ಯುಪಿ ಚುನಾವಣೆ: ಸಚಿವರ ರಾಜೀನಾಮೆ ಕೇವಲ ಟೀಸರ್ ಎಂದ ರಾಜ್‌ಭರ್
ಲಕ್ನೋ ಜನವರಿ 13: ಕಳೆದ 24 ಗಂಟೆಗಳಲ್ಲಿ ಬಿಜೆಪಿಯನ್ನು ಸಚಿವರು ತೊರೆದಿದ್ದು ಕೇವಲ ಟೀಸರ್ ಮಾತ್ರ ಎಂದು ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ. ಈ ಹೇಳಿಕೆ ಉತ್ತರಪ್ರದೇಶದಲ್ಲಿ ಮತ್ತಷ್ಟು ಜನನಾಯಕರು ಬಿಜೆಪಿ ತೊರೆಯಲಿದ್ದಾರೆನ್ನುವುದನ್ನು ಸೂಚಿಸಿದ್ದು ಮುಂಬರುವ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸಚಿವರು, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಜೆಪಿಯ ಮಿತ್ರಪಕ್ಷವಾಗಿದ್ದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಈಗ ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸಚಿವರು ಮತ್ತು ಶಾಸಕರು ಬಿಜೆಪಿ ಪಕ್ಷ ತೊರೆಯುತ್ತಿರುವ ಬಗ್ಗೆ ಎಚ್‌ಟಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜ್‌ಭರ್ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಇಷ್ಟು ಬಿಜೆಪಿ ನಾಯಕರು ಮತ್ತು ಸಚಿವರು ಏಕೆ ಪಕ್ಷ ತೊರೆಯುತ್ತಿದ್ದಾರೆ?
ಮೂರು ವರ್ಷಗಳ ಹಿಂದೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದಾಗ ನನಗೆ ಇದೇ ಅನುಭವವಾಗಿತ್ತು. ಅವರು ಹಿಂದುಳಿದ ವರ್ಗಗಳು ಮತ್ತು ದಲಿತರ ಶತ್ರುಗಳು ಎಂದು ನಾನು ಅರಿತುಕೊಂಡೆ. ಇಂದು ಈ ವಿಷಯವನ್ನಯ ದಾರಾ ಸಿಂಗ್ ಚೌಹಾಣ್ ಅವರು ಖಚಿತಪಡಿಸಿದ್ದಾರೆ ಮತ್ತು ಸ್ವಾಮಿ ಪ್ರಸಾದ್ ಮೌರ್ಯ ಕೂಡ ಇದೇ ವಿಷಯವನ್ನು ಖಚಿತಪಡಿಸಿದ್ದಾರೆ. ನೀವು ಸ್ಪೈ ಕ್ಯಾಮ್‌ನಲ್ಲಿ ಬಿಜೆಪಿ ನಾಯಕರನ್ನು ಮಾತನಾಡಿಸಿದರೆ, ಅವರು ಅದನ್ನೇ ಬಹಿರಂಗಪಡಿಸುತ್ತಾರೆ. ಆದರೆ ಇದು ಯಾವ ನಾಯಕರಿಗೂ ಇಷ್ಟವಿಲ್ಲ. ಆದರೆ ಅವರು ಅಸಹಾಯಕರಾಗಿದ್ದಾರೆ ಎಂದರು.
OBC-ವಿರೋಧಿ ನೀತಿ ಎಂದು ಕರೆಯಲು ಕಾರಣವೇನು?
