ಐಆರ್‌ಸಿಟಿಸಿ ಮತ್ತು ರೈಲ್‌ಒನ್: ರೈಲು ಟಿಕೆಟ್ ಬುಕ್ಕಿಂಗ್‌ಗೆ ಯಾವ ಆ್ಯಪ್ ಉತ್ತಮ?
ಭಾರತ ದೇಶದ ರೈಲ್ವೆ ಸಂಪರ್ಕವು ಜಗತ್ತಿನಲ್ಲೆ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದಾಗಿದೆ. ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಇಲ್ಲಿಯವರೆಗೆ ರೈಲು ಟಿಕೆಟ್ ಬುಕ್ಕಿಂಗ್‌ಗಾಗಿ ಹೆಚ್ಚಿನ ಜನರು ಐಆರ್‌ಸಿಟಿಸಿ ಆ್ಯಪ್‌ನ್ನೇ ಬಳಸುತ್ತಿದ್ದರು. ಆದರೆ ಇದೀಗ ಭಾರತೀಯ ರೈಲ್ವೆ ಹೊಸದಾಗಿ ರೈಲ್‌ಒನ್ ಎಂಬ ಆ್ಯಪ್‌ನ್ನು ಪರಿಚಯಿಸಿದೆ. ಇದನ್ನು ರೈಲ್ವೆಯ "ಸೂಪರ್ ಆ್ಯಪ್" ಎಂದೂ ಕರೆಯಲಾಗುತ್ತಿದೆ.
ರೈಲ್ವೆಯ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರುವ ಪ್ರಮುಖ ಉದ್ದೇಶದಿಂದ, ಈ ಆ್ಯಪ್ ಅನ್ನು 'ಸೆಂಟರ್ ಫಾರ್ ರೈಲ್ವೆ ಇನ್ಫರ್ಮೇಷನ್ ಸಿಸ್ಟಮ್ಸ್' (CRIS) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ.

ಐಆರ್‌ಸಿಟಿಸಿ ಮತ್ತು ರೈಲ್‌ಒನ್ ನಡುವಿನ ಪ್ರಮುಖ ವ್ಯತ್ಯಾಸಗಳು
ಬುಕ್ಕಿಂಗ್ ಸೇವೆಗಳ ವ್ಯಾಪ್ತಿ:
ಐಆರ್‌ಸಿಟಿಸಿ (IRCTC) ಆ್ಯಪ್ ಮುಖ್ಯವಾಗಿ ಮುಂಗಡ ಕಾಯ್ದಿರಿಸಿದ (ರಿಸರ್ವ್ಡ್) ಮತ್ತು ತುರ್ತು ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಜಗತ್ಪ್ರಸಿದ್ಧವಾಗಿದೆ. ಆದರೆ, ಹೊಸದಾಗಿ ಪರಿಚಯಿಸಲಾಗಿರುವ ರೈಲ್‌ಒನ್ (RailOne) ಕೇವಲ ರಿಸರ್ವ್ಡ್ ಟಿಕೆಟ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ.
ಟಿಕೆಟ್‌ಗಳ ಲಭ್ಯತೆ:
ರೈಲ್‌ಒನ್ ಆ್ಯಪ್ ಮೂಲಕ ಪ್ರಯಾಣಿಕರು ಸಾಮಾನ್ಯ (General) ಕೋಚ್ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಹಾಗೂ ಸ್ಥಳೀಯ (Local/Suburban) ರೈಲುಗಳ ಟಿಕೆಟ್‌ಗಳನ್ನು ಸಹ ಅತ್ಯಂತ ಸುಲಭವಾಗಿ ಬುಕ್ ಮಾಡಬಹುದು.
UTS ಸೇವೆಯ ವರ್ಗಾವಣೆ:
ಹಿಂದೆ ಸಾಮಾನ್ಯ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಬುಕ್ ಮಾಡಲು ಪ್ರತ್ಯೇಕವಾಗಿ UTS ಆ್ಯಪ್ ಬಳಸಲಾಗುತ್ತಿತ್ತು. ಆದರೆ ಈಗ ರೈಲ್ವೆ ಇಲಾಖೆಯು ಈ ಎಲ್ಲಾ UTS ಸೇವೆಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿ, ಅವುಗಳನ್ನು ಸಂಪೂರ್ಣವಾಗಿ ರೈಲ್‌ಒನ್ ಆ್ಯಪ್‌ಗೆ ವರ್ಗಾಯಿಸುತ್ತಿದೆ. ಇದರೊಂದಿಗೆ ಪ್ರಯಾಣಿಕರಿಗೆ ಒಂದೇ ಆ್ಯಪ್‌ನಲ್ಲಿ ಎಲ್ಲಾ ರೀತಿಯ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಸಿಗಲಿದೆ.
ರೈಲ್‌ಒನ್ ಆ್ಯಪ್‌ನ ಪ್ರಮುಖ ವಿಶೇಷತೆಗಳು
ರೈಲಿನಲ್ಲಿ ಆಗಾಗ್ಗೆ ಪ್ರಯಾಣ ಮಾಡುವವರಿಗೆ ರೈಲ್‌ಒನ್ ಆ್ಯಪ್ ತುಂಬಾ ಉಪಯುಕ್ತವಾಗಿದೆ.
