• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಜಾಫರ್ ನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನಿಗೆ ಗುಂಡೇಟು

|

ಮುಜಾಫರ್ ನಗರ(ಉತ್ತರಪ್ರದೇಶ), ಆಗಸ್ಟ್ 30: ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೊಬ್ಬನಿಗೆ ಶುಕ್ರವಾರ ಬೆಳಗ್ಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಆರೆಸ್ಸೆಸ್ ಕಾರ್ಯಕರ್ತನನ್ನು ಹಾಬಿಬ್ ಪುರ್ ಗ್ರಾಮದ ನಿವಾಸಿ ಸೋಂಪಾಲ್ ಸೈನಿ ಎಂದು ಗುರುತಿಸಲಾಗಿದೆ. ಹಾಬಿಬ್ ಪುರದ ಆರೆಸ್ಸೆಸ್ ಘಟಕದ ಮುಖ್ಯಸ್ಥರಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಸೋಂಪಾಲ್ ಅವರನ್ನು ಮೀರತ್ ಆಸ್ಪತ್ರೆಗೆ ಸೇರಿಸಲಾಗಿದೆ.

ಅಸ್ಪೃಶ್ಯತೆ ಶುರುವಾಗಿದ್ದು ಮುಸ್ಲಿಮರು ಬಂದ ಬಳಿಕ: ಆರೆಸ್ಸೆಸ್ ಮುಖಂಡ

ಸೋಂಪಾಲ್ ಆರೋಗ್ಯ ಸ್ಥಿತಿ ಗಂಭೀರವಾಗಿ, ಗುಂಡೇಟಿನಿಂದ ತೀವ್ರ ರಕ್ತಸ್ರಾವವಾಗಿದೆ ಎಂದು ಫುಗನ ಪೊಲೀಸ್ ಅಧಿಕಾರಿ ಸಿದ್ದಾರ್ಥ ತೋಮರ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಹಾಬೀರ್ ಪುರದ ನಿವಾಸಿಗಳು, ಆರೆಸ್ಸೆಸ್ ಘಟಕದ ಮುಖ್ಯಸ್ಥರ ಹೇಳಿಕೆಯನ್ನು ಪಡೆಯಲಾಗಿದೆ, ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

English summary
An RSS activist was allegedly shot at by unidentified people in Uttar Pradesh's Muzaffarnagar district on Friday, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X