ತಂದೆಯನ್ನು ಕೊಲ್ಲುವಾಗ ಮಗನಿಗೆ ಚಿಪ್ಸ್ ನೀಡಿ ಸುಮ್ಮನಿರಿಸಿದ್ದ ಪೊಲೀಸರು!

ಹಾಪುರ, ಅಕ್ಟೋಬರ್ 18: ಕೊಲೆ ಪ್ರಕರಣವೊಂದರ ವಿಚಾರಣೆ ಸಮಯದಲ್ಲಿ ಆರೋಪಿಯನ್ನು ಮೂವರು ಪೊಲೀಸರು ಸೇರಿ ಕೊಂದ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.

ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದ ತಂದೆಯೊಂದಿಗೆ ಬಂದಿದ್ದ ಮಗನನ್ನು ಠಾಣೆಯ ಎದುರುಗಡೆ ನಿಲ್ಲಿಸಿ, ಗಲಾಟೆ ಮಾಡದಂತೆ ಆತನಿಗೆ ಪೊಲೀಸರು ಚಿಪ್ಸ್ ನೀಡಿದ್ದರು ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಕಳೆದ ಒಂದೂವರೆ ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿ ಎಂದು ಪ್ರದೀಪ್ ತೋಮರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ ಪೊಲೀಸರು ಠಾಣೆಯೊಳಗೆ ಚಿತ್ರಹಿಂಸೆ ನೀಡುತ್ತಿದ್ದರು. ಠಾಣೆಯ ಹೊರಗೆ ಅಳುತ್ತ ನಿಂತಿದ್ದ 10 ವರ್ಷ ವಯಸ್ಸಿನ ಆತನ ಮಗನಿಗೆ, ಈ ವಿಷಯವನ್ನು ಯಾರಿಗೂ ಹೇಳಬಾರದು, ಗಲಾಟೆ ಮಾಡಬಾರದು ಎಂದು ಹೇಳಿ ಚಿಪ್ಸ್ ಪ್ಯಾಕೆಟ್ ವೊಂದನ್ನು ನೀಡಿದ್ದರು.

UP Police Give Chips To A Boy Whose Father Was Killed In The Custody By Them

"ಪ್ರದೀಪ್ ಅವರಿಗೆ ಪೊಲೀಸರು ಚಿತ್ರಹಿಂಸೆ ನೀಡೀ ಕೊಂದಿದ್ದಾರೆ. ಅವರ ದೇಹದ ಮೇಲಿರುವ ಗಾಯದ ಗುರುತುಗಳೇ ಅವರ ಮೇಲೆ ಹಲ್ಲೆಯಾಗಿದೆ ಎಂಬುದಕ್ಕೆ ಸಾಕ್ಷಿ" ಪ್ರದೀಪ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮೂವರು ಪೊಲೀಸರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+