ಸಿಎಂ ಯೋಗಿ ಅಧಿಕಾರಾವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಅರ್ಧದಷ್ಟು ಕಡಿಮೆ- ಅಮಿತ್ ಶ್ಲಾಘನೆ
ಲಕ್ನೋ ಫೆಬ್ರವರಿ 25: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಐದು ವರ್ಷಗಳ ಆಡಳಿತದಲ್ಲಿ ಅತ್ಯಾಚಾರ ಪ್ರಕರಣಗಳು ಶೇಕಡಾ 50 ರಷ್ಟು ಕಡಿಮೆಯಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಪ್ರತಾಪ್‌ಗಢದ ರಾಮ್‌ಪುರ್ ಖಾಸ್ ಪ್ರದೇಶದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಯೋಗಿ ಆದಿತ್ಯನಾಥ್ ಅವರ ಸರ್ಕಾರವು ರಾಜ್ಯದಲ್ಲಿ ಮಾಫಿಯಾ ರಾಜ್ ಅನ್ನು ಕೊನೆಗೊಳಿಸಿತು ಮತ್ತು ಹಿಂಸಾತ್ಮಕ ಅಪರಾಧಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದರು.
"ಡಕಾಯಿತಿ ಶೇಕಡಾ 72 ರಷ್ಟು ಕಡಿಮೆಯಾಗಿದೆ. ಲೂಟಿ ಶೇಕಡಾ 62 ರಷ್ಟು ಕಡಿಮೆಯಾಗಿದೆ. ಕೊಲೆಗಳು ಶೇಕಡಾ 31 ರಷ್ಟು, ಅಪಹರಣ ಶೇಕಡಾ 29 ರಷ್ಟು, ಅತ್ಯಾಚಾರ ಪ್ರಕರಣಗಳು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಇದನ್ನು ಬಿಜೆಪಿ ಸರ್ಕಾರ ಮಾಡಿದೆ" ಎಂದು ಶಾ ಹೇಳಿದರು. ಕ್ರಿಮಿನಲ್ ಅಂಶಗಳ ಪೋಷಣೆಗೆ ಹಿಂದಿನ ಎಸ್‌ಪಿ ಮತ್ತು ಬಿಎಸ್‌ಪಿ ಸರ್ಕಾರಗಳು ಕಾರಣವೆಂದು ಅವರು ಹೇಳಿದರು ಮತ್ತು ಅಪರಾಧಿಗಳು ಕಂಬಿಗಳ ಹಿಂದೆ ಉಳಿಯಲು ಜನರು ಬಯಸಿದರೆ ಬಿಜೆಪಿಗೆ ಮತ ಹಾಕುವಂತೆ ಕೇಳಿಕೊಂಡರು.
ಯುಪಿ ಭಯೋತ್ಪಾದಕರ ಸ್ವರ್ಗವಾಗಲು ಕಾಂಗ್ರೆಸ್ ಎಸ್‌ಪಿ ಕಾರಣ ಎಂದ ಅಮಿತ್ ಶಾ
ಈ ಎಸ್‌ಪಿ-ಬಿಎಸ್‌ಪಿ, ಬಿಎಸ್‌ಪಿ-ಎಸ್‌ಪಿ, ಸರ್ಕಾರಗಳು ರಾಜ್ಯವನ್ನು ಬಲಿಷ್ಠರು ಮತ್ತು ಮಾಫಿಯಾದ ನಿಯಂತ್ರಣಕ್ಕೆ ತಳ್ಳಿದವು. ಬಿಜೆಪಿ ಸರ್ಕಾರವು ಕೇವಲ ಐದು ವರ್ಷಗಳಲ್ಲಿ ರಾಜ್ಯವನ್ನು ಮಾಫಿಯಾದಿಂದ ಮುಕ್ತಗೊಳಿಸಿತು. ಮಾಯಾವತಿಯನ್ನು 'ಬುವಾ' ಮತ್ತು ಅಖಿಲೇಶ್ ಯಾದವ್ ಅವರನ್ನು 'ಭಟಿಜಾ' ಎಂದು ಉಲ್ಲೇಖಿಸಿ ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಪ್ರಕಾರ ಮಾಫಿಯಾದಿಂದ ಅತಿಕ್ರಮಣಗೊಂಡ 2000 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಭೂಮಿಯನ್ನು ಹಿಂಪಡೆದು ಅಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರಿಗೆ ಎರಡು ವರ್ಷಗಳ ಕಾಲ ಉಚಿತ ಪಡಿತರವನ್ನು ಒದಗಿಸಿ, ಎಣ್ಣೆ ಸಾಮಾಗ್ರಿಗಳನ್ನು ನೀಡಲಾಯಿತು ಎಂದು ಅಮಿತ್ ಹೇಳಿಕೊಂಡರು.
ಯುಪಿ: ಐದನೇ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲಾದ ಆದಿವಾಸಿಗಳು
ಕೃಷಿ ಸಮುದಾಯಕ್ಕೆ ಅವರು ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದನ್ನು ಖಚಿತಪಡಿಸಿ, ಬಿಜೆಪಿ ಗೆದ್ದರೆ ರೈತರು ಯಾವುದೇ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರವು ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟಿ ಮತ್ತು ಯುವಜನರಿಗೆ ಲ್ಯಾಪ್‌ಟಾಪ್/ಟ್ಯಾಬ್ಲೆಟ್‌ಗಳನ್ನು ಶಿಕ್ಷಣಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಯುಪಿಯಲ್ಲಿ ಐದನೇ ಹಂತದ ವಿಧಾನಸಭಾ ಚುನಾವಣೆಯು ಫೆಬ್ರವರಿ 27 ರಂದು ನಡೆಯಲಿದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಐದನೇ ಹಂತದಲ್ಲಿ ಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕೊನೆಯ ಕ್ಷಣದ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮತದಾನಕ್ಕೆ ಒಳಪಟ್ಟಿರುವ ಚಿತ್ರಕೂಟದ ಮೌ-ಮಾಣಿಕಪುರ ಬ್ಲಾಕ್‌ನಲ್ಲಿನ ಚಿತ್ರಣ ಸ್ವಲ್ಪ ವಿಭಿನ್ನವಾಗಿದೆ. ಅಪ್ನಾ ದಳದ ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಅವರ ಈ ಕ್ಷೇತ್ರವು 40,000 ಬುಡಕಟ್ಟು ಜನಾಂಗದವರಿಗೆ ನೆಲೆಯಾಗಿದೆ. ಆದರೆ ಅವರು ಇಲ್ಲಿ ನಿರಾಶ್ರಿತರಾಗುತ್ತಾರೆ ಎಂಬ ನಿರಂತರ ಭಯದಲ್ಲಿ ವಾಸಿಸುತ್ತಿದ್ದಾರೆ. ಏಕೆಂದರೆ ಅರಣ್ಯ ಇಲಾಖೆಯು 2021 ರ ಅಂತ್ಯದಿಂದ ಹೊರಹಾಕುವಿಕೆ ನೋಟಿಸ್‌ಗಳೊಂದಿಗೆ ಅವರನ್ನು ಹಿಂಡಿಹಿಪ್ಪೆಯನ್ನಾಗಿಸಿದೆ. 230 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಮಾಣಿಕ್‌ಪುರ ಮೌ ಬ್ಲಾಕ್‌ನಲ್ಲಿ ವಿಂಗಡಿಸಲಾಗಿದೆ. ಇದು ರಾಣಿಪುರ ವನ್ಯಜೀವಿ ಅಭಯಾರಣ್ಯದ ಉದ್ದಕ್ಕೂ ವಿಸ್ತರಿಸಿಕೊಂಡಿದೆ. ಇದನ್ನು 1977 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಅಭಯಾರಣ್ಯ ಉದ್ಯಾನವನವು ರಾಷ್ಟ್ರೀಯವಾಗಿ ಬದಲಾಗುವ ಸಾಧ್ಯತೆಯಿದೆ.












Click it and Unblock the Notifications