ಡಿಸೆಂಬರ್ 2020 ರಲ್ಲಿ OBC ಕೋಟಾದಡಿ 69,000 ಶಿಕ್ಷಕರ ಸೇರ್ಪಡೆಯಾಗಬೇಕಿತ್ತು. ಆದರೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ನೇಮಕಾತಿಗಳಲ್ಲಿ 27% OBC ಕೋಟಾವನ್ನು ಸಹ ಪೂರೈಸಲಾಗಿಲ್ಲ. ಆದರೆ ಜುಲೈನಲ್ಲಿ ನಡೆದ ಸಂಪುಟ ಪುನಾರಚನೆಯಲ್ಲಿ ದಾಖಲೆ ಸಂಖ್ಯೆಯ ಒಬಿಸಿ ನಾಯಕರನ್ನು ಕರೆತರುವ ಮೂಲಕ ಬಿಜೆಪಿ ಅದನ್ನು ಎದುರಿಸಲು ಸಾಧ್ಯವಾಯಿತು. ಕಳೆದ ವಾರ ಜನವರಿಯಲ್ಲಿ ಚುನಾವಣೆಯನ್ನು ಘೋಷಿಸುವ ಮೊದಲು ಒಬಿಸಿ ಮತ್ತು ದಲಿತ ಕೋಟಾವನ್ನು ಲೂಟಿ ಮಾಡಲಾಗಿದೆ ಎಂದು ಸಾವಿರಾರು ಮಕ್ಕಳು ಲಕ್ನೋದಲ್ಲಿ ಧರಣಿ ನಡೆಸುತ್ತಿದ್ದರು. ಯೋಗಿಜಿ ಅವರನ್ನು ಥಳಿಸಲು ಪೊಲೀಸರನ್ನು ಬಳಸಿಕೊಂಡರು. ಈ ಮಂತ್ರಿ ಕೇವಲ ಚುನಾವಣಾ ಮಂತ್ರಿ ಆಗಿದ್ದಾರೆ. ಅವರ ನೇಮಕಾತಿಯ ಅರ್ಥವೇನೆಂದರೆ ಹೆಚ್ಚು ಹಿಂದುಳಿದವರು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ದುರುದ್ದೇಶವಿದೆ ಎಂದರು.

ಒಬಿಸಿ ವೋಟ್ ಬ್ಯಾಂಕ್ ಎಸ್ಪಿಗೆ ಬದಲಾಗಲಿದೆಯೇ?
ಪ್ರತಿ ಸಮುದಾಯವು ತನ್ನದೇ ಆದ ನಾಯಕತ್ವವನ್ನು ಹೊಂದಿದೆ. ತನ್ನದೇ ಆದ ಪಕ್ಷವನ್ನು ಸ್ಥಾಪಿಸಿದೆ ಮತ್ತು ತನ್ನದೇ ಆದ ಮತವನ್ನು ಹೊಂದಿದೆ. ಅದು ಆ ಸಮುದಾಯದ ಸಬಲೀಕರಣವನ್ನು ಖಾತ್ರಿಗೊಳಿಸುತ್ತದೆ ಮತ್ತು ಆರಂಭದಲ್ಲಿ, ಬಿಜೆಪಿಯು ಈ ಎಲ್ಲಾ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತು. ತನ್ನ ಕಾರ್ಯ ಸಾಧನೆಗೆ ಸಹಾಯ ಮಾಡಿದ ಸಣ್ಣ ಪಕ್ಷಗಳನ್ನು ಬಿಜೆಪಿ ಕಡೆಕಣಿಸುತ್ತಿದೆ. SP ಈಗ ಪೂರ್ವಾಂಚಲ ಪ್ರದೇಶಕ್ಕಾಗಿ ರಾಜ್ಬರ್ ಸಮುದಾಯದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿ ಮಾಡಿಕೊಂಡ ಪಕ್ಷ ಅವರಿಗೆ ಮತಗಳನ್ನು ನೀಡುತ್ತದೆ. ಅದೇ ರೀತಿ ಇತರ ಸಣ್ಣ ಪಕ್ಷಗಳೊಂದಿಗಿನ ಪ್ರಮುಖ ಮೈತ್ರಿಗಳು ಪ್ರಮುಖ ಸಮುದಾಯದ ಮತಗಳನ್ನು ನೀಡುತ್ತವೆ ಎಂದಿದ್ದಾರೆ.
ಬಿಜೆಪಿಯು ಆಡಳಿತ ವಿರೋಧಿ ಸ್ಥಿತಿಯನ್ನು ಎದುರಿಸಬಹುದಾದರೂ, ಅದು 200 ಸ್ಥಾನಗಳನ್ನು ಗೆಲ್ಲುವುದನ್ನು ನೋಡಬಹುದು ಎಂದು ಹಲವರು ಸೂಚಿಸುತ್ತಾರೆ?
Recommended Video
ಅದು ಸುಳ್ಳು. