೆಲೆ ವಾರಾಣಾಸಿಯ ಪೊಲೀಸರನ್ನು ಅಮಾನತು ಮಾಡಲಾಗಿದೆ. ಸ್ಟೇಷನ್ ಅಧಿಕಾರಿ ರಾಕೇಶ್ ಸಿಂಗ್ ಹಾಗೂ ತನಿಖಾಧಿಕಾರಿ ಗಿರಿಜಾ ಶಂಕರ್ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications