ಲೋಕಸಭಾ ಚುನಾವಣೆಯ ವೇಳೆ ಮೋದಿಗೆ ಸಿಗುತ್ತಿರುವ ಹೊಸಹೊಸ 'ಬಿರುದು'ಗಳು

Recommended Video

      ಲೋಕಸಭೆ ಚುನಾವಣೆ ಸಮಯದಲ್ಲಿ ನರೇಂದ್ರ ಮೋದಿಗೆ ಸಿಗುತ್ತಿದೆ ಹೊಸ ಹೊಸ ಬಿರುದುಗಳು | Oneindia Kannada

      ವಾರಣಾಸಿ, ಮೇ 8: ಪ್ರಧಾನಮಂತ್ರಿಯನ್ನು ಟೀಕಿಸುವ ಬರದಲ್ಲಿ ವಿಪಕ್ಷಗಳು ನರೇಂದ್ರ ಮೋದಿಗೆ ಹೊಸಹೊಸ ಹೆಸರನ್ನು ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯ ನಂತರ, ಈಗ ಕಾಂಗ್ರೆಸ್ಸಿನ ಇನ್ನೋರ್ವ ಮುಖಂಡ ಸಂಜಯ್ ನಿರುಪಮ್ ಸರದಿ.

      ಮಂಗಳವಾರ ಚುನಾವಣಾ ಸಭೆಯಲ್ಲಿ ಪ್ರಧಾನಿಯವರನ್ನು 'ದುರ್ಯೋಧನ'ನಿಗೆ ಹೋಲಿಸಿದ್ದ ಪ್ರಿಯಾಂಕಾ, ದುರ್ಯೋಧನನಿಗೆ ತುಂಬಾ ಗರ್ವವಿತ್ತು. ಆ ಗರ್ವವೇ ಆತನ ಸೋಲಿಗೆ ಕಾರಣವಾಯಿತು ಎಂದು ಮೋದಿಯನ್ನು ಟೀಕಿಸಿದ್ದರು.

      ವಾರಣಾಸಿಯಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡುತ್ತಿದ್ದ ಸಂಜಯ್, ಮೋದಿಯನ್ನು ಮೊಘಲ್ ಅರಸ 'ಔರಂಗಜೇಬ್' ಗೆ ಹೋಲಿಸಿದ್ದಾರೆ. ಮೋದಿ, 'ಮಾಡರ್ನ್ ಡೇ ಅವತಾರ್ ಆಫ್ ಔರಂಗಜೇಬ್ ಇನ್ ವಾರಣಾಸಿ' ಎಂದು ಲೇವಡಿ ಮಾಡಿದ್ದಾರೆ.

      PM Modi modern-day avatar of Aurangzeb: Congress Sanjay Nirupam

      ಕಾಶೀ ವಿಶ್ವನಾಥ ಕಾರಿಡಾರ್ ಗಾಗಿ ಪುರಾಣಪ್ರಸಿದ್ದ ದೇವಾಲಯ ನಗರಿ ವಾರಣಾಸಿಯಲ್ಲಿ ಹಲವು ದೇವಾಲಯಗಳನ್ನು ನೆಲಸಮ ಮಾಡಲಾಗುತ್ತಿದೆ. ಹದಿನೇಳನೇ ಶತಮಾನದ ಮೊಘಲ್ ರಾಜ ಔರಂಗಜೇಬ್ ಕೂಡಾ, ದೇವಾಲಯಗಳನ್ನು ನೆಲಸಮ ಮಾಡಿದ್ದಕ್ಕೆ ಕುಖ್ಯಾತಿ ಪಡೆದಿದ್ದ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

      ವಾರಣಾಸಿಯ ಗತವೈಭವವನ್ನು ಮರುಕಳಿಸಲು ರೂಪಾಯಿ 550 ಶುಲ್ಕವನ್ನು ವಿಧಿಸಲಾಗುತ್ತಿದೆ. ಔರಂಗಜೇಬ್ ಮಾಡಲಾಗದ ಸಾಧನೆಯನ್ನು (ದೇವಾಲಯ ನೆಲಸಮ) ಈ ಶತಮಾನದಲ್ಲಿ ಮೋದಿ ಮಾಡಿ ಮುಗಿಸುತ್ತಿದ್ದಾರೆಂದು ಸಂಜಯ್ ನಿರುಪಮ್, ಮೋದಿ ವಿರುದ್ದ ಕಿಡಿಕಾರಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ರೈತರ ಸಮಸ್ಯೆಗಳನ್ನು ಆಲಿಸಲು ಪ್ರಧಾನಿಗೆ ಸಮಯವಿಲ್ಲ. ಆದರೆ, ನನ್ನ ಕುಟುಂಬದ ಹುತಾತ್ಮರ ಹೆಸರನ್ನು ಹೇಳಿಕೊಂಡು ಮತ ಕೇಳಲು ಅವರಿಗೆ ಸಮಯವಿದೆ. ಗರ್ವದಿಂದು ಬೀಗುತ್ತಿದ್ದ ದುರ್ಯೋಧನನ ಕಥೆ ಕೊನೆಗೆ ಏನಾಯಿತು ಎಂದು ಪ್ರಿಯಾಂಕಾ, ಅಂಬಾಲದ ಸಾರ್ವಜನಿಕ ಸಭೆಯಲ್ಲಿ ಮೋದಿಯನ್ನು ಟೀಕಿಸಿದ್ದರು. (ಚಿತ್ರ: ಪಿಟಿಐ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+