ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಿಲೇಶ್ ಯಾದವ್ ಅವರು ಮಾಯಾವತಿಯ ಒತ್ತಡಕ್ಕೆ ಬಿದ್ದಿದ್ದಾರೆ!

|
Google Oneindia Kannada News

ಲಕ್ನೋ, ಏಪ್ರಿಲ್ 2: "ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರು ಬಿಎಸ್ಪಿ ನಾಯಕಿ ಮಾಯಾವತಿ ಅವರ ಒತ್ತಡಕ್ಕೆ ಬಿದ್ದಿದ್ದಾರೆ" ಎಂದು ಉತ್ತರ ಪ್ರದೇಶದ ನಿಷಾದ್ ಪಕ್ಷದ ಮುಖಂಡ ಸಂಜಯ್ ನಿಷಾದ್ ದೂರಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇತ್ತೀಚೆಗಷ್ಟೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಮೈತ್ರಿಕೂಟದ ಭಾಗವಾಗಿದ್ದ ನಿಷಾದ್ ಪಕ್ಷ ಇತ್ತೀಚೆಗಷ್ಟೇ ಮೈತ್ರಿ ಕಡಿದುಕೊಂಡು ಹೊರಬಂದಿತ್ತು. "ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ನಡುವೆ ಈಗಾಗಲೇ ಹಗ್ಗಜಗ್ಗಾಟ ಆರಂಭವಾಗಿದೆ. ಅಖಿಲೇಶ್ ಅವರು ಮಾಯಾವತಿ ಅವರ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಅನಾಯಾಸವಾಗಿ ಉತ್ತರ ಪ್ರದೇಶದಲ್ಲಿ ಗೆಲ್ಲಲಿದೆ" ಎಂದು ಅವರು ಹೇಳಿದರು.

ಉತ್ತರ ಪ್ರದೇಶ ರಾಜಕೀಯದಲ್ಲಿ ರೋಚಕ ತಿರುವು: ಬಿಜೆಪಿಗೆ ಲಾಭ?ಉತ್ತರ ಪ್ರದೇಶ ರಾಜಕೀಯದಲ್ಲಿ ರೋಚಕ ತಿರುವು: ಬಿಜೆಪಿಗೆ ಲಾಭ?

2017 ರಲ್ಲಿ ನಡೆದ ಉತ್ತರ ಪ್ರದೇಶ ಲೋಕಸಭೆ ಉಪಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾಗಿದ್ದ ಗೋರಖ್ಪುರದಿಂದ ಸ್ಪರ್ಧಿಸಿ ನಿಷಾದ್ ಸಮುದಾಯದ ನಾಯಕ ಪ್ರವೀಣ್ ನಿಷಾದ್ ಅಚ್ಚರಿಯ ಜಯ ಪಡೆದಿದ್ದರು.ಅ ವರಿಗೆ ಎಸ್ಪಿ-ಬಿಎಸ್ಪಿಯ ಬೆಂಬಲವೂ ಇತ್ತು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಅವರು ಈ ಮೈತ್ರಿಕೂಟದಿಂದ ಹೊರನಡೆದಿದ್ದಾರೆ.

Nishad Party tells, Akhilesh Yadav working under Mayawatis Pressure

ನಾವು ಈಗಾಗಲೇ ಬಿಜೆಪಿ ಮುಖಂಡರೊಂದಿಗೆ ಮಾತನಾಡಿದ್ದು, ಅವರಿಂದ ಧನಾತ್ಮಕ ಪ್ರತಿಕ್ರಿಯೆ ಬರಬಹುದು ಎಂದು ಭಾವಿಸಿದ್ದೇವೆ ಎಂದು ಸಂಜಯ್ ನಿಷಾದ್ ಹೇಳಿದ್ದು, ಎಸ್ಪಿ-ಬಿಎಸ್ಪಿ ನಮ್ಮನ್ನು ಕಡೆಗಣಿಸಿದ್ದರಿಂದ ನಾವು ಮೈತ್ರಿಕೂಟದಿಂದ ಆಚೆ ಬಂದಿದ್ದೇವೆ ಎಂದಿದ್ದಾರೆ.

'ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ನಮ್ಮದೇ ನೇರ ಸ್ಪರ್ಧೆ, ನಾವೇ ಗೆಲ್ಲೋದು''ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ನಮ್ಮದೇ ನೇರ ಸ್ಪರ್ಧೆ, ನಾವೇ ಗೆಲ್ಲೋದು'

ಗೋರಖ್ಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರವೀಣ್ ಕುಮಾರ್ ನಿಶಾದ್ 4,56,513 ಮತಗಳನ್ನು ಪಡೆದಿದ್ದರೆ, ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ 4,34,632 ಮತಗಳನ್ನು ಪಡೆದಿದ್ದರು.

English summary
Lok Sabha elections 2019: Akhilesh Yadav was working under Mayawati's "pressure" Nishad Party Party president in UP Sanjay Nishad told
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X