ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋ: ಹೊಸ ಸಂಘಟನೆ ರಚನೆಯ ಬಗ್ಗೆ ಶಿವಪಾಲ್ ಯಾದವ್ ಘೋಷಣೆ

|
Google Oneindia Kannada News

ಲಕ್ನೋ, ಸೆ. 1: ಯಾದವ ಸಮುದಾಯದಲ್ಲಿ ಹೊಸ ಸಂಘಟನೆಯನ್ನು ರಚಿಸುವುದಾಗಿ ಪ್ರಗತಿಶೀಲ ಸಮಾಜವಾದಿ ಪಕ್ಷದ ಲೋಹಿಯಾ ಸಂಸ್ಥಾಪಕ ಶಿವಪಾಲ್ ಯಾದವ್ ಗುರುವಾರ ಘೋಷಿಸಿದ್ದಾರೆ. ಈ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಯಾದವ್ ಪುನರುಜ್ಜೀವನ ಮಿಷನ್ ಯಾವುದೇ ರಾಜಕೀಯ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿಲ್ಲ ಎಂದು ಯಾದವ್ ಹೇಳಿದರು. ಶಿವಪಾಲ್ ಸಂಸ್ಥೆಯ ಪೋಷಕರಾಗಿದ್ದರೆ, ಸಂಭಾಲ್‌ನ ಮಾಜಿ ಸಂಸದ ಡಿಪಿ ಯಾದವ್ ಅಧ್ಯಕ್ಷರಾಗಿದ್ದರೆ, ಬರಹಗಾರ ವಿಶ್ವಾತ್ಮ ಮಿಷನ್‌ನ ಸ್ಥಾಪಕ ಸದಸ್ಯರಾಗಿರುತ್ತಾರೆ ಎಂದು ಅವರು ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಪಾಲ್ ಯಾದವ್ ಅವರು, "ನಾವು ಶೀಘ್ರದಲ್ಲೇ ರಾಜ್ಯ ಮತ್ತು ದೇಶಾದ್ಯಂತ ಮಿಷನ್‌ನ ಘಟಕವನ್ನು ರಚಿಸುತ್ತೇವೆ" ಎಂದು ಹೇಳಿದರು. ಹೊಸ ಸಂಘಟನೆಯು ಕೈಗೆತ್ತಿಕೊಳ್ಳಲಿರುವ ವಿಷಯಗಳಲ್ಲಿ ಜಾತಿ ಗಣತಿಯನ್ನು ನಡೆಸುವ ಬೇಡಿಕೆ ಮತ್ತು ಇತರರ ಹೊರತಾಗಿ 'ಅಹಿರ್ (ಯಾದವ್) ರೆಜಿಮೆಂಟ್' ರಚನೆಯ ಬೇಡಿಕೆಯನ್ನು ಒಳಗೊಂಡಿದೆ. ಯಾದವರನ್ನು ಸಮಾಜವಾದಿ ಪಕ್ಷದ ಕೋರ್ ವೋಟ್ ಬ್ಯಾಂಕ್ ಎಂದು ಪರಿಗಣಿಸಲಾಗಿದೆ ಮತ್ತು ಹೊಸ ಸಂಘಟನೆಯ ರಚನೆಯು ಸಮುದಾಯವನ್ನು ಓಲೈಸುವ ಒಂದು ಸ್ಪಷ್ಟ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಅಖಿಲೇಶ್ ಯಾದವ್‌ಗೆ ಬೇಸರ ತಂದ ಆ ಒಂದು ವಿಚಾರ

ಅಖಿಲೇಶ್ ಯಾದವ್‌ಗೆ ಬೇಸರ ತಂದ ಆ ಒಂದು ವಿಚಾರ

ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್ ಹಾಗೂ ಶಿವಪಾಲ್ ಯಾದವ್ ಭೇಟಿ ಮಾಡಿದ್ದರು. ಅಖಿಲೇಶ್ ಯಾದವ್ ಸಿಎಂ ಆದಾಗ ಒಡೆದು ಹೋಗಿದ್ದ ಇವರಿಬ್ಬರ ಸಂಬಂಧ ಮತ್ತೆ ಚಿಗುರೊಡೆದಿತ್ತು. ಇವರಿಬ್ಬರು ಒಟ್ಟಾಗಿ ವಿಧಾನಸಭೆ ಚುನಾವಣೆ ಎದುರಿಸುತ್ತಾರೆ ಎನ್ನುವಷ್ಟರಲ್ಲಿ ಮುಲಾಯಂ ಸಿಂಗ್ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರಿದರು. ಇದರಿಂದ ಅಖಿಲೇಶ್ ಯಾದವ್‌ಗೆ ಬೇಸರ ತಂದಿತು. ಚುನಾವಣೆ ಹೊಸ್ತಿಲಲ್ಲಿ ಅಪರ್ಣಾ ಯಾದವ್ ಎಸ್‌ಪಿ ಬಿಟ್ಟು ಬಿಜೆಪಿ ಸೇರಿದ್ದು ಪಕ್ಷದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಯಿತು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇಬ್ಬರೂ ನಾಯಕರು ಒಗ್ಗೂಡಿದ ತಿಂಗಳುಗಳ ನಂತರ ಸಮಾಜವಾದಿ ನಾಯಕ ಇತ್ತೀಚೆಗೆ ತನ್ನ ಸೋದರಳಿಯ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಬೇರ್ಪಟ್ಟಿದ್ದರು.

