ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಜೆಪಿ ಬಿಟ್ಟು ಇನ್ಯಾರಿಂದಲೂ ಅಯೋಧ್ಯೆಯಲ್ಲಿ ರಾಮಮಂದಿರ ಸಾಧ್ಯವಿಲ್ಲ'

|
Google Oneindia Kannada News

ಲಖನೌ, ಡಿಸೆಂಬರ್ 23: ಯಾವಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ, ಅದು ನಮ್ಮಿಂದ (ಬಿಜೆಪಿ) ಮಾತ್ರ. ಇದರಲ್ಲಿ ಅನುಮಾನ ಬೇಡ. ಬೇರೆ ಯಾವ ಪಕ್ಷವೂ ಕಟ್ಟಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ.

ಯುವಕರೇ ಹೆಚ್ಚಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಅವರು ಮಾತನಾಡಿದರು. ಈ ವೇಳೆ ಸಭೆಯಲ್ಲಿದ್ದವರು, ಯಾರು ಮಂದಿರ ನಿರ್ಮಿಸುತ್ತಾರೋ ಅವರಿಗೇ ಅಧಿಕಾರಕ್ಕೆ ಏರಲು ಮತ ಎಂದು ಘೋಷಣೆ ಕೂಗಿದರು.

ರಾಜಕೀಯ ಪ್ರಾಮುಖ್ಯಕ್ಕಾಗಿ ಗೋತ್ರ, ಜನಿವಾರ ತೋರಿಸ್ತಿದ್ದಾರೆ: ಯೋಗಿ ಟಾಂಗ್ರಾಜಕೀಯ ಪ್ರಾಮುಖ್ಯಕ್ಕಾಗಿ ಗೋತ್ರ, ಜನಿವಾರ ತೋರಿಸ್ತಿದ್ದಾರೆ: ಯೋಗಿ ಟಾಂಗ್

ಯಾರು ಜನಿವಾರ ತೋರಿಸುತ್ತಾರೋ ಅದನ್ನು ಮತಕ್ಕಾಗಿ ಮಾಡುತ್ತಾರೆ. ರಾಮ ಹಾಗೂ ಕೃಷ್ಣ ಅಸ್ತಿತ್ವದಲ್ಲೇ ಇರಲಿಲ್ಲ ಅಂದವರು ಇವರೇ. ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಾರೆ ಎಂಬ ಯಾವ ನಿರೀಕ್ಷೆಯೂ ಇಟ್ಟುಕೊಳ್ಳಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಯೋಗಿ ಆದಿತ್ಯನಾಥ್ ತಿವಿದರು.

Yogi Adityanath

ನಮ್ಮ ಇತಿಹಾಸದ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಅದನ್ನು ಸರಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಪುಷ್ಪಕ ವಿಮಾನ (ರಾಮಾಯಣದಲ್ಲಿ ಪ್ರಸ್ತಾವ ಇದೆ) ಅದು ಸತ್ಯ. ಸಗೇ ಭಾರದ್ವಾಜ್ ಬರೆದಿರುವ 'ವಿಮಾನ ಶಾಸ್ತ್ರ'ದಲ್ಲಿ ಪುಷ್ಪಕ ವಿಮಾನದ ಮಾಹಿತಿಯಿದೆ ಎಂದಿದ್ದಾರೆ.

ಕುಂಭ ಮೇಳವನ್ನು ಸಹ ಯುವ ವಿರೋಧಿ, ದಲಿತ ವಿರೋಧಿ, ಮಹಿಳಾ ವಿರೋಧಿ, ಪ್ರಕೃತಿ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಪ್ರಯಾಗ್ ರಾಜ್ ಕುಂಭ್ ನಲ್ಲಿ ಭಾರತದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ತೋರಲಾಗುತ್ತದೆ ಎಂದು ಯೋಗಿ ಹೇಳಿದ್ದಾರೆ.

ಉತ್ತರ ಪ್ರದೇಶ: ನಾಲ್ಕು ಪ್ರತಿಮೆಗಳ ಸ್ಥಾಪನೆಗೆ ಯೋಗಿ ನಿರ್ಧಾರಉತ್ತರ ಪ್ರದೇಶ: ನಾಲ್ಕು ಪ್ರತಿಮೆಗಳ ಸ್ಥಾಪನೆಗೆ ಯೋಗಿ ನಿರ್ಧಾರ

ಜನವರಿ ಹದಿನೈದನೇ ತಾರೀಕು ಅಧಿಕೃತವಾಗಿ ಕುಂಭ ಮೇಳಕ್ಕೆ ಚಾಲನೆ ದೊರೆಯುತ್ತದೆ. ಮಾರ್ಚ್ ನಾಲ್ಕರ ಶಿವರಾತ್ರಿಯಂದು ಕೊನೆಯಾಗುತ್ತದೆ.

English summary
UP chief minister Yogi Adityanath on Sunday said whenever the Ram temple comes up in Ayodhya, it would be built by the Bharatiya Janata Party (BJP) only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X