'ಓಮಿಕ್ರಾನ್ ವೈರಲ್ ಜ್ವರದಂತೆ': ಯೋಗಿ ಆದಿತ್ಯನಾಥ್

ಲಕ್ನೋ ಜನವರಿ 3: 'ಓಮಿಕ್ರಾನ್ ವೈರಸ್ ವೇಗವಾಗಿ ಹರಡುತ್ತಿದೆ ಆದರೆ ವೈರಸ್ ದುರ್ಬಲವಾಗಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ವೇಗವಾಗಿ ಹರಡುತ್ತಿದೆ. ಆದರೆ ಅತ್ಯಂತ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದೆ. ವೈರಸ್ ದುರ್ಬಲಗೊಂಡಿದೆ. ಇದು ವೈರಲ್ ಜ್ವರದಂತಿದೆ. ಆದರೆ ಮುನ್ನೆಚ್ಚರಿಕೆಗಳು ಅಗತ್ಯವಾಗಿದೆ. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಓಮಿಕ್ರಾನ್ ಡೆಲ್ಟಾ ವೇರಿಯಂಟ್‌ನಂತೆ ಮಾರಣಾಂತಿಕವಾಗಿಲ್ಲ. ಸೋಂಕಿತ ರೋಗಿಗಳು 4-5 ದಿನಗಳಲ್ಲಿ ಓಮಿಕ್ರಾನ್ ರೂಪಾಂತರದಿಂದ ಸಂಪೂರ್ಣವಾಗಿ ಗುಣವಾಗುತ್ತಾರೆ ಎಂದು ಜನರಿಗೆ ಅಭಯ ನೀಡಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಗಿಂತ ಶೇಕಡಾ22 ರಷ್ಟು ಹೆಚ್ಚಾಗಿದೆ. ಈ ಒಂದು ದಿನದಲ್ಲಿ 123 ಜನರು ವೈರಸ್‌ನಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಭಾರತದಲ್ಲಿ ಭಾನುವಾರ 27,553 ಪ್ರಕರಣಗಳು ಮತ್ತು ವೈರಸ್‌ನಿಂದ 284 ಸಾವುಗಳು ವರದಿಯಾಗಿವೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,45,582 ಆಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 10,846 ಜನ ಗುಣಮುಖರಾಗಿದ್ದು, ಒಟ್ಟಾರೆ 3,42,95,407 ಜನ ಚೇತರಿಸಿಕೊಂಡಿದ್ದಾರೆ.

ಇನ್ನೂ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ವೇಗವಾಗಿ ಹರಡುವ ಓಮಿಕ್ರಾನ್ ರೂಪಾಂತರದ ಪ್ರಕರಣಗಳ ಸಂಖ್ಯೆ 1,700 ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಹೆಚ್ಚಿನ ಸಂಖ್ಯೆಯ ಓಮಿಕ್ರಾನ್ ಪ್ರಕರಣಗಳುನ್ನು ವರದಿ ಮಾಡಿದೆ. ಅದರಲ್ಲಿ 639 ಜನರು ಚೇತರಿಸಿಕೊಂಡಿದ್ದಾರೆ ಅಥವಾ ಡಿಸ್ಚಾರ್ಜ್ ಆಗಿದ್ದಾರೆ. 510 ಒಮಿಕ್ರಾನ್ ಪ್ರಕರಣಗಳೊಂದಿಗೆ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ, 351 ಪ್ರಕರಣಗಳೊಂದಿಗೆ ದೆಹಲಿ ನಂತರದ ಸ್ಥಾನದಲ್ಲಿದೆ.

Omicron is like viral feverYogi Adityanath

ಅಧಿಕ ನಗರಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದಿಂದಾಗಿ ಇಂದಿನಿಂದ 15 ರಿಂದ 18 ವಯಸ್ಸಿನ ಹದಿಹರೆಯದವರಿಗೆ ಲಸಿಕೆಯನ್ನು ನೀಡಲು ಪ್ರಾರಂಭಸಲಾಗಿದೆ. ಸರ್ಕಾರದ CoWin ಪೋರ್ಟಲ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಹದಿಹರೆಯದವರು ನೋಂದಾಯಿಸಿಕೊಂಡಿದ್ದಾರೆ ಮತ್ತು ಎಲ್ಲರಿಗೂ Covaxin ಡೋಸ್ ಸಿಗುತ್ತದೆ. ಲಸಿಕೆ ಕಾರ್ಯಕ್ರಮವನ್ನು ಶಾಲೆಗಳೊಂದಿಗೆ ಸಮಾಲೋಚನೆ ನಡೆಸಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. 2007 ಮತ್ತು ಅದಕ್ಕಿಂತ ಮೊದಲು ಜನಿಸಿದವರು ಲಸಿಕೆಗೆ ಅರ್ಹರಾಗಿದ್ದಾರೆ. ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಅನ್ನು ಅರ್ಹ ಮಕ್ಕಳಿಗೆ 28 ​​ದಿನಗಳ ಅಂತರದಲ್ಲಿ ಎರಡು ಡೋಸ್‌ಗಳಲ್ಲಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಕಂಟೈನ್‌ಮೆಂಟ್ ವಲಯಗಳು ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರಗಳು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿವೆ. ಆದರೆ ಗಂಭೀರ ಕಾಯಿಲೆಯ ನಿದರ್ಶನಗಳು ಕಡಿಮೆಯಾಗಿದ್ದರೂ ಸಹ ದೆಹಲಿಯಲ್ಲಿ 3,194 ಪ್ರಕರಣಗಳು ದಾಖಲಾಗಿದ್ದರೆ, ಮುಂಬೈ 8,063 ಹೊಸ ಕೋವಿಡ್ -19 ಪ್ರಕರಣಗಳನ್ನು ಕಂಡಿದೆ. ಕೋಲ್ಕತ್ತಾದಲ್ಲಿ ಭಾನುವಾರ ಒಟ್ಟು 3,194 ಹೊಸ ಪ್ರಕರಣಗಳು ದಾಖಲಾಗಿವೆ. ಇದು ರಾಜ್ಯಾದ್ಯಂತದ ಎಣಿಕೆಯ ಅರ್ಧದಷ್ಟು. ಹೀಗಾಗಿ ಪ್ರಕರಣಗಳು ಅಧಿಕ ಇರಿವ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಜನವರಿ 3 ರಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಭಾರತದಲ್ಲಿ ಓಮಿಕ್ರಾನ್ 1,700 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 510 ಪ್ರಕರಣಗಳು ದಾಖಲಾಗಿದ್ದು, ದೆಹಲಿ 351, ಕೇರಳ 156, ಗುಜರಾತ್ 136, ತಮಿಳುನಾಡು ನಂತರದ ಸ್ಥಾನದಲ್ಲಿವೆ.

23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗೆ ಒಟ್ಟು 1,700 ಪ್ರಕರಣಗಳಲ್ಲಿ 639 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ 510 ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 351, ಕೇರಳ 156, ಗುಜರಾತ್ 136, ತಮಿಳುನಾಡಿನಲ್ಲಿ 121 ಮತ್ತು ರಾಜಸ್ಥಾನದಲ್ಲಿ 120 ಪ್ರಕರಣಗಳು ದಾಖಲಾಗಿವೆ.

Recommended Video

      BCCI ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ರಾ ವಿರಾಟ್?ಅಸಲಿಗೆ ಆಗಿದ್ದೇನು? | Oneindia kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+