'ಪ್ರತಿ ಚುನಾವಣೆಯಲ್ಲಿ ಎಸ್‌ಪಿಗೆ ಹೊಸ ಮಿತ್ರ': ಪ್ರಧಾನಿ ಮೋದಿ ಟೀಕೆ

'ಪ್ರತಿ ಚುನಾವಣೆಯಲ್ಲಿ ಅವರು ಹೊಸ ಮಿತ್ರರನ್ನು ತರುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಸಮಾಜವಾದಿ ಪಕ್ಷವನ್ನು ಟೀಕಿಸಿದ್ದಾರೆ. ಸೋಮವಾರ ಉತ್ತರ ಪ್ರದೇಶದ ಕಾನ್ಪುರ ದೆಹತ್ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿ ಚುನಾವಣೆಯಲ್ಲೂ ವಿರೋಧ ಪಕ್ಷಕ್ಕೆ ಹೊಸ ಪಾಲುದಾರರು ಇದ್ದಾರೆ ಎಂದು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ವ್ಯಂಗ್ಯವಾಡಿದರು.

"ಪ್ರತಿ ಚುನಾವಣೆಯಲ್ಲಿ, ಈ ಜನರು ಹೊಸ ಪಾಲುದಾರರನ್ನು ಕರೆತಂದರು ಮತ್ತು ಅವರ ಮೂಲಕ ಮುನ್ನಡೆಯಲು ಪ್ರಯತ್ನಿಸುತ್ತಾರೆ. ಅವರು ಪ್ರತಿ ಚುನಾವಣೆಯಲ್ಲಿ ತಮ್ಮ ಹಳೆಯ ಸಹಚರರನ್ನು ಹೊರಹಾಕುತ್ತಾರೆ. ತಮ್ಮ ಸ್ನೇಹಿತರನ್ನು ಬದಲಾಯಿಸುತ್ತಾರೆ. ಇಂಥವರು ಉತ್ತರ ಪ್ರದೇಶದ ಜನರಿಗೆ ಸೇವೆ ಸಲ್ಲಿಸಬಹುದೇ?" ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ.

ಸಮಾಜವಾದಿ ಪಕ್ಷವು 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿ ಮಾಡಿಕೊಂಡು ಹೋರಾಡುತ್ತಿದೆ. 2017ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೋರಾಟ ನಡೆಸಿತ್ತು. ಉತ್ತರ ಪ್ರದೇಶ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಏಳು ಹಂತದ ಚುನಾವಣೆ ಮಾರ್ಚ್‌ನಲ್ಲಿ ಮುಕ್ತಾಯವಾಗಲಿದ್ದು ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

They bring a new ally every election: PM Modi takes jibe at Samajwadi Party at Kanpur rally

ಮೋದಿಯವರ 4 ತೀರ್ಮಾನಗಳು

ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಯುಪಿ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ನಾಲ್ಕು ವಿಷಯಗಳನ್ನು ಸ್ಪಷ್ಟಪಡಿಸಿದರು.

"ಮೊದಲನೆಯದಾಗಿ, ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಬರಲಿದೆ. ಎರಡನೆಯದಾಗಿ, ಪ್ರತಿ ಜಾತಿ, ವರ್ಗ, ಗ್ರಾಮ ಮತ್ತು ನಗರದ ಜನರು ಯುಪಿಯ ತ್ವರಿತ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಮತ ಹಾಕುತ್ತಿದ್ದಾರೆ. ಮೂರನೆಯದಾಗಿ, ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಬಿಜೆಪಿ ಗೆಲ್ಲಬೇಕೆಂದು ಬಯಸುತ್ತಾರೆ. ನಾಲ್ಕನೆಯದು, ಮುಸ್ಲಿಂ ಸಹೋದರಿಯರು ಮೋದಿಯನ್ನು ಆಶೀರ್ವದಿಸುತ್ತಾರೆ" ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ.

ಪಿಎಂ ಮೋದಿ ಎದುರು ದಾಳಿ

ಸಣ್ಣ ರೈತರ ಬಗ್ಗೆ ಬಿಜೆಪಿಗೆ ಮಾತ್ರ ಕಾಳಜಿ ಇದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. "ಇತರ ಪಕ್ಷಗಳು ತಮ್ಮ ಕುಟುಂಬದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತವೆ. ಅವರು ರೈತರಿಗೆ, ವಿಶೇಷವಾಗಿ ಸಣ್ಣ ರೈತರಿಗೆ ಮೋಸ ಮಾಡಿದ್ದಾರೆ. ಹಗಲು ರಾತ್ರಿ ಯುಪಿ ಲೂಟಿ ಮಾಡಿ ರಾಜ್ಯವನ್ನು ಅಪರಾಧಿಗಳು, ಗಲಭೆಕೋರರು ಮತ್ತು ಮಾಫಿಯಾಗಳಿಗೆ ಒಪ್ಪಿಸಿದರು," ಎಂದು ಅವರು ಹೇಳಿದರು.

