• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉತ್ತರ ಪ್ರದೇಶದ ಗಂಗಾ ನದಿ ಬಳಿ ಮತ್ತೆ ಮೃತದೇಹಗಳು ಪತ್ತೆ

|
Google Oneindia Kannada News

ಲಕ್ನೋ, ಮೇ 15: ಉತ್ತರ ಪ್ರದೇಶದ ಗಂಗಾ ತೀರದಲ್ಲಿ ಬಿದ್ದಿರುವ ಎರಡು ಶವಗಳನ್ನು ಬಲ್ಲಿಯಾ ಜಿಲ್ಲಾಡಳಿತವು ಅಂತ್ಯಕ್ರಿಯೆ ಮಾಡಿದೆ. ಇದೇ ವೇಳೆ ಕೆಲವು ಬೀದಿ ನಾಯಿಗಳು ಮೃತದೇಹಗಳನ್ನು ಎಳೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಗುರುವಾರ ಮಧ್ಯಾಹ್ನ ಶವಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಫೆಫ್ನಾ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ತ್ರಿಪಾಠಿ ತಿಳಿಸಿದ್ದು, ಇದರ ನಂತರ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಜೇಶ್ ಯಾದವ್ ಅವರ ತಂಡವು ಸಾಗರ್‌ಪಾಲಿ ಗ್ರಾಮಕ್ಕೆ ತಲುಪಿ ಶವಗಳನ್ನು ಅಂತ್ಯಕ್ರಿಯೆ ಮಾಡಿದೆ.

ಮೃತ ದೇಹಕ್ಕೆ ಅಂತಿಮ ವಿಧಿ-ವಿಧಾನ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ ಶವಗಳನ್ನು ಕುಟುಂಬ ಸದಸ್ಯರು ನದಿಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಅವರು ತಿಳಿಸಿದರು.

ನಲ್ಲಾಹಿ ಪ್ರದೇಶದ ಉಜಿಯಾರ್, ಕುಲ್ಹಾಡಿಯಾ ಮತ್ತು ಭರೌಲಿ ಘಾಟ್‌ಗಳಲ್ಲಿ ಕನಿಷ್ಠ 52 ಶವಗಳು ತೇಲುತ್ತಿದ್ದವು ಎಂದು ಬಲ್ಲಿಯಾ ನಿವಾಸಿಗಳು ತಿಳಿಸಿದ್ದಾರೆ. ಆದರೆ, ಅಲ್ಲಿ ಪತ್ತೆಯಾದ ಶವಗಳ ನಿಖರ ಸಂಖ್ಯೆಯನ್ನು ಜಿಲ್ಲಾ ಅಧಿಕಾರಿಗಳು ತಿಳಿಸಿಲ್ಲ.

English summary
The Ballia district administration buried two corpses lying on the banks of the Ganga's in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X