ಗೆಲುವು ಸಾಧಿಸಿದರೂ ಅಖಿಲೇಶ್ ಯಾದವ್ ಫಲಿತಾಂಶ ಬಿಜೆಪಿಗೆ ಚಿಂತೆ ಯಾಕೆ?

ಲಕ್ನೋ ಮಾರ್ಚ್ 11: ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಬಹಿರಂಗಗೊಂಡಿದೆ. ಇಲ್ಲಿ ಎರಡು ವಿಚಾರಗಳು ಭಾರೀ ಚರ್ಚೆಯಲ್ಲಿವೆ. ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳಂತೆ ಬಿಜೆಪಿ ಈ ಬಾರಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮತ್ತೊಂದು ವಿಚಾರ ಸಮಾಜವಾದಿ ಪಕ್ಷ ಈ ಹಿಂದಿನ ಚುನಾವಣೆಗಿಂತ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಬಹುದೊಡ್ಡ ಪಕ್ಷವಾಗುವುದರ ಜೊತೆಗೆ ಬಿಜೆಪಿಗೆ ಸವಾಲು ಒಡ್ಡಿದೆ. ಈ ಗೆಲುವು ಬಿಜೆಪಿಗೆ ಚಿಂತೆಯನ್ನುಂಟು ಮಾಡಿದೆ. ಇನ್ನೂ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಹೀನಾಯ ಸೋಲು ಅನುಭವಿಸುವ ಮೂಲಕ ಭಾರೀ ಮುಖಭಂಗ ಎದುರಿಸುತ್ತಿವೆ.

ಮೊದಲು ವಿಜೇತರ ಬಗ್ಗೆ ಮಾತನಾಡೋಣ. ಭಾರೀ ನಿರೀಕ್ಷೆಯನ್ನುಂಟು ಮಾಡಿದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಗೆಲುವು ಸಾಧಿಸಿದೆ. ಆರಂಭದಲ್ಲಿ ಯುಪಿಯು ಪಿಎಂ ಮೋದಿಯವರ ರಾಜಕೀಯ ಆರ್ಥಿಕತೆಯ ಪ್ರಯೋಗಾಲಯವಾಗಿತ್ತು. ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಕಾಲಿಡುತ್ತಿದ್ದಂತೆ ನವೆಂಬರ್ 8, 2016ರ ನೋಟು ಅಮಾನ್ಯೀಕರಣ ಮಾಡಿತು. ಇದು ಆರ್ಥಿಕ ವಿಪತ್ತು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿತು. ಆದರೂ ಯುಪಿ ಜನ ಪ್ರಧಾನಿ ಮೋದಿಯವರನ್ನು ಗರೀಬೊನ್ ಕೆ ಮಸಿಹಾ (ದೀನ ದಲಿತರ ಪಾಲಿನ ದೇವರು) ಎಂದು ಕರೆಯಿತು. 2017ರಲ್ಲಿ ಯುಪಿಯ ಬಡವರನ್ನು ಗೆಲ್ಲುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿತು. ಮೋದಿ ಸರ್ಕಾರದ ಉಚಿತ ವ್ಯವಸ್ಥೆಯ ಮೂಲಕ ಅದನ್ನು ನಿರ್ಮಿಸಿತು.

ಬಿಜೆಪಿಗೆ ಸವಾಲ್

2019 ರಲ್ಲಿ ಜಯಂತ್ ಚೌಧರಿ ಅವರ ಆರ್‌ಎಲ್‌ಡಿ, ಅಖಿಲೇಶ್ ಯಾದವ್ ಅವರ ಎಸ್‌ಪಿ ಮತ್ತು ಮಾಯಾವತಿಯ ಬಿಎಸ್‌ಪಿ ಒಟ್ಟಾಗಿ ಮಹಾಘಟಬಂಧನ್‌ನಲ್ಲಿ ಬಿಜೆಪಿಗೆ ಸವಾಲು ಹಾಕಿದವು. ಕೆಲವು ಸಣ್ಣ ಪುಟ್ಟ ಜಾತಿಗಳನ್ನು ಒಗ್ಗೂಡಿಸಿ ಮೈತ್ರಿ ಮಾಡಿಕೊಂಡವಾದರೂ ಮೈತ್ರಿಯಲ್ಲಿ ಜಯ ಕಾಣಿಸಿಕೊಳ್ಳಲಿಲ್ಲ. ಜೊತೆಗೆ ದಲಿತ ಜಾತಿಗಳನ್ನು ಒಗ್ಗೂಡಿಸಿ ಬಿಜೆಪಿ ವಿರುದ್ಧ ಪ್ರಬಲ ಪಕ್ಷ ಕಟ್ಟುವಲ್ಲಿ ಎಸ್‌ಪಿ ಮುನ್ನಡೆ ಸಾಧಿಸಿತು. ಈ ವೇಳೆ ಹಲವು ಬಿಜೆಪಿ ನಾಯಕರೂ ಕೂಡ ಪಕ್ಷ ತೊರೆದು ಎಸ್‌ಪಿ ಸೇರಿದರು. ಚುನಾವಣೆಯ ಹೊಸ್ತಿಲಲ್ಲಿ ಇಂತಹ ಬದಲಾವಣೆಗಳನ್ನು ಯಾರೂ ಕೂಡ ನಿರೀಕ್ಷಿಸಿರಲಿಲ್ಲ.

