• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್: ತವರಲ್ಲಿ ಪತ್ನಿ, ಖಿನ್ನತೆಯಿಂದ ಪತಿ ಆತ್ಮಹತ್ಯೆ

|

ಗೊಂಡಾ, ಏಪ್ರಿಲ್ 9: ಪತ್ನಿ ನೆನಪಲ್ಲೇ ಖಿನ್ನತೆಗೆ ಒಳಗಾಗಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಗೊಂಡಾದ ರಾಧಾ ಕುಂದ್ ಎಂಬಲ್ಲಿ ನಡೆದಿದೆ.

ಪತ್ನಿ ತವರು ಮನೆಗೆ ಹೋಗಿದ್ದಳು ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಅವರಿಗೆ ತನ್ನ ಮನೆಗೆ ವಾಪಸಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಪತಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಕೇಶ್ ಸೋನಿ(32) ಮೃತರು. ಎಷ್ಟು ದಿನಗಳಾದರೂ ಪತ್ನಿ ವಾಪಸ್ ಬಂದಿಲ್ಲ ಎನ್ನುವ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿ ತವರು ಮೆಗೆ ತೆರಳಿ ಸಾಕಷ್ಟು ದಿನಗಳು ಕಳೆದಿದ್ದವು, ಇನ್ನೇನು ಮರಳಿ ಗಂಡನ ಮನೆಗೆ ಬರಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು.ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ರಾಕೇಶ್‌ಗೆ ಮೊದಲಿನಿಂದಲೂ ಆರೋಗ್ಯ ಸಮಸ್ಯೆ ಏನಾದರೂ ಇತ್ತೇ ಎನ್ನುವ ಮಾಹಿತಿ ಕಲೆ ಹಾಕಿದ್ದಾರೆ.

ದೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. 166ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

English summary
A man allegedly committed suicide by hanging himself from the ceiling of his room as he was missing his wife stuck at her parents’ place due to the lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X