ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆಗಿಳಿದ ಜಸ್ಟೀಸ್ ಕರ್ಣನ್
ಲಕ್ನೋ, ಏಪ್ರಿಲ್ 09: ಜೈಲುವಾಸ ಅನುಭವಿಸಿದ ಹೈಕೋರ್ಟಿನ ಮೊದಲ ನ್ಯಾಯಾಧೀಶ ಎನಿಸಿಕೊಂಡಿರುವ ಜಸ್ಟೀಸ್ ಸಿಎಸ್ ಕರ್ಣನ್ಅವರು ರಾಜಕೀಯ ಕ್ಷೇತ್ರಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೋದಿ ವಿರುದ್ಧ ಸಮರ ಸಾರಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಹಾಗೂ ನಿವೃತ್ತ ಬಿಎಫ್ ಎಫ್ ಕಾನ್ಸ್ಟೇಬಲ್ ತೇಜ್ ಬಹದ್ದೂರ್ ಅವರ ಸಾಲಿಗೆ ಜಸ್ಟೀಸ್ ಕರ್ಣನ್ ಸೇರಿದ್ದಾರೆ. ಚೆನ್ನೈ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿರುವ ಕರ್ಣನ್ಅವರು ಎರಡನೇ ಕ್ಷೇತ್ರವಾಗಿ ವಾರಾಣಸಿಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
2018ರ ಮೇ ತಿಂಗಳಲ್ಲಿ 'Anti Corruption Democratic Party' ಹೆಸರಿನ ಪಕ್ಷವನ್ನು ಕರ್ಣನ್ ಸ್ಥಾಪಿಸಿದ್ದು, ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ವಿವಾದ ಎಬ್ಬಿಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅವರ ನ್ಯಾಯಾಂಗ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.
ಸುಪ್ರೀಂಕೋರ್ಟ್ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಜೈಲುಶಿಕ್ಷೆ ಅನುಭವಿಸಿದ್ದರು. ನಾನು ದಲಿತ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. 2017ರಲ್ಲಿ ನಡೆದ ಪ್ರಕರಣ ದೇಶದೆಲ್ಲೆಡೆ ಚರ್ಚೆಯಾಗಿತ್ತು.
ಮದ್ರಾಸ್ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿದ್ದ ತಮ್ಮನ್ನು ಕೊಲ್ಕೊತ್ತಾಗೆ ವರ್ಗಾವಣೆ ಮಾಡಿದ 'ಕೊಲಿಜಿಯಂ' ಬಗ್ಗೆಯೂ ಕರ್ಣನ್ ಆಕ್ಷೇಪ ವ್ಯಕ್ತಪಡಿಸಿದ್ದರು. ನಾನು ಕೊಲ್ಕೊತ್ತಾಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.












Click it and Unblock the Notifications