UP Election Result 2022: Giant Win Aside, Akhilesh Yadavs Result Will Worry The BJP

ಈ ಸಮಯದಲ್ಲಿ ಎಸ್‌ಪಿಯನ್ನು ಬಹುಪಾಲು ಯಾದವ ಪಕ್ಷವಾಗಿ ನೋಡಲಾಯಿತು. ಆದರೆ ಬಿಎಸ್‌ಪಿಯನ್ನು ಜಾತವ್ ಪಕ್ಷವೆಂದು ಕರೆಯಲಾಗಿತ್ತು. ಯಾದವರು ಯುಪಿಯಲ್ಲಿ ಅತಿ ದೊಡ್ಡ OBC ಜಾತಿ ಗುಂಪುಗಳೊಂದಿಗೆ ರಾಜ್ಯದ ಜನಸಂಖ್ಯೆಯ ಸುಮಾರು 10-12 ಪ್ರತಿಶತವನ್ನು ಹೊಂದಿದ್ದಾರೆ. ಜಾತವ್‌ಗಳು ರಾಜ್ಯದಲ್ಲಿ ಅತಿ ದೊಡ್ಡ ದಲಿತ ಜಾತಿ-ಗುಂಪಾಗಿದ್ದು, ಜನಸಂಖ್ಯೆಯ ಸುಮಾರು 11 ಪ್ರತಿಶತವನ್ನು ಹೊಂದಿದ್ದಾರೆ. ಈ ಎರಡು ಜಾತಿ-ಗುಂಪುಗಳು ಮೇಲ್ಜಾತಿಗಳಿಗೆ ಸಂಬಂಧಿಸಿದಂತೆ ಉಪಜಾತಿಗಳಾಗಿವೆ. ಆದರೆ ಇತರ OBC ಮತ್ತು ದಲಿತ ಜಾತಿ-ಸಮುದಾಯಗಳಿಗೆ ಹೋಲಿಸಿದರೆ ಅವರು ಪ್ರಬಲರಾಗಿದ್ದಾರೆ.

ಬಿಜೆಪಿ ವಿರೋಧಿ ಮತಕ್ಕಾಗಿ ಅಖಿಲೇಶ್ ಪ್ರಯತ್ನ

ಎರಡು ಪ್ರಬಲ ಗುಂಪುಗಳು ಕೈಜೋಡಿಸಿ, ನಂತರ ತಮ್ಮ ಲಾಭಕ್ಕಾಗಿ ಸರ್ಕಾರಿ ಸಂಪನ್ಮೂಲಗಳನ್ನು ಮರುಹೊಂದಿಸುವ ಭಯವು ಅನೇಕ ಯಾದವ ಮತ್ತು ಜಾತವೇತರ ಜಾತಿಗಳನ್ನು ಬಿಜೆಪಿಯತ್ತ ಸೆಳೆಯಿತು. ಅದರ ಮೇಲೆ ಪಿಎಂ ಮೋದಿಯವರ ಹಿಂದುತ್ವದ ಮನವಿಯು ಕುಳಿತಿತ್ತು, ಅದು ಜಾತಿಯನ್ನು ಮೀರಿ ಸಾಮಾನ್ಯ ರಾಜಕೀಯ ಗುರುತನ್ನು ವಿಸ್ತರಿಸಿತು. ಪರಿಣಾಮ ಯುಪಿಯಲ್ಲಿ ಹಲವಾರು ದಶಕಗಳ ನಂತರ ಮೊದಲ ಬಾರಿಗೆ ಎರಡು ಕುದುರೆಗಳ ಸ್ಪರ್ಧೆಯನ್ನ ಮತ್ತೆ ಒಟ್ಟಾಗಿ ನೋಡಲಾಗುತ್ತಿದೆ.

