• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಸ್ತಿಗಾಗಿ ಕುಟುಂಬದ 6 ಮಂದಿಯನ್ನು ಕೊಂದ ವ್ಯಕ್ತಿ

|

ಲಕ್ನೋ, ಮೇ 1: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಕುಟುಂಬದ 6 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಲಕ್ನೋ ಹೊರವಲಯದಲ್ಲಿ ನಡೆದಿದೆ.

ಆರೋಪಿಯನ್ನು ಅಜಯ್ ಸಿಂಗ್ (26)ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ

ಆಸ್ತಿ ವಿಚಾರವಾಗಿ ಮನೆಯವರ ಜೊತೆ ಜಗಳವಾಡಿದ್ದ ಬಳಿಕ ಕೋಪದಲ್ಲಿ ಹರಿತವಾದ ಆಯುಧದಿಂದ ತಿವಿದು ಎಲ್ಲರನ್ನೂ ಹತ್ಯೆ ಮಾಡಿದ್ದಾನೆ.ಆರೋಪಿಯು ಆತನ ತಾಯಿ, ತಂದೆ, ಅಣ್ಣ,ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ.

ಮೃತರನ್ನು ಅಮರ್(60), ರಾಮ್‌ಸಖ್‌(55), ಅರುಣ್(40), ರಾಮ್‌ದುಲಾರಿ(35), ಸೌರಭ್(7), ಸಾರಿಕಾ(2) ಗುರುತಿಸಲಾಗಿದೆ. ಮನೆಯ ಆರು ಮಂದಿಯನ್ನು ಹತ್ಯೆ ಮಾಡಿದ್ದ ವ್ಯಕ್ತಿ ಪೊಲೀಸರಿಗೆ ಶರಣಾಗಿರುವುದಾಗಿ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದ್ದಾರೆ.

English summary
Six members of a family were allegedly hacked to death by another family member over a property dispute on the outskirts of Lucknow on Thursday, police said. .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X