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ

ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಹಾಗೂ ಅಖಿಲೇಶ್​ ಯಾದವ್​ ಅವರ ತಮ್ಮ (ಸಹೋದರ) ಪ್ರತೀಕ್ ಯಾದವ್​ ಅವರ ಪತ್ನಿ ಅಪರ್ಣಾ ಯಾದವ್​. ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವಿನ ಕೌಟುಂಬಿಕ ಕಲಹ ಕೊನೆಗೊಂಡಿರುವ ಸಮಯದಲ್ಲಿ ಅಪರ್ಣಾ ಯಾದವ್ ಅವರ ಬಿಜೆಪಿ ಸೇರುವ ನಿರ್ಧಾರವು ಸಮಾಜವಾದಿ ಪಕ್ಷಕ್ಕೂ ಆಶ್ಚರ್ಯವನ್ನುಂಟು ಮಾಡಿತು. ಇವರೊಂದಿಗೆ ಶಿವಪಾಲ್ ಕೂಡ ಬಿಜೆಪಿ ಸೇರುತ್ತಾರೆನ್ನುವ ಮಾತುಗಳು ಕೇಳಿಬಂದಿದ್ದವು. ಈ ಊಹಾಪೋಹಗಳಿಗೆ ಸದ್ಯ ಶಿವಪಾಲ್ ತೆರೆ ಎಳೆದಿದ್ದರಾದರೂ ಅಖಿಲೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಲಿಲ್ಲ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇಬ್ಬರೂ ನಾಯಕರು ಒಗ್ಗೂಡಿದ ತಿಂಗಳುಗಳ ನಂತರ ಸೋದರಮಗ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಅವರೊಂದಿಗೆ ಬೇರ್ಪಟ್ಟಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ ಇವರಿಬ್ಬರ ಭೇಟಿ ಮತ್ತೆ ಒಂದಾಗುವ ಮನ್ಸೂಚನೆಯನ್ನು ನೀಡಿತ್ತು. ಆದರೆ ಅದ್ಯಾಕೋ ಅಖಿಲೇಶ್ ಯಾದವ್ ಶಿವಪಾಲ್ ಅವರನ್ನು ಪಕ್ಷಕ್ಕೆ ಒಗ್ಗೂಡಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಹೀಗಿದ್ದರೂ ಬಿಜೆಪಿ ವಿರುದ್ಧ ಗೆಲ್ಲಲ್ಲು ಶಿವಪಾಲ್ ಎಸ್‌ಪಿಗೆ ಬೆಂಬಲ ಸೂಚಿಸಿದ್ದರು.

ಸಮಾಜವಾದಿ ಪಕ್ಷಕ್ಕೆ ಸೇರಿದ್ದ ಶಿವಪಾಲ್

ಸಮಾಜವಾದಿ ಪಕ್ಷಕ್ಕೆ ಸೇರಿದ್ದ ಶಿವಪಾಲ್

ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ್ ಯಾದವ್ ನಡುವೆ 2017ರ ಚುನಾವಣೆಗೂ ಮುನ್ನ ಕೌಟುಂಬಿಕ ಭಿನ್ನಾಭಿಪ್ರಾಯದಿಂದ ಶಿವಪಾಲ್ ಯಾದವ್ ಎಸ್‌ಪಿ ತೊರೆದು ಪ್ರತ್ಯೇಕ ಪಕ್ಷ ಕಟ್ಟಿದ್ದರು. ಆದರೆ ಈ ಬಾರಿ ಬಿಜೆಪಿಯನ್ನು ಎದುರಿಸಲು ಅಖಿಲೇಶ್ ಯಾದವ್ ಅವರ ಅತಂತ್ರ ಮೈತ್ರಿಕೂಟಕ್ಕೆ ಸೇರ್ಪಡೆಯಾದರು. ಆದರೆ ಅಧಿಕೃತವಾಗಿ ಅಖಿಲೇಶ್ ಯಾದವ್ ಶಿವಪಾಲ್ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆಂದು ಘೋಷಣೆಮಾಡಲಿಲ್ಲ. ಅಂದಿನಿಂದ ಸಮಾಜವಾದಿ ಪಕ್ಷದ ಮೇಲೆ ಬೇಸರಗೊಂಡಿದ್ದ ಶಿವಪಾಲ್ ಸದ್ಯ ಹೊಸ ಸಂಘಟನೆಯನ್ನು ಕಟ್ಟಲು ಮುಂದಾಗಿದ್ದಾರೆ.

ಬಿಜೆಪಿಗೆ ಗೆಲವು

ಬಿಜೆಪಿಗೆ ಗೆಲವು

ಇದೇ ವರ್ಷ ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಿತು. ಮಾರ್ಚ್ 10 ರಂದು ಮತ ಎಣಿಕೆ ಮಾಡಲಾಯಿತು. ಇದರಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಭರ್ಜರಿ ಜಯ ಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರು. ಆದರೆ ಸಮಾಜವಾದಿ ಪಕ್ಷ ಬಿಜೆಪಿಯೊಂದಿಗೆ ತೀವ್ರ ಪೈಪೋಟಿ ನೀಡಿ ಎರಡನೇ ಸ್ಥಾನ ಪಡೆದುಕೊಂಡಿತು.

English summary
Progressive Samajwadi Party Lohia founder Shivpal Yadav on Thursday announced the formation of a new organization in the Yadav community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X