ಸಾರ್ವಜನಿಕರು ಬಿಜೆಪಿಗೆ ‘ಗೋ ಬ್ಯಾಕ್, ಗೋ’ ಎನ್ನುತ್ತಾರೆ- ಅಖಿಲೆಶ್

ಲಕ್ನೋ ಫೆಬ್ರವರಿ 15: ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯ 55 ಸ್ಥಾನಗಳಿಗೆ ಸೋಮವಾರ ಮತದಾನ ಪೂರ್ಣಗೊಂಡಿದೆ. ಎರಡನೇ ಹಂತದ ಮತದಾನ ಮುಗಿದ ತಕ್ಷಣ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಮ್ಮ ಪಕ್ಷವು ದೊಡ್ಡ ಮುನ್ನಡೆ ಸಾಧಿಸಿದೆ ಎಂದು ಹೇಳಿಕೊಂಡಿದ್ದಾರೆ. ಮೊದಲ ಎರಡು ಹಂತಗಳಲ್ಲಿ ಮತದಾನ ನಡೆದಿರುವ 113 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷಗಳು 100 ಸ್ಥಾನಗಳನ್ನು ಗೆಲ್ಲುತ್ತವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರು ಸೋಮವಾರ ಸಂಜೆ ಟ್ವೀಟ್‌ ಮಾಡಿದ್ದು, ''ಎರಡನೇ ಹಂತದಲ್ಲೂ ನಮಗೆ ಸಾರ್ವಜನಿಕರ ಬೆಂಬಲವನ್ನು ಸಿಕ್ಕಿದೆ. ಎಸ್‌ಪಿ-ಮೈತ್ರಿಕೂಟ ಎರಡು ಹಂತಗಳಲ್ಲಿ ಗೆಲ್ಲುವ ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಎರಡೂ ಹಂತಗಳಲ್ಲಿ ಪಡೆದ ಜನರ 100 ಪ್ರತಿಶತ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು! ಏಳು ಹಂತಗಳ ಪೈಕಿ ಈಗ ಎರಡು ಹಂತಗಳು ಪೂರ್ಣಗೊಂಡಿದ್ದು, ಸಾರ್ವಜನಿಕರು ಬಿಜೆಪಿಗೆ 'ಗೋ ಬ್ಯಾಕ್, ಗೋ' ಎನ್ನುತ್ತಿದ್ದಾರೆ,'' ಎಂದು ಬರೆದಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶೇ.78.94ರಷ್ಟು ಮತದಾನ
ಉತ್ತರ ಪ್ರದೇಶದ 9 ಜಿಲ್ಲೆಗಳಾದ ಸಹರಾನ್‌ಪುರ, ಬಿಜ್ನೋರ್, ಅಮ್ರೋಹಾ, ಸಂಭಾಲ್, ಮೊರಾದಾಬಾದ್, ಬರೇಲಿ, ರಾಂಪುರ, ಬದೌನ್ ಮತ್ತು ಶಹಜಹಾನ್‌ಪುರದ 55 ಕ್ಷೇತ್ರಗಳಲ್ಲಿ ನಿನ್ನೆ ಮತದಾನ ನಡೆದಿದೆ. ಎರಡನೇ ಹಂತದಲ್ಲಿ ರಾಜ್ಯದಲ್ಲಿ ಶೇ.60ಕ್ಕಿಂತಲೂ ಹೆಚ್ಚು ಮತದಾನವಾಗಿದೆ.

UP Elections: Akhilesh Yadav Said - In Two Phases We Have Scored a Century of Winning Seats

ಮೊದಲ ಹಂತದಲ್ಲಿ 58 ಸ್ಥಾನಗಳಿಗೆ ಮತದಾನ

ಫೆಬ್ರವರಿ 10 ರಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ನಡೆದಿತ್ತು. ಫೆಬ್ರವರಿ 10 ರಂದು ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳಾದ ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಘಾಜಿಯಾಬಾದ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾದ 58 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಇದುವರೆಗೆ 403 ಸ್ಥಾನಗಳ ಪೈಕಿ 113 ಸ್ಥಾನಗಳಿಗೆ ಮತದಾನವಾಗಿದೆ. ರಾಜ್ಯದಲ್ಲಿ ಇನ್ನೂ ಐದು ಹಂತದ ಮತದಾನ ಬಾಕಿ ಇದೆ. ಅದರ ನಂತರ ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