UP Election Result 2022: Giant Win Aside, Akhilesh Yadavs Result Will Worry The BJP

ಹಾಗೆ ನೋಡಿದರೆ ಬಿಜೆಪಿಗೆ ಇದು ದೊಡ್ಡ ಸುದ್ದಿಯೇನಲ್ಲ. ಅದು ಮೂರನೇ ಎರಡರಷ್ಟು ಬಹುಮತವನ್ನು ಪಡೆದಿದ್ದರೂ, ಅದರ ಮೈತ್ರಿಕೂಟವು ಶೇಕಡಾ 6 ರಷ್ಟು ಮತಗಳನ್ನು ಕಳೆದುಕೊಂಡಿದೆ. ಆದರೆ ಅಖಿಲೇಶ್ ಯಾದವ್ ಅವರು ಮಾಯಾವತಿ ಮತ್ತು ಕಾಂಗ್ರೆಸ್‌ಗೆ ಹೆಚ್ಚಿನ ಮತಗಳನ್ನು ಕಸಿದುಕೊಂಡಿದ್ದಾರೆ ಎಂಬುದು ಬಿಜೆಪಿಯ ಚಿಂತೆಯಾಗಿದೆ. ಎಸ್‌ಪಿಯು ಬಿಜೆಪಿ-ವಿರೋಧಿ ಮತಗಳ ದೊಡ್ಡ ಭಾಗವನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸಿದೆ.

ಮುಸ್ಲಿಂ ಮತಗಳ ಕ್ರೋಢೀಕರಣ

2002 ಮತ್ತು 2014 ರ ನಡುವೆ ಯುಪಿ ಮತದಾರರು ಮೂರು ದೊಡ್ಡ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ ಮತ್ತು ಬಿಜೆಪಿ ನಡುವೆ ಹೆಚ್ಚಾಗಿ ವಿಭಜಿಸಲ್ಪಟ್ಟರು. 2014 ರಲ್ಲಿ ನರೇಂದ್ರ ಮೋದಿಯವರು ಬಿಜೆಪಿಯನ್ನು ಶೇಕಡಾ 40 ರ ಗಡಿ ದಾಟುವ ಮೂಲಕ ಆಟವನ್ನು ಬದಲಾಯಿಸಿದರು. ಎಸ್‌ಪಿ ಮತ್ತು ಬಿಎಸ್‌ಪಿ ಒಟ್ಟಿಗೆ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯುತ್ತಿದ್ದವು. ನಂತರ 2019 ರಲ್ಲಿ ಅವರ ಮೈತ್ರಿಯು ಶೇಕಡಾ 40 ಕ್ಕಿಂತ ಕಡಿಮೆ ಮತಗಳನ್ನು ಗಳಿಸಿತು. ಮತಗಳು ಅವುಗಳ ನಡುವೆ ಸಮಾನವಾಗಿ ವಿಭಜನೆಯಾದವು.

UP Election Result 2022: Giant Win Aside, Akhilesh Yadavs Result Will Worry The BJP

ಆದರೆ ಅಖಿಲೇಶ್‌ಗೆ ಇದನ್ನು ಬದಲಾಯಿಸುವುದು ತಮ್ಮ ಪಕ್ಷದ ಮತ-ಪಾಲನ್ನು 40 ಪ್ರತಿಶತದತ್ತ ಕೊಂಡೊಯ್ಯುವುದು ಮುಖ್ಯವಾಗಿತ್ತು. ಅದನ್ನು ಮಾಡಲು ಅವರು SP ಯ ಹಿಂದೆ ಸಂಪೂರ್ಣ ಮುಸ್ಲಿಂ ಮತಗಳನ್ನು ಕ್ರೋಢೀಕರಿಸುವ ಅಗತ್ಯವಿತ್ತು ಮತ್ತು ಬಿಜೆಪಿಯಿಂದ ಯಾದವೇತರ OBC ಮತಗಳನ್ನು ಮರುಪಡೆಯಬೇಕಿತ್ತು. ಅಂದುಕೊಂಡಂತೆ ಅಖಿಲೇಶ್ ಹಲವಾರು ಸಣ್ಣ ಪಕ್ಷಗಳನ್ನು ಕ್ರೂಡೀಕರಿಸಿದರು.

