• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನದೊಂದು ಇಚ್ಛೆಇದೆ ಈಡೇರಿಸುತ್ತೀರಾ?: ವಾರಣಾಸಿಗರಿಗೆ ಮೋದಿ ಪ್ರಶ್ನೆ

|

ವಾರಣಾಸಿ, ಏ.26: ನನ್ನದೊಂದು ಇಚ್ಛೆ ಇದೆ ಅದನ್ನು ಈಡೇರಿಸುತ್ತೀರಾ ಎಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಜನರಿಗೆ ಪ್ರಶ್ನೆ ಮಾಡಿದ್ದಾರೆ.

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಪುರುಷರಿಗಿಂತ ಶೇ.5 ರಷ್ಟು ಹೆಚ್ಚಿನ ಮಹಿಳೆಯರು ಮತದಾನ ಮಾಡಬೇಕು ಇದು ನನ್ನ ಆಸೆ ಈ ಆಸೆಯನ್ನು ಈಡೇರಿಸುತ್ತೀರಾ ಎಂದು ಮೋದಿ ಕೇಳಿದ್ದಾರೆ.

ವಿಷಕಂಠನ ನಾಡಿನಲ್ಲಿ ಮೋದಿ ಬೃಹತ್ ರೋಡ್ ಶೋ ಹಿಂದಿನ ಕಾರಣವೇನು?

ಲೋಕಸಭೆ ಚುನಾವಣೆಯನ್ನು ಗೆಲ್ಲಲು ಬೇಕಾಗಿರುವುದು ಜನರೇ ಹೊರತು ಹಣವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಚುನಾವಣಾ ಪ್ರಚಾರಕ್ಕೆ ಹಣದ ಅಗತ್ಯವಿಲ್ಲ, ಜನರ ಜೊತೆ ಬೆರೆಯುವುದು, ಅವರ ಕಷ್ಟಗಳಿಗೆ ಸ್ಪಂದಿಸುವುದೇ ಮುಖ್ಯ ಎಂದರು.

ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಧನ್ಯವಾದ ಹೇಳಲು ಮತ್ತೆ ಬರುತ್ತೇನೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ನಾಮಪತ್ರ ಸಲ್ಲಿಕೆ LIVE: ಎನ್ ಡಿಎ ಮುಖಂಡರೊಂದಿಗೆ ಸಭೆ

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿ, ವಾರಣಾಸಿಯ ಜನರು ಪ್ರಧಾನಿ ಮೋದಿಯವರಿಗೆ ಮತ ಹಾಕುತ್ತಾರೆ ಎನ್ನುವ ಭರವಸೆ ನನಗಿದೆ. ಎಲ್ಲಾ ಎನ್‌ಡಿಎ ಕಾರ್ಯಕರ್ತರೂ ಕೂಡ ಮೋದಿಯವರಿಗೆ ಬೆಂಬಲ ನೀಡಿ ಎಂದರು

ಎಐಎಡಿಎಂಕೆ ಮುಖಂಡ ಥಂಬಿದುರೈ ಅವರು ಮಾತನಾಡಿ, ತಮಿಳುನಾಡಿನಲ್ಲಿ ಚುನಾವಣೆ ಮುಕ್ತಾಯಗೊಂಡಿದೆ. ನಾವು ಎಲ್ಲಾ ಸೀಟುಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ನಾವಿಲ್ಲಿ ಪ್ರಧಾನಿ ಮೋದಿಗೆ ಬೆಂಬಲ ನೀಡಲು ಬಂದಿದ್ದೇವೆ ಎಂದು ಹೇಳಿದರು.

ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಮಾತನಾಡಿ, 2024ರವರೆಗೆ ಪ್ರಧಾನಿ ಹುದ್ದೆಯನ್ನು ಪ್ರತಿಪಕ್ಷಗಳು ಮರೆಯಲಿ ಎಂದಿದ್ದಾರೆ.ಜನರು ಈಗಾಗಲೇ ಅವರ ಪ್ರಧಾನಿಯನ್ನು ಆಯ್ಕೆ ಮಾಡಿದ್ದಾರೆ. ಮಹಾಘಟಬಂಧನ್ 2024ರವರೆಗೆ ಪ್ರಧಾನಿ ಹುದ್ದೆಯನ್ನು ಮರೆತರೆ ಒಳಿತು ಎಂದರು.

ಇಡೀ ದೇಶವೇ ಮೋದಿ ಮತ್ತೊಮ್ಮೆ ಎನ್ನುತ್ತಿದೆ

ಇಡೀ ದೇಶವೇ ಮೋದಿ ಮತ್ತೊಮ್ಮೆ ಎನ್ನುತ್ತಿದೆ

ಇಡೀ ದೇಶವೇ ಮೋದಿ ಸರ್ಕಾರ ಮತ್ತೊಮ್ಮೆ ಬರಬೇಕು ಎಂದು ಬೇಡಿಕೊಳ್ಳುತ್ತಿದೆ. ನಮ್ಮ ಕಾರ್ಯಕರ್ತರು ಒಂದೊಮ್ಮೆ ಸೋಲನ್ನು ಕಂಡರೆ ಧೃತಿಗೆಡುವುದು ಬೇಡ, ಕೋಪದಲ್ಲಿ ಕಿತ್ತಾಡಿಕೊಳ್ಳುವುದು, ಬಡಿದಾಡುವುದು ಬೇಡ ಎಂದು ಹೇಳಿದರು.