ರೈಲಿನಲ್ಲಿ ಆಗಾಗ್ಗೆ ಮತ್ತು ನಿಯಮಿತವಾಗಿ ಪ್ರಯಾಣಿಸುವವರಿಗೆ ರೈಲ್‌ಒನ್ ಆ್ಯಪ್ ಒಂದು ಅತ್ಯುತ್ತಮ ಡಿಜಿಟಲ್ ಆಪ್ತಮಿತ್ರನಾಗಿದೆ. ಇದು ಪ್ರಯಾಣಿಕರ ಸಮಯವನ್ನು ಉಳಿಸುವುದಲ್ಲದೆ, ರೈಲ್ವೆ ಸೇವೆಗಳನ್ನು ಹೆಚ್ಚು ಉಪಯೊಗಿಸುದಕ್ಕೆ ಸುಲಭವಾಗಿಸಿದೆ. ಈ ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:
ಸಾಮಾನ್ಯ ಟಿಕೆಟ್ ಬುಕ್ಕಿಂಗ್ ವೇಗವಾಗಿ ಮಾಡಬಹುದು.
ನಿಲ್ದಾಣದಲ್ಲಿ ಸಾಲಿನಲ್ಲಿ ನಿಲ್ಲದೇ ಟಿಕೆಟ್ ಪಡೆಯಬಹುದು.
ಪ್ರಯಾಣಿಕರ ವಿವರಗಳನ್ನು ಮುಂಚಿತವಾಗಿಯೇ ಸೇವ್ ಮಾಡಿಟ್ಟುಕೊಳ್ಳಬಹುದು.
ಐಆರ್‌ಸಿಟಿಸಿ ಮತ್ತು UTS ಖಾತೆಗಳ ಮೂಲಕವೇ ಲಾಗಿನ್ ಮಾಡಬಹುದು.
ಲೈವ್ ರೈಲು ಟ್ರ್ಯಾಕಿಂಗ್, PNR ಸ್ಟೇಟಸ್, ಕೋಚ್ ಪೊಸಿಷನ್ ಮತ್ತು ಆಹಾರ ಆರ್ಡರ್ ಮಾಡುವ ಸೌಲಭ್ಯ ಒಂದೇ ಆ್ಯಪ್‌ನಲ್ಲಿ ಲಭ್ಯವಿದೆ.
ಯಾವ ಆ್ಯಪ್ ಆಯ್ಕೆ ಮಾಡುವುದು ಉತ್ತಮ?
ನಿಮ್ಮ ಮುಖ್ಯ ಉದ್ದೇಶ ರಿಸರ್ವ್ಡ್ ಅಥವಾ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಆಗಿದ್ದರೆ ಐಆರ್‌ಸಿಟಿಸಿ ಆ್ಯಪ್ ಇನ್ನೂ ಹೆಚ್ಚು ಸ್ಥಿರ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿದೆ. ವಿಶೇಷವಾಗಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇನ್ನೊಂದೆಡೆ ರೈಲ್‌ಒನ್ ಹೊಸ ಆ್ಯಪ್ ಆಗಿರುವುದರಿಂದ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಅಥವಾ ಪಾವತಿ ಸಂಬಂಧಿತ ತೊಂದರೆಗಳು ಎದುರಾಗಬಹುದು.
ಆದರೆ ಒಂದೇ ಆ್ಯಪ್‌ನಲ್ಲಿ ಸಾಮಾನ್ಯ ಟಿಕೆಟ್, ಪ್ಲಾಟ್‌ಫಾರ್ಮ್ ಟಿಕೆಟ್, ಲೈವ್ ಟ್ರೇನ್ ಟ್ರ್ಯಾಕಿಂಗ್, PNR ಸ್ಟೇಟಸ್ ಮತ್ತು ಆಹಾರ ಆರ್ಡರ್ ಸೇರಿದಂತೆ ಹಲವು ಸೇವೆಗಳನ್ನು ಪಡೆಯಲು ಬಯಸುವವರಿಗೆ ರೈಲ್‌ಒನ್ ಉತ್ತಮ ಆಯ್ಕೆಯಾಗಿದೆ.
ಅಂತಿಮವಾಗಿ: ಮುಂಗಡ ಕಾಯ್ದಿರಿಸಿದ ಮತ್ತು ತುರ್ತು ಸಂದರ್ಭದ (ತತ್ಕಾಲ್) ಟಿಕೆಟ್‌ಗಳನ್ನು ಟಿಕೆಟ್‌ಗಳಿಗೆ ಐಆರ್‌ಸಿಟಿಸಿ ಇನ್ನೂ ಮೊದಲ ಆಯ್ಕೆಯಾಗಿದ್ದರೆ, ರೈಲ್ವೆಯ ಬಹುತೇಕ ಎಲ್ಲಾ ಸೇವೆಗಳನ್ನು ಒಂದೇ ಜಾಗದಲ್ಲಿ ಪಡೆಯಲು ರೈಲ್‌ಒನ್ ಭವಿಷ್ಯದ ಆಲ್-ಇನ್-ಒನ್ ರೈಲ್ವೆ ಆ್ಯಪ್ ಆಗಿ ಹೊರಹೊಮ್ಮುತ್ತಿದೆ.














Click it and Unblock the Notifications