'ಪ್ರತಿ ಚುನಾವಣೆಯಲ್ಲಿ ಎಸ್‌ಪಿಗೆ ಹೊಸ ಮಿತ್ರ': ಪ್ರಧಾನಿ ಮೋದಿ ಟೀಕೆ
ಉತ್ತರ ಪ್ರದೇಶದಲ್ಲಿ 2017 ರ ವಿಧಾನಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷವು ಪ್ರಚಂಡ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿತು. 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತು. ಮತ್ತೊಂದೆಡೆ ಸಮಾಜವಾದಿ ಪಕ್ಷ 50 ಸ್ಥಾನಗಳನ್ನೂ ಪಡೆಯಲು ಸಾಧ್ಯವಾಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಮತ್ತು ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ನಡುವೆ ಪ್ರಮುಖ ಪೈಪೋಟಿ ನಡೆಯಲಿದೆ. ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಕೂಡ ಈ ಚುನಾವಣೆಯಲ್ಲಿ ದೊಡ್ಡ ಪಕ್ಷಗಳಾಗಿದ್ದು, ತಮ್ಮ ಬಲವನ್ನು ತೋರಿಸುತ್ತಿವೆ.

ಉತ್ತರಪ್ರದೇಶ ಮಾತ್ರವಲ್ಲದೆ ಉತ್ತರಾಖಂಡದ 70 ಮತ್ತು ಗೋವಾದಲ್ಲಿ 40 ಸ್ಥಾನಗಳಿಗೆ ಮತದಾನ ನಿನ್ನೆ ಮುಗಿದಿದೆ. ಯುಪಿ, ಉತ್ತರಾಖಂಡ ಮತ್ತು ಗೋವಾ ಮೂರೂ ರಾಜ್ಯಗಳ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಗೋವಾದಲ್ಲಿ ಶೇ.79 ಮತ್ತು ಉತ್ತರಾಖಂಡದಲ್ಲಿ ಶೇ.62ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲೂ ಶೇ.62ರಷ್ಟು ಮತದಾನವಾಗಿದೆ.

ಚುನಾವಣಾ ಆಯೋಗದ ಪ್ರಕಾರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಶೇ.62.5ರಷ್ಟು ಮತದಾನವಾಗಿದೆ. ಇನ್ನೂ ರಾಜ್ಯದಲ್ಲಿ ಒಟ್ಟು ಶೇ.78.94 ಮತದಾನವಾಗಿದೆ ಎಂದು ಗೋವಾ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಗೋವಾದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಸಾಂಕ್ವೆಲಿಮ್ ಕ್ಷೇತ್ರದಲ್ಲಿ ಶೇಕಡಾ 89.64 ರಷ್ಟು ಮತದಾನವಾಗಿದೆ. ಉತ್ತರ ಗೋವಾದಲ್ಲಿ ಶೇಕಡಾ 79 ಮತ್ತು ದಕ್ಷಿಣ ಗೋವಾದಲ್ಲಿ ಶೇಕಡಾ 78 ರಷ್ಟು ಮತದಾನವಾಗಿದೆ.

ಎಲ್ಲಾ ಮೂರು ರಾಜ್ಯಗಳಲ್ಲಿ ಕೆಲವು ವಿರಳ ಘಟನೆಗಳನ್ನು ಹೊರತುಪಡಿಸಿ, ಎಲ್ಲಾ ಸ್ಥಳಗಳಲ್ಲಿ ಮತದಾನ ಶಾಂತಿಯುತವಾಗಿದೆ. ಉತ್ತರಪ್ರದೇಶದಲ್ಲಿ ಕೆಲವೆಡೆ ಮತದಾರರಿಗೆ ಬೆದರಿಕೆ ಹಾಕಿ ಮತದಾನ ಮಾಡದಂತೆ ತಡೆದಿರುವ ಬಗ್ಗೆ ದೂರುಗಳು ಬಂದಿವೆ. ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವ ಬಗ್ಗೆ ಸಾಕಷ್ಟು ಮಂದಿ ದೂರು ನೀಡುತ್ತಿದ್ದು, ಆತಂಕಕ್ಕೂ ಒಳಗಾಗಿದ್ದರು. ಇವಿಎಂಗಳ ಅಸಮರ್ಪಕ ಕಾರ್ಯದಿಂದ ಮತದಾರರು ತೊಂದರೆ ಅನುಭವಿಸಿದರು. ಗೋವಾ, ಉತ್ತರಾಖಂಡ ಮತ್ತು ಯುಪಿಯ ಕೆಲವು ಸ್ಥಳಗಳಲ್ಲಿ ಇವಿಎಂ ಅಸಮರ್ಪಕ ಕಾರ್ಯದಿಂದಾಗಿ ಮತದಾರರು ತೊಂದರೆ ಎದುರಿಸಿದರು.

Recommended Video

      ಗೋವಾ, ಉತ್ತರಾಖಂಡ್, ಉತ್ತರ ಪ್ರದೇಶ ಚುನಾವಣೆ:ಬೆಳಿಗ್ಗೆಯಿಂದ‌‌ ಏನೇನಾಯ್ತು? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+