ಚುನಾವಣೆ ಗೆಲ್ಲಲು ಅಖಿಲೇಶ್ ಪ್ರಯತ್ನ

ಅಖಿಲೇಶ್‌ ಅವರು ಮಾಡಿದ್ದು ಸಣ್ಣ ಸಾಧನೆಯಲ್ಲ. ಚುನಾವಣೆಗೆ ಒಂದು ವರ್ಷಕ್ಕೂ ಮುನ್ನ ಕ್ರೂಢೀಕರಣದಂತಹ ಕೆಲಸಕ್ಕೆ ಅಖಿಲೇಶ್ ಕೈ ಹಾಕಿದ್ದರು. 2017ರಲ್ಲಿ ಬಿಜೆಪಿಯು ಎಸ್‌ಪಿಗಿಂತ ಶೇಕಡ 18 ರಷ್ಟು ಮುನ್ನಡೆಯನ್ನು ಹೊಂದಿತ್ತು, ಇದು 2019 ರಲ್ಲಿ ಸುಮಾರು 32 ಪ್ರತಿಶತಕ್ಕೆ ಏರಿಕೆಯಾಯಿತು. ಈಗ ಅಖಿಲೇಶ್ ಇದನ್ನು ಶೇಕಡಾ 10 ಕ್ಕಿಂತ ಕಡಿಮೆಗೊಳಿಸಿದ್ದಾರೆ. ಮೈತ್ರಿ ಮಟ್ಟದ ಮತಗಳನ್ನು ಗಮನಿಸಿದರೆ, ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಎಸ್‌ಪಿ-ಆರ್‌ಎಲ್‌ಡಿ ನೇತೃತ್ವದ ಮೈತ್ರಿ ನಡುವಿನ ಅಂತರ ಕೇವಲ 8 ಪ್ರತಿಶತ ಇದೆ. ಈ ಬಾರಿ ಬಿಜೆಪಿಯನ್ನು ಸೋಲಿಸಲು ಮೈತ್ರಿಗೆ ಶೇಕಡಾ 16 ಕ್ಕಿಂತ ಹೆಚ್ಚು ಮತ ಅಗತ್ಯವಿತ್ತು. ಆದರೆ ಇದು ಮುಂದಿನ ಚುನಾವಣೆಗೆ ಪಡೆಯಲು ಎಸ್‌ಪಿಗೆ ಸುಲಭವಾಗಬಹುದು ಎನ್ನಲಾಗುತ್ತಿದೆ. ಹೀಗಾಗಿ ಎಸ್‌ಪಿ ಅಧಿಕ ಸ್ಥಾನಗಳನ್ನು ಪಡೆದುಕೊಂಡಿರುವುದು ಬಿಜೆಪಿಗೆ ದೊಡ್ಡ ಯೋಚನೆಯಾಗಿದೆ.

UP Election Result 2022: Giant Win Aside, Akhilesh Yadavs Result Will Worry The BJP

ಎಸ್‌ಪಿಗೆ ಜಯ ಸಾಧಿಸಲು ಸಾಧ್ಯವಾಗದಿರಲು ಒಂದು ಕಾರಣವೆಂದರೆ ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ನಿಷ್ಠಾವಂತ ಮತದಾರರು ತಮ್ಮ ಪಕ್ಷಗಳಿಗೆ ಅಂಟಿಕೊಂಡಿರುವುದು. ತಮ್ಮ ಅಭ್ಯರ್ಥಿಗಳು ಪ್ರಬಲವಾಗಿರುವ ಪ್ರದೇಶದಲ್ಲಿ ಕೆಲವು ಮುಸ್ಲಿಂ ಮತಗಳು ಈ ಪಕ್ಷಗಳಿಗೆ ಹೋಗಿರಬಹುದು. ಎಸ್‌ಪಿಯ ಯಶಸ್ಸು ಕಾಂಗ್ರೆಸ್ ಮತ್ತು ಬಿಎಸ್‌ಪಿಯ ನಿಷ್ಠಾವಂತ ಕ್ಷೇತ್ರದ ಅಂಚಿನಲ್ಲಿರುವವರಿಂದ ಕೈ ಬಿಟ್ಟು ಹೋಗಿದೆ. ಇದು ಅಖಿಲೇಶ್ ಮತ್ತು ಅವರ ಪಾಲುದಾರರಿಗೆ ಬಿಜೆಪಿಯನ್ನು ಸೋಲಿಸುವ ಉತ್ತಮ ಅವಕಾಶವಿದೆ ಎಂಬ ಸಂಕೇತವನ್ನು ಕಳುಹಿಸುತ್ತದೆ. ಹೀಗಾಗಿ ಒಂದು ವೇಳೆ ಕಾಂಗ್ರೆಸ್ ಹಾಗೂ ಬಿಎಸ್‌ಪಿ ಪಕ್ಷಗಳ ಮತಗಳು ಸಂಪೂರ್ಣವಾಗಿ ಎಸ್‌ಪಿಗೆ ಸಿಕ್ಕಿದ್ದರೆ ಉತ್ತರಪ್ರದೇಶದಲ್ಲಿ ಎಸ್‌ಪಿ ಗೆಲುವು ಸಾಧಿಸುವುದರಲ್ಲಿ ಸಂಶಯವಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+