"2017 ರ ಮೊದಲು, ಯುಪಿ ಪ್ರತಿ ದಿನವೂ ಪಡಿತರ ಹಗರಣಗಳನ್ನು ಹೊಂದಿತ್ತು. ಅವರು ಲಕ್ಷಗಟ್ಟಲೆ ನಕಲಿ ಪಡಿತರ ಚೀಟಿಗಳನ್ನು ಮಾಡಿದರು. ಈ ಡಬಲ್ ಇಂಜಿನ್ ಸರ್ಕಾರವು ನಕಲಿ ಪಡಿತರ ಚೀಟಿ ಯೋಜನೆಯನ್ನು ಕೊನೆಗೊಳಿಸಿತು. ಇಂದು, ಯುಪಿ ಸಾರ್ವಜನಿಕರು ಕೋಟಿಗಟ್ಟಲೆ ಉಚಿತವಾಗಿ ಪಡಿತರವನ್ನು ಪಡೆಯುತ್ತಿದ್ದಾರೆ. ನನ್ನ ಬಡ ಸಹೋದರಿಯರು ಮತ್ತು ತಾಯಂದಿರನ್ನು ಅದರ ಪ್ರಯೋಜನ ಪಡೆಯುತ್ತಿದ್ದಾರೆ" ಎಂದರು.

ಯುಪಿಯಲ್ಲಿ ಬಿಜೆಪಿಗೆ %80 ಮತ

ಉತ್ತರಪ್ರದೇಶದಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದ 55 ಸ್ಥಾನಗಳಿಗೆ ಬೆಳಗ್ಗೆಯಿಂದಲೇ ಮತದಾನ ನಡೆಯುತ್ತಿದೆ. ಈ ಸಮಯದಲ್ಲಿ ರಾಜಕೀಯ ತಾಪಮಾನ ತುಂಬಾ ಹೆಚ್ಚಾಗಿದೆ. ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಎನ್‌ಐಗೆ ವಿಶೇಷ ಸಂದರ್ಶನ ನೀಡಿದ್ದು, ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಮತ್ತೊಮ್ಮೆ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದಿದ್ದಾರೆ.

ಬಿಜೆಪಿ ಯಾವಾಗಲೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತದೆ ಎಂದು ನಾನು ಹಿಂದೆಯೂ ಹೇಳಿದ್ದೆ ಮತ್ತು ಇಂದಿಗೂ ಹೇಳುತ್ತಿದ್ದೇನೆ. ಹೇಳಿದ್ದು ಮಾತ್ರವಲ್ಲ ಮಾಡಿ ತೋರಿಸಿದ್ದೇವೆ. ನಾನು ಈ ಹಿಂದೆ 80 ವಿರುದ್ಧ 20 ಎಂದು ಹೇಳಿದ್ದೆ, ಅಂದರೆ 80% ಜನರು ಬಿಜೆಪಿಯೊಂದಿಗೆ ಇರುತ್ತಾರೆ ಮತ್ತು 20% ಜನರು ಎಂದಿನಂತೆ ವಿರೋಧವಾಗಿ ನಿಲ್ಲುತ್ತಾರೆ. ನಾವು ಜಾತಿ, ಮತ, ಧರ್ಮದ ಬಗ್ಗೆ ಮಾತನಾಡಿಲ್ಲ. ಈ ಎಂಬತ್ತು ಪ್ರತಿಶತ ಜನರು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮೆಚ್ಚುವವರಾಗಿದ್ದರೆ, ಇಪ್ಪತ್ತು ಪ್ರತಿಶತ ಜನರು ಪ್ರತಿಭಟನೆ, ಕೋಮು-ಗಲಭೆಯನ್ನು ಹುಟ್ಟುಹಾಕುವಂತವರು.

Recommended Video

      ಒಂದೇ ಒಂದು ವಿಕೆಟ್ ಪಡೆದ ಈತನನ್ನ RCB 10 ಕೋಟಿ ಕೊಟ್ಟು ಖರೀದಿ ಮಾಡಿದ್ಯಾಕೆ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+