Get Updates
Get notified of breaking news, exclusive insights, and must-see stories!

ಕೊಹ್ಲಿ ದೇಶಭಕ್ತರಾಗಿದ್ರೆ ಅನುಷ್ಕಾಗೆ ವಿಚ್ಛೇದನ ನೀಡಲಿ: ಬಿಜೆಪಿ ಶಾಸಕ

ನವದೆಹಲಿ, ಮೇ 27: ಬೆಂಗಳೂರು ಮೂಲದ ಬಾಲಿವುಡ್ ನಟಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ವಿವಾದದಲ್ಲಿ ಸಿಲುಕಿದ್ದಾರೆ. ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ಮೊದಲ ವೆಬ್ ಸೀರಿಸ್ ಪಾತಾಳ್ ಲೋಕ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಜಾತಿನಿಂದನೆ ದೂರು ನೀಡಲಾಗಿದೆ.

Recommended Video

      ಅನುಷ್ಕಾ ಶರ್ಮಾಗೆ ಡಿವೋರ್ಸ್ ಕೊಡಿ ಎಂದ ಬಿಜೆಪಿ ಶಾಸಕ..! | Anushka Sharma | Virat Kohli |Oneindia Kannada

      ಇಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ದೇಶಭಕ್ತರಾಗಿದ್ರೆ ಅನುಷ್ಕಾಗೆ ವಿವಾಹ ವಿಚ್ಛೇದನ ನೀಡಲಿ ಎಂದು ದೂರು ನೀಡಿರುವ ಉತ್ತರಪ್ರದೇಶದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜಲ್ ಹೇಳಿದ್ದಾರೆ.

      ಪಾತಾಳ ಲೋಕ ಟ್ರೈಲರ್ ನೋಡಿ, ಇದು ಅಮೆಜಾನ್ ಪ್ರೈಮ್ ಕ್ರೈಂ ಥ್ರಿಲ್ಲರ್

      ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ಮೊದಲ ವೆಬ್ ಸೀರಿಸ್ ಪಾತಾಳ್ ಲೋಕ್ ನಲ್ಲಿ ಜಾತಿ ನಿಂದನೆ ಮತ್ತು ನೇಪಾಳಿ ಸಮುದಾಯಕ್ಕೆ ಅಪಮಾನ, ಪಾಕಿಸ್ತಾನ ಐಎಸ್ಐಗೆ ಕ್ಲೀನ್ ಚಿಟ್ ನೀಡಲಾಗಿದೆ, ಸನಾತನ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ಶಾಸಕ ನಂದಕಿಶೋರ್ ಗುರ್ಜಲ್ ಈಗಾಗಲೇ ದೂರು ನೀಡಿದ್ದಾರೆ. ಈ ಕುರಿತಂತೆ ಅನುಷ್ಕಾಗೆ ನೋಟಿಸ್ ಕೂಡಾ ಜಾರಿಯಾಗಿದೆ.

      ಸುದೀಪ್ ಶರ್ಮ ರಚನೆಯ ಪಾತಾಲ್ ಲೋಕ್‍ನಲ್ಲಿ ಜೈದೀಪ್ ಅಹ್ಲವತ್, ನೀರಜ್ ಕಬಿ, ಗುಲ್ ಪನಾಗ್, ಮತ್ತು ಅಭಿಷೇಕ್ ಬ್ಯಾನರ್ಜಿ ಮುಂತಾದವರು ನಟಿಸಿದ್ದಾರೆ. ಅವಿನಾಶ್ ಅರುಣ್ ನಿರ್ದೇಶಿಸಿ ಕ್ಲೀನ್ ಸ್ಲೇಟ್ ಫಿಲ್ಮ್‍ಝ್ ತಯಾರಿಕೆಯ ಈ 9-ಭಾಗಗಳ ಅಮೆಜಾನ್ ಒರಿಜಿನಲ್ ಸೀರೀಸನ್ನು ಅನುಷ್ಕಾ ಶರ್ಮ ನಿರ್ಮಿಸಿದ್ದಾರೆ

      ವೆಬ್ ಸಿರೀಸ್ ಪಾತಾಳ್ ಲೋಕ್ ನಲ್ಲಿ ಏನಿದೆ?

      ವೆಬ್ ಸಿರೀಸ್ ಪಾತಾಳ್ ಲೋಕ್ ನಲ್ಲಿ ಏನಿದೆ?

      ಇದರ ಜೊತೆಗೆ ವೆಬ್ ಸಿರೀಸ್ ಪಾತಾಳ್ ಲೋಕ್ ನಲ್ಲಿ ನಂದಕಿಶೋರ್ ಗುರ್ಜರ್ ಅವರ ಮಾರ್ಫ್ ಮಾಡಿದ ಫೋಟೋವನ್ನು ಬಳಸಲಾಗಿದೆ. ಸರಣಿ ಹತ್ಯೆ ಮಾಡುತ್ತಿದ್ದ ಹತೋಡಾ ತ್ಯಾಗಿಯ ಪಿಟಿ ಮಾಸ್ಟರ್ ಪಾತ್ರಧಾರಿಯ ಮುಖವನ್ನು ನಂದಕಿಶೋರ್ ಗೆ ಸೇರಿಸಿ ಬಳಸಲಾಗಿದೆ. ಈ ಬಗ್ಗೆ ಕೂಡಾ ನಂದಕಿಶೋರ್ ದೂರು ನೀಡಿದ್ದಾರೆ.

      ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು

      ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು

      ಈ ವೆಬ್ ಸರಣಿಯನ್ನು ಬ್ಯಾನ್ ಮಾಡಬೇಕು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿದ್ದಾರೆ. ಅಭಿನೇತ್ರಿ ಅನುಷ್ಕಾ ಶರ್ಮ ಅವರು ಇಂಥ ದೊಡ್ಡ ರಾಷ್ಟ್ರದ್ರೋಹದ ಕೆಲಸ ಮಾಡಿದ್ದಾರೆ.

      ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ

      ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ

      ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ನಂದಕಿಶೋರ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜೊತೆಗಿರುವ ಕಾರ್ಯಕ್ರಮ ಚಿತ್ರವನ್ನು ಬಳಸಲಾಗಿದೆ. ಇದರಿಂದ ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ತ್ಯಾಗಿ ಸಮುದಾಯದವನು ಎಂದು ಹತ್ಯೆಕೋರನ ಪಾತ್ರ ಸೃಷ್ಟಿಸಲಾಗಿದೆ.

      ದೇಶಭಕ್ತರಾಗಿದ್ದರೆ ವಿಚ್ಛೇದನ ನೀಡಬೇಕು

      ದೇಶಭಕ್ತರಾಗಿದ್ದರೆ ವಿಚ್ಛೇದನ ನೀಡಬೇಕು

      ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೇಶಕ್ಕಾಗಿ ಆಡುವ ದೇಶಭಕ್ತರಾಗಿದ್ದರೆ, ಅನುಷ್ಕಾ ಶರ್ಮಾಗೆ ತಕ್ಷಣವೇ ವಿಚ್ಛೇದನ ನೀಡಬೇಕು ಎಂದು ಸಲಹೆ ನೀಡುತ್ತೇನೆ ಎಂದು ಆಗ್ರಹಿಸುತ್ತೇನೆ. ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡಿರುವುದು ಬಹುದೊಡ್ಡ ತಪ್ಪು ಈ ಬಗ್ಗೆ ನಾನು ಪ್ರಧಾನಿ ಮೋದಿ ಅವರಿಗೂ ಪತ್ರ ಬರೆಯುತ್ತೇನೆ, ಪಾತಾಳ್ ಲೋಕ್ ಸಂಬಂಧಿಸಿದ ಎಲ್ಲರಿಗೂ ಶಿಕ್ಷೆಯಾಗಬೇಕಿದೆ ಎಂದರು.

      ಜಾತಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ

      ''ಸ್ವರ್ಗ ಲೋಕ, ಭೂ ಲೋಕ ಹಾಗೂ ಪಾತಾಳ ಲೋಕ ಎಂಬ ಪುರಾಣದ ಕಲ್ಪನೆಯನ್ನು ಪ್ರಜಾಪ್ರಭುತ್ವದ ನಾಲ್ಕು ಅಂಗಗಳ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಕ್ರೈಂ ಡ್ರಾಮಾಗೆ ಸುದೀಪ್ ಶರ್ಮ ಕಥೆ ಒದಗಿಸಿದ್ದಾರೆ. ಈ ಸರಣಿ ನೋಡಿದ ಮೇಲೆ ನಿಮ್ಮ ಜಗತ್ತನ್ನು ನೋಡುವ ರೀತಿ ಬದಲಾಗಲಿದೆ, 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಾಗಲಿರುವ ಪಾತಾಳ್ ಲೋಕ್, ಪ್ರೈಮ್ ಸದಸ್ಯರಿಗೆ ಮೇ 15ರಿಂದ ಸ್ಟ್ರೀಮಿಂಗ್‍ಗೆ ಲಭ್ಯವಾಗಿದೆ" ಎಂದು ನಿರ್ಮಾಪಕಿ ನಟಿ ಅನುಷ್ಕಾ ಹೇಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+