ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಕುಳಿತು ಚಿಕನ್, ಹುಕ್ಕಾ ಪಾರ್ಟಿ!

|
Google Oneindia Kannada News

ಪ್ರಯಾಗರಾಜ್, ಆಗಸ್ಟ್ 30: ಸಂಗಮನಗರಿ ಪ್ರಯಾಗ್‌ರಾಜ್‌ನಲ್ಲಿ ತೀರ್ಥಯಾತ್ರೆ ಮಾಡಲು ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಜನರು ಬರುತ್ತಾರೆ. ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ತಮ್ಮನ್ನು ತಾವು ಧನ್ಯರು ಎಂದು ಭಾವಿಸುತ್ತಾರೆ. ಗಂಗೆ ದೇವಿ ಸ್ವರೂಪಿ ಎಂದು ಪೂಜೆ ಕೂಡ ಮಾಡಲಾಗುತ್ತದೆ. ಈ ಗಂಗಾನದಿಯ ಮಧ್ಯದಲ್ಲಿ ದೋಣಿಯೊಂದರಲ್ಲಿ ಕುಳಿತು ಮಾಂಸ ಹಾಗೂ ಹುಕ್ಕಾ ಸೇದುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಕೆಲ ಯುವಕರು ಗಂಗಾನದಿಯಲ್ಲಿ ಬೋಟ್ ಮೇಲೆ ಕುಳಿತು ಕೋಳಿ ಮಾಂಸ ತಯಾರಿಸಿದ್ದಲ್ಲದೇ ಹುಕ್ಕಾ ಪಫ್ ಗಳನ್ನೂ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ನಂತರ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಯಾಗರಾಜ್ ಪೊಲೀಸರು ತಿಳಿಸಿದ್ದಾರೆ. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಪ್ರಯಾಗ್‌ರಾಜ್‌ನ ಗಂಗಾ ನದಿಯಲ್ಲಿ ದೋಣಿಯಲ್ಲಿ ಚಿಕನ್ ಮತ್ತು ಹುಕ್ಕಾ ಪಾರ್ಟಿ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ದೋಣಿಯಲ್ಲಿ 4-5 ಯುವಕರು ಕುಳಿತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಒಂದು ಕಡೆ ಕಲ್ಲಿದ್ದಲಿನ ಬೆಂಕಿಯಲ್ಲಿ ಕೋಳಿ ಬೇಯಿಸಲಾಗುತ್ತಿದೆ. ಇನ್ನೊಂದು ಕಡೆ ಹುಕ್ಕಾ ಇಡಲಾಗಿದೆ. ಯುವಕನೊಬ್ಬ ಹುಕ್ಕಾ ಸೇದುತ್ತಿದ್ದಾನೆ. ವೈರಲ್ ವಿಡಿಯೊ ಎಷ್ಟು ಹಳೆಯದು ಮತ್ತು ಎಲ್ಲಿಂದ ಬಂದಿದೆ ಎಂದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ. ಸಾಮಾಜಿಕ ಮಾಧ್ಯಮಗಳ ಪ್ರಕಾರ, ಈ ವಿಡಿಯೊ ಪ್ರಯಾಗರಾಜ್‌ನ ದಾರಗಂಜ್ ಪ್ರವಾಹ ಪ್ರದೇಶದಲ್ಲಿ ತೆಗೆಯಲಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಕೃತ್ಯ ಎಂದು ಜನರು ಹೇಳುತ್ತಿದ್ದಾರೆ. ವಿಡಿಯೊವನ್ನು ಹಂಚಿಕೊಳ್ಳುವಾಗ ಬಳಕೆದಾರರು ಹೀಗೆ ಬರೆದಿದ್ದಾರೆ, "ಗಂಗಾ ಕೊಳಕು ಆಗುತ್ತಿದೆ, ಒಂದು ಕಡೆ ಜನರು ಪ್ರವಾಹದಿಂದ ಬಳಲುತ್ತಿದ್ದಾರೆ, ಮತ್ತೊಂದೆಡೆ ಕೆಲವರು ದೋಣಿಯಲ್ಲಿ ಕುಳಿತು ಹುಕ್ಕಾ-ಮಾಂಸ ಇತ್ಯಾದಿಗಳನ್ನು ಸೇವಿಸುತ್ತಿದ್ದಾರೆ'' ಎಂದು ಆಕ್ರೋಶಗೊಂಡಿದ್ದಾರೆ.

Prayagraj: Chicken and hookah party video on mid-boat on Ganges goes viral

ವಿಚಾರಣೆ ಮತ್ತು ತನಿಖೆ

ವೈರಲ್ ವಿಡಿಯೊಗೆ ಸಂಬಂಧಿಸಿದಂತೆ, ವಿಡಿಯೊದ ತಕ್ಷಣದ ಮಾಹಿತಿ ತೆಗೆದುಕೊಳ್ಳಲಾಗಿದೆ ಎಂದು ಪ್ರಯಾಗರಾಜ್ ಪೊಲೀಸರು ಹೇಳಿದ್ದಾರೆ. ಶಂಕಿತರ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ. ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

English summary
A video of a chicken and a hookah party on a mid-boat on the Ganges at a pilgrimage site in Prayagraj has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X