ನಮ್ಮ ಮತಗಟ್ಟೆ ಸದೃಢ ಮತಗಟ್ಟೆ

ನಮ್ಮ ಮತಗಟ್ಟೆ ಸದೃಢ ಮತಗಟ್ಟೆ

ಈಗ ನಮ್ಮ ಬಳಿ ಇರುವ ಒಂದೇ ಒಂದು ಮಂತ್ರ ನಮ್ಮ ಮತಗಟ್ಟೆ ಎಲ್ಲ ಮತಗಟ್ಟೆಗಳಿಗಿಂತಲೂ ಸದೃಢ. ಮೋದಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದು ಮುಖ್ಯವಲ್ಲ. ನಮ್ಮ ಕಾರ್ಯಕರ್ತರ ಗೆಲುವು ಮುಖ್ಯ ಎಂದರು.

ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಅಜಯ್ ರೈ ಕಣಕ್ಕೆ

ಪ್ರಜಾಪ್ರಭುತ್ವದ ಗೆಲುವನ್ನು ಎದುರು ನೋಡುತ್ತಿದ್ದೇನೆ

ಪ್ರಜಾಪ್ರಭುತ್ವದ ಗೆಲುವನ್ನು ಎದುರು ನೋಡುತ್ತಿದ್ದೇನೆ

ಪ್ರಜಾಪ್ರಭುತ್ವದ ಗೆಲುವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.ನೀವು ಮೋದಿಯ ಸಿಪಾಯಿಗಳಾಗಿದ್ದರೆ ಮಾಧ್ಯಮಗಳಲ್ಲಿ ಜಗಳವಾಡುವಂಥವರ ಪ್ರೇರಣೆಯನ್ನು ತೆಗೆದುಕೊಳ್ಳಬೇಡಿ. ರಾಜಕೀಯದಲ್ಲಿ ಪ್ರೀತಿ, ಸ್ನೇಹ ಬಹಳ ಮುಖ್ಯವಾದದ್ದು, ಇದು ನಿಧಾನವಾಗಿ ಕಾಣೆಯಾಗುತ್ತಿದೆ. ಅದನ್ನು ವಾಪಸ್ ತರುವ ಕೆಲಸವಾಗಬೇಕಿದೆ ಎಂದರು.

ಯಾರಾದರೂ ಕೆಟ್ಟ ಮಾತು ಆಡಿದರೆ ಮೋದಿ ಖಾತೆಗೆ ವರ್ಗಾಯಿಸಿ

ಯಾರಾದರೂ ಕೆಟ್ಟ ಮಾತು ಆಡಿದರೆ ಮೋದಿ ಖಾತೆಗೆ ವರ್ಗಾಯಿಸಿ

ಯಾರಾದರೂ ಕೆಟ್ಟ ಮಾತುಗಳನ್ನು ಆಡಿದರೆ ಅದನ್ನು ಮೋದಿಯ ಖಾತೆಗೆ ವರ್ಗಾಯಿಸಿಬಿಡಿ, ನಾನು ಕೆಟ್ಟ ಮಾತುಗಳು, ಎಂತೆಂಥಾ ದುಷ್ಟರನ್ನೇ ಸರಿದಾರಿಗೆ ತಂದಿದ್ದೇನೆ.ಅಂತವರನ್ನೂ ಕಮಲದ ರೀತಿಯಲ್ಲಿ ಅರಳಿಸುತ್ತೇನೆ ಎಂದು ನುಡಿದರು.

ವಾರಣಾಸಿಯಲ್ಲಿ ಕೊನೇ ಕ್ಷಣದ ಆಘಾತ? ಅಡಕತ್ತರಿಯಲ್ಲಿ ಮೋದಿ?

ವಾರಣಾಸಿಯಲ್ಲಿ ಚುನಾವಣಾ ಫಲಿತಾಂಶ ಹೇಗಿರಬೇಕು ಗೊತ್ತಾ

ವಾರಣಾಸಿಯಲ್ಲಿ ಚುನಾವಣಾ ಫಲಿತಾಂಶ ಹೇಗಿರಬೇಕು ಗೊತ್ತಾ

ಒಂದೇ ಒಂದು ಪೋಲಿಂಗ್ ಬೂತ್‌ನಲ್ಲಿ ಸೋತರೂ ಕೂಡ ಬನಾರಸ್‌ನಲ್ಲಿ ಗೆಲುವಿನ ಸಂತೋಷ ಇರುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲಬೇಕು ಅದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಜನತೆಗೆ ಕರೆ ನೀಡಿದರು. ವಾರಣಾಸಿಯ ಚುನಾವಣಾ ಫಲಿತಾಂಶ ಹೇಗಿರಬೇಕು ಅಂದರೆ ರಾಜಕೀಯ ಪಂಡಿತರೆಲ್ಲ ಈ ಫಲಿತಾಂಶದ ಮೇಲೆ ಪುಸ್ತಕವನ್ನು ಬರೆಯುವಂತಿರಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bringing out the "Ahmedabadi" in him, PM Modi listed a few inexpensive ways of campaigning for polls. From having tea at a neighbour's house to explaining Modi's interview, the prime minister said, "You don't need money power to campaign. People to people contact crucial in the elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more