ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್: ಸಂಸದೆ ರಾಜೀನಾಮೆ

|
Google Oneindia Kannada News

Recommended Video

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಿಗ್ ಶಾಕ್..! | Oneindia Kannada

ಲಕ್ನೋ, ಡಿಸೆಂಬರ್ 06: ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಉತ್ತರ ಪ್ರದೇಶದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಉತ್ತರ ಪ್ರದೇಶದ ಬಹ್ರೈಚ್ ನ ಸಂಸದೆಯಾಗಿದ್ದ ಸಾವಿತ್ರಿಬಾಯಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ವಲಯದಲ್ಲಿ ಆಘಾತ ಸೃಷ್ಟಿಸಿದ್ದಾರೆ.

"ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಆದ್ದರಿಂದ ನಾನು ಈ ಪಕ್ಷದಲ್ಲಿ ಇರಲು ಇಷ್ಟಪಡುವುದಿಲ್ಲ" ಎಂದು ರಾಜೀನಾಮೆ ನೀಡಿದ ನಂತರ ಅವರು ಹೇಳಿದ್ದಾರೆ.

ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!

2012 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಸಾವಿತ್ರಿ ಅವರು, 2014 ರ ಲೋಕಸಭಾ ಚುನಾವಣೆಯಲ್ಲಿ ಬಹ್ರೈಚ್ ನಿಂದ ಸ್ಪರ್ಧಿಸಿ ಗೆದ್ದಿದ್ದರು.

ರಾಜೀನಾಮೆಗೆ ಕಾರಣವೇನು?

ರಾಜೀನಾಮೆಗೆ ಕಾರಣವೇನು?

"ನಾನು ಇಂದು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. ದಲಿತರು ಮತ್ತು ಹಿಂದುಳಿದವರ ಪರ ಇರುವ ಸಂವಿಧಾನ ಮತ್ತು ಮೀಸಲಾತಿಯನ್ನು ಅಳಿಸಿಹಾಕಲು ಪಿತೂರಿ ನಡೆಯುತ್ತಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ" ಆದ್ದರಿಂದ ನಾನು ಈ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಾಧ್ವಿ ಫುಲೆ ಹೇಳಿದ್ದಾರೆ.

ರಾಜೀನಾಮೆ ವದಂತಿ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ

ವಿವಾದ ಸೃಷ್ಟಿಸಿದ್ದ ಫುಲೆ

ವಿವಾದ ಸೃಷ್ಟಿಸಿದ್ದ ಫುಲೆ

ಇತ್ತೀಚೆಗಷ್ಟೇ ದಲಿತ ಮತ್ತು ಭಗವಂತ ಹನುಮನ ಬಗ್ಗೆ ಫುಲೆ ಅವರು ನೀಡಿದ ಹೇಳಿಕೆ ವಿವಾದ ಸೃಷ್ಟಿಸಿತ್ತು. ದಲಿತರು ಮತ್ತು ಹಿಂದುಳಿದ ವರ್ಗದವರು ಮಂಗಗಳು, ರಾಕ್ಷಸರು ಹನುಮಾನ್ ದಲಿತ ಮತ್ತು ಮನುವಾದಿ ಜನರ ಗುಲಾಮ ಎಂಬ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಪರಿಕ್ಕರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ: 48 ಗಂಟೆಗಳ ಗಡುವು ಪರಿಕ್ಕರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ: 48 ಗಂಟೆಗಳ ಗಡುವು

ದಲಿತರನ್ನೇಕೆ ಮನುಷ್ಯರಂತೆ ನೋಡಲ್ಲ?

ದಲಿತರನ್ನೇಕೆ ಮನುಷ್ಯರಂತೆ ನೋಡಲ್ಲ?

ಹನುಮಂತ ಎಲ್ಲವನ್ನೂ ರಾಮನಿಗಾಗಿ ಮಾಡಿದರೂ ಆತನನ್ನು ರಾಮ ಎಂದಿಗೂ ಮನುಷ್ಯನಂತೆ ನೋಡಲಿಲ್ಲ. ಅವನನ್ನು ಮಂಗನೆಂದೇ ನೋಡಲಾಯಿತು. ನಾವು ದಲಿತರನ್ನೇಕೆ ಎಂದಿಗೂ ಮನುಷ್ಯರಂತೆ ನೋಡುವುದಿಲ್ಲ ಎಂದು ಅವರು ಪ್ರಶ್ನಿಸಿದ್ದರು.

ಬಿಜೆಪಿಗೆ ಬಿಗ್ ಶಾಕ್

ಬಿಜೆಪಿಗೆ ಬಿಗ್ ಶಾಕ್

2019 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮುನ್ನ ಇದು ಬಿಜೆಪಿಗೆ ಅತೀ ದೊಡ್ಡ ಶಾಕ್ ಎನ್ನಿಸಿದೆ. ಫುಲೆ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಾರಾ? ಸ್ಪರ್ಧಿಸಿದರೂ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ? ಈ ಹೊತ್ತಿನಲ್ಲಿ ಬಿಜೆಪಿಯ ಪ್ರಮುಖ ನಾಯಕರು ರಾಜೀನಾಮೆ ನೀಡುತ್ತಿರುವುದು ಪಕ್ಷಕ್ಕೆ ಸಾಕಷ್ಟು ನಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

English summary
Savitribai Phule, BJP MP from Bahraich, Uttar Pradesh resigns from the party, says 'BJP is trying to create divisions in society'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X