ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೇಟಿ ಬಳಿಕ ಪ್ರಧಾನಿ ಮೋದಿಗೆ ಹೃತ್ಪೂರ್ವಕ ಧನ್ಯವಾದ ತಿಳಿಸಿದ ಆದಿತ್ಯನಾಥ್

|
Google Oneindia Kannada News

ಲಕ್ನೋ, ಜೂ.12: ಉತ್ತರಪ್ರದೇಶದಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಸುದ್ದಿಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಉತ್ತಪ್ರದೇಶ ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತನ್ನನ್ನು ಭೇಟಿ ಮಾಡಲು ಬಿಡುವು ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಪ್ರಸ್ತುತ ಆಡಳಿತದ ಎರಡನೇ ಅತ್ಯಂತ ಪ್ರಭಾವಿಶಾಲಿ ಹಾಗೂ ಚಾಣಕ್ಯ ಎಂದೇ ಕರೆಸಿಕೊಳ್ಳುವ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಯೊಂದಿಗೆ ಗುರುವಾರ ಆದಿತ್ಯನಾಥ್‌ ಸುಮಾರು ಒಂದು ಗಂಟೆ ಸಭೆ ನಡೆಸಿದ್ದಾರೆ.

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿಕುತೂಹಲ ಮೂಡಿಸಿದ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ದತೆ ಆರಂಭಿಸಿದೆ. ಆದರೆ ಈ ಸಿದ್ದತೆಗೆ ಯೋಗಿ ನಾಯಕತ್ವದಲ್ಲಿ ಭುಗಿಳೆದ್ದಿರುವ ಅಸಮಾಧಾನದ ಕಾರಣ ಎಂಬ ಬಗ್ಗೆ ವರದಿಗಳು ಆಗುತ್ತಿರುವ ಮಧ್ಯೆ ಪಕ್ಷದ ಹೈಕಮಾಂಡ್ ಕರೆಗೆ ಓಗೊಟ್ಟು ಆದಿತ್ಯನಾಥ್ ಗುರುವಾರ ದೆಹಲಿಗೆ ತೆರಳಿದ್ದರು.

UP CM Adityanath expresses heartfelt thanks to PM Modi for meet

ಪ್ರಧಾನಿ ಭೇಟಿ ಬಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಯೋಗಿ ಆದಿತ್ಯನಾಥ್‌, ''ಇಂದು (ಶುಕ್ರವಾರ) ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ನವದೆಹಲಿಯಲ್ಲಿ ಸೌಜನ್ಯ ಭೇಟಿ ಮಾಡುವ ಮತ್ತು ಮಾರ್ಗದರ್ಶನ ಪಡೆಯುವ ಭಾಗ್ಯ ನನಗೆ ದೊರಕಿತು. ನಿಮ್ಮ ಕಾರ್ಯನಿರತ ದಿನಚರಿಯನ್ನು ಪೂರೈಸಲು ಸಮಯ ಮತ್ತು ಮಾರ್ಗದರ್ಶನ ನೀಡಿದ ಗೌರವಾನ್ವಿತ ಪ್ರಧಾನಿಗೆ ಹೃತ್ಪೂರ್ವಕ ಕೃತಜ್ಞತೆಗಳು'' ಎಂದು ತಿಳಿಸಿದ್ದಾರೆ.

ಇನ್ನು ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ, ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ರನ್ನು ಭೇಟಿಯಾಗಿದ್ದರೆ.

ಸಭೆಯನ್ನು ರಾಜಕೀಯವಾಗಿ ಉತ್ತರ ಪ್ರದೇಶವನ್ನು ಬಿಜೆಪಿ ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ಪೂರ್ವಸಿದ್ಧತಾ ಸಭೆ ಎಂದು ಹೇಳಲಾಗಿದ್ದರೂ, ಮೋದಿಯ ಗೆಲುವಿಗೆ ತಾನೇ ಕಾರಣ ಎಂದು ಬಿಂಬಿಸಿಕೊಳ್ಳುವ ಆದಿತ್ಯನಾಥ್‌ರ ನಿಯಂತ್ರಣಕ್ಕೆ ಈ ಸಭೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಸಂಪುಟ ಪುನಾರಚನೆ ವದಂತಿ ನಡುವೆ ಸಚಿವರೊಂದಿಗೆ ಮೋದಿ ಸರಣಿ ಸಭೆಸಂಪುಟ ಪುನಾರಚನೆ ವದಂತಿ ನಡುವೆ ಸಚಿವರೊಂದಿಗೆ ಮೋದಿ ಸರಣಿ ಸಭೆ

ಗುಜರಾತ್ ಕೋಮು ಗಲಭೆಯ ನಂತರ ಮೋದಿಯ ಹಿಂದೂ ಹೃದಯ ಸಾಮ್ರಾಟ್ ಚಿತ್ರಕ್ಕೆ ಸಾಮ್ಯತೆ ಪ್ರತಿಬಿಂಬಿಸುವ ಆದಿತ್ಯನಾಥ್ ಬಿಜೆಪಿಯ ಪ್ರಮುಖ ಆಕ್ರಮಣಕಾರಿ ಹಿಂದುತ್ವ ದಳದ ಹೊಸ ಸಂಗಾತಿ ಎಂದು ಹೇಳಲಾಗಿದೆ. ಆದಿತ್ಯನಾಥ್‌ ನಾಯಕತ್ವದ ವಿರುದ್ದ ವ್ಯಾಪಕ ಅಸಮಾಧಾನ ಹುಟ್ಟಿಕೊಂಡಿದೆ. ಆದಿತ್ಯನಾಥ್‌ ನಿರಂಕುಶಾಧಿಕಾರದ ಬಗ್ಗೆ ಅಸಮಾಧಾನವೂ ಮನೆ ಮಾಡಿದೆ.

ಇನ್ನು ಸಚಿವರು, ಶಾಸಕರು, ಸಂಸದರು ಮತ್ತು ಪಕ್ಷದ ಮುಖಂಡರ ಪ್ರತಿಕ್ರಿಯೆಯ ಆಧಾರದ ಮೇಲೆ ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಆರ್‌ಎಸ್‌ಎಸ್ ನಡೆಸಿದ ವ್ಯಾಪಕ ಪರಿಶೀಲನೆಯ ನಂತರ ಮುಖ್ಯಮಂತ್ರಿಯನ್ನು ದೆಹಲಿಗೆ ಕರೆಸಲಾಗಿದೆ ಎಂದು ತಿಳಿದು ಬಂದಿದೆ.

(ಒನ್‌ಇಂಡಿಯಾ ಸುದ್ದಿ)

English summary
Uttar pradesh Chief Minister Adityanath expresses heartfelt thanks to Prime Minister Narendra Modi for meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X