ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಚಲಿಸುತ್ತಿದ್ದ ಬೈಕ್ ನಲ್ಲಿ ಬೆಂಕಿ, ಪೊಲೀಸರಿಂದಾಗಿ ಉಳಿದ ಜೀವ!

|
Google Oneindia Kannada News

ಲಕ್ನೋ, ಏಪ್ರಿಲ್ 17: ಉತ್ತರ ಪ್ರದೇಶದ ಹೈವೆಯೊಂದರಲ್ಲಿ ಚಲಿಸುತ್ತಿದ್ದ ಬೈಕಿನಲ್ಲಿ ಬೆಂಕಿ ಕಾಣಿಸಿಕೊಂಡು, ಪೊಲೀಸರ ಸಮಯ ಪ್ರಜ್ಞೆಯಿಂದ ಕುಟುಂಬವೊಂದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಹೆದ್ದಾರಿಯೊಂದರಲ್ಲಿ ದಂಪತಿ ಮತ್ತು ಪುಟ್ಟ ಮಗು ಬೈಕಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಬೈಕಿಗೆ ಬೆಂಕಿಹೊತ್ತಿಕೊಂಡಿದೆ. ಆದರೆ ಬೈಕಿನ ಹಿಂದೆ ಬೆಂಕಿ ಹೊತ್ತಿಕೊಂಡಿದ್ದು, ಪೈಕಿನಲ್ಲಿದ್ದ ಮೂವರ ಗಮನಕ್ಕೂ ಬಂದಿಲ್ಲ. ಆದರೆ ಇದನ್ನು ಅಚಾನಕ್ಕಾಗಿ ನೋಡಿದ ಪೊಲೀಸರು ಕೂಡಲೇ ವ್ಯಾನಿನಲ್ಲಿ ಬಂಡು ಬೈಕ್ ಅನ್ನು ಚೇಸ್ ಮಾಡಿದ್ದಾರೆ.

ಮಂಡ್ಯದಲ್ಲಿ ಹೊತ್ತುರಿದ ಖಾಸಗಿ ಬಸ್, ಅದೃಷ್ಟವಶಾತ್ ಪ್ರಯಾಣಿಕರು ಪಾರುಮಂಡ್ಯದಲ್ಲಿ ಹೊತ್ತುರಿದ ಖಾಸಗಿ ಬಸ್, ಅದೃಷ್ಟವಶಾತ್ ಪ್ರಯಾಣಿಕರು ಪಾರು

ನಂತರ ಬೈಕ್ ಎದುರಲ್ಲೇ ತಮ್ಮ ವ್ಯಾನ್ ಅನ್ನು ತಂದು ನಿಲ್ಲಿಸಿ, ಸವಾರ ಬೈಕ್ ಅನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಬೈಕ್ ನಿಲ್ಲಿಸಿದ ನಂತರ, ಪೊಲೀಸರು ಬೈಕಿನ ಹಿಂದೆ ಬೆಂಕಿ ಹೊತ್ತಿಕೊಂಡಿರುವುದನ್ನು ಹೇಳಿದಾಗಲೇ ಆತನಿಗೆ ಅನಾಹುತದ ಅರಿವಾಗಿದೆ. ಕೂಡಲೇ ಬೈಕನ್ನು ಬಿಟ್ಟು ಮೂರು ಮಾರು ಓಡಿದ ಕುಟುಂಬ, ಪೊಲಿಸರಿಗೆ ಧನ್ಯವಾದ ಅರ್ಪಿಸಿದೆ.

30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ30 ಮಂದಿ ಜೀವ ಉಳಿಸಿ, ಬೆಂಕಿಯಲ್ಲಿ ಬೆಂದು ಪ್ರಾಣಬಿಟ್ಟ ಶ್ವಾನ

ಸಮಯ ಪ್ರಜ್ಞೆ ಮೆರೆದು ಒಂದು ಕುಟುಂಬವನ್ನು ಉಳಿಸಿದ ಉತ್ತರ ಪ್ರದೇಶ ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚು ವ್ಯಕ್ತವಾಗಿದೆ.

UP Police saved a family whose bike caught fire on the road

ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದರೆ, ಆರು ಸಾವಿರಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಈ ವಿಡಿಯೋವನ್ನು ಉತ್ತರ ಪ್ರದೇಶ ತುರ್ತು ಸೇವಾ ಇಲಾಖೆ ಯುಪಿ100 ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ.

English summary
UP Police saved a family whose bike caught fire on the road. The video of the incident becomes viral on social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X