ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್ ಚುನಾವಣೆ; ಮೋದಿ ಕ್ಷೇತ್ರದಲ್ಲಿ ಎರಡು ಸ್ಥಾನ ಗೆದ್ದ ಎಸ್ಪಿ!

|
Google Oneindia Kannada News

ವಾರಣಾಸಿ, ಡಿಸೆಂಬರ್ 6: ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಣಾಸಿಯಿಂದ ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು 2 ಸ್ಥಾನದಲ್ಲಿ ಜಯಗಳಿಸಿದ್ದಾರೆ.

ಉತ್ತರ ಪ್ರದೇಶದ ವಿಧಾನ ಪರಿಷತ್ತಿಗೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಿಂದ ಸದಸ್ಯರನ್ನು ಆಯ್ಕೆ ಮಾಡಲು ಡಿಸೆಂಬರ್ 1 ರಂದು ಚುನಾವಣೆ ನಡೆದಿತ್ತು. ಪದವೀಧರ ಕ್ಷೇತ್ರದಿಂದ 5 ಮತ್ತು ಶಿಕ್ಷಕರ ಕ್ಷೇತ್ರದಿಂದ 5 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು.

ವಾರಣಾಸಿ 'ಸಂಸದ' ಮೋದಿಗೆ ಹೈಕೋರ್ಟಿನಿಂದ ನೋಟಿಸ್ವಾರಣಾಸಿ 'ಸಂಸದ' ಮೋದಿಗೆ ಹೈಕೋರ್ಟಿನಿಂದ ನೋಟಿಸ್

ವಾರಣಾಸಿ ವಿಭಾಗದ ಪದವೀಧರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಶುತೋಷ್ ಸಿನ್ಹಾ ಮತ್ತು ಶಿಕ್ಷಕರ ಕ್ಷೇತ್ರದಿಂದ ಲಾಲ್ ಬಿಹಾರಿ ಯಾದವ್ ಗೆಲುವು ಸಾಧಿಸಿದ್ದಾರೆ.

ಮೋದಿ ಪರ ಪ್ರಚಾರ, ಸಿಟಿ ರವಿ 'ವಾರಣಾಸಿ ಡೈರೀಸ್' ಪುಟಗಳು ಮೋದಿ ಪರ ಪ್ರಚಾರ, ಸಿಟಿ ರವಿ 'ವಾರಣಾಸಿ ಡೈರೀಸ್' ಪುಟಗಳು

SP Bagged Two Seat At Narendra Modis Bastion Varanasi In Legislative Council Elections

ಪದವೀಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷ ತಲಾ 2 ಸ್ಥಾನಗಳಲ್ಲಿ ಜಯಗಳಿಸಿವೆ. ಆಗ್ರಾ ವಿಭಾಗದಲ್ಲಿ ಬಿಜೆಪಿಯ ಮನ್ವೀಂದ್ರ ಪ್ರತಾಪ್ ಸಿಂಗ್, ಮೀರತ್ ವಿಭಾಗದಿಂದ ದಿನೇಶ್ ಘೋಯೆಲ್ ಜಯಗಳಿಸಿದರು.

ವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿವ್ಯಕ್ತಿ ಚಿತ್ರ : ವಾರಣಾಸಿ ಸಂಸದ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ

ಶುಕ್ರವಾರ ಒಟ್ಟು 6 ಶಿಕ್ಷಕರ ಕ್ಷೇತ್ರದ ಫಲಿತಾಂಶ ಸಹ ಘೋಷಣೆಯಾಗಿದೆ. ಇದರಲ್ಲಿ ಬಿಜೆಪಿ 3 ಸೀಟು, ಎಸ್‌ಪಿ 2, ಪಕ್ಷೇತರ ಅಭ್ಯರ್ಥಿಗಳು 2 ಸೀಟು ಗೆದ್ದಿದ್ದಾರೆ. ಆಗ್ರಾ ಮತ್ತು ಫೈಸಾಬಾದ್ ಶಿಕ್ಷಕರ ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿವೆ.

ಒಟ್ಟು 11 ಸ್ಥಾನಗಳಿಗೆ ಡಿಸೆಂಬರ್ 1ರಂದು ಚುನಾವಣೆ ನಡೆದಿತ್ತು. ಬಿಜೆಪಿ, ಎಸ್‌ಪಿ, ಕಾಂಗ್ರೆಸ್ ಸೇರಿದಂತೆ 199 ಅಭ್ಯರ್ಥಿಗಳು ಕಣದಲ್ಲಿದ್ದರು. ಮೇ 6ರಂದು ತೆರವಾದ ಕ್ಷೇತ್ರಗಳಿಗೆ ಈಗ ಚುನಾವಣೆ ನಡೆದಿತ್ತು.

English summary
Samajwadi party candidate Ashutosh Sinha and Lal Bihari Yadav won from the Varanasi in the Uttar Pradesh Legislative Council elections. Varanasi represent by prime minister Narendra Modi in loksabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X