ನೇತಾಡುವ ವಿದ್ಯುತ್ ತಂತಿಗಳಿಂದ ಬಚಾವಾದ ರಾಹುಲ್, ಪ್ರಿಯಾಂಕಾ

Recommended Video

      ನೇತಾಡುವ ವಿದ್ಯುತ್ ತಂತಿಗಳಿಂದ ಸ್ವಲ್ಪದರಲ್ಲೇ ಬಚಾವಾದ ಪ್ರಿಯಾಂಕಾ ರಾಹುಲ್

      ಲಕ್ನೋ, ಫೆಬ್ರವರಿ 11: ಉತ್ತರ ಪ್ರದೇಶದ ಲಕ್ನೋದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ನೇತಾಡುವ ವಿದ್ಯುತ್ ತಂತಿಗಳಿಂದ ಕಾಂಗ್ರೆಸ್ ಮುಖಂಡರು ಸ್ವಲ್ಪದರಲ್ಲಿಯೇ ಬಚಾವಾದರು.

      ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಜೋತಿರಾದಿತ್ಯ ಸಿಂಧಿಯಾ ಸೇರಿದಂತೆ ಅನೇಕರು ವಾಹನದಲ್ಲಿ ತೆರಳುತ್ತಿದ್ದರು. ಒಂದು ಕಡೆ ರಸ್ತೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿ ನೇತಾಡುತ್ತಿದ್ದವು. ವಾಹನದಲ್ಲಿ ನಿಂತು ಜನರತ್ತ ಕೈಬೀಸುತ್ತಿದ್ದ ರಾಹುಲ್ ಮತ್ತು ಪ್ರಿಯಾಂಕಾ ವಾಹನದ ಒಳಗೆ ಬಗ್ಗಿ ಕುಳಿತುಕೊಂಡರು.

      ಅವರ ಜೊತೆಯಲ್ಲಿದ್ದ ಇತರೆ ಮುಖಂಡರು ಮತ್ತು ರಕ್ಷಣಾ ಸಿಬ್ಬಂದಿ ಕೋಲಿನಿಂದ ತಂತಿಗಳನ್ನು ಮೇಲಕ್ಕೆತ್ತಿ ಅಪಾಯದಿಂದ ಪಾರಾದರು.

      rahul gandhi priyanka and jyotiraditya sit down dangling electrical wires roadshow uttra pradesh lucknow

      ಸ್ವಲ್ಪ ಎತ್ತರದ ಬಸ್‌ನಲ್ಲಿ ಇದ್ದಿದ್ದರಿಂದ ರಾಹುಲ್ ಮತ್ತು ಇತರರು ತಂತಿಗೆ ಮೈ ತಗುಲದಂತೆ ತಪ್ಪಿಸಿಕೊಂಡು ಕೂರುವಂತಾಯಿತು. ಬೇರೆ ಬಸ್‌ಗಳಲ್ಲಿದ್ದ ಪ್ರಿಯಾಂಕಾ ಗಾಂಧಿ ಮತ್ತು ಜೋತಿರಾದಿತ್ಯ ಸಿಂಧಿಯಾ ಕೂಡ ಇದೇ ರೀತಿ ಪರದಾಡಿದರು. ಇದರಿಂದಾಗಿ ಬಸ್ ಮುಂದೆ ಚಲಿಸಲು ಸಾಧ್ಯವಾಗದೆ, ರೋಡ್ ಶೋಗೆ ಕೆಲ ಸಮಯ ಅಡ್ಡಿಯಾಯಿತು.

      ಬಳಿಕ ಮಾತನಾಡಿದ ರಾಹುಲ್ ಗಾಂಧಿ, ದೇಶದ 'ಚೌಕಿದಾರ' ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳಿಂದ ಹಾಗೂ ವಾಯುಪಡೆಯಿಂದ ಹಣವನ್ನು ಕದ್ದಿದ್ದಾರೆ. ಚೌಕಿದಾರ್ ಚೋರ್ ಹೈ. ಉತ್ತರ ಪ್ರದೇಶ ದೇಶದ ಹೃದಯ ಭಾಗದಲ್ಲಿದೆ. ನಾವು ಮುಂಚೂಣಿಯಲ್ಲಿ ಆಡುತ್ತೇವೆ. ಸಿಂಧಿಯಾ, ಪ್ರಿಯಾಂಕಾ ಮತ್ತು ನಾನು ಇಲ್ಲಿ ಕಾಂಗ್ರೆಸ್ ಸಿದ್ಧಾಂತದ ಸರ್ಕಾರದ ರಚನೆಯಾಗುವವರೆಗೂ ವಿರಮಿಸುವುದಿಲ್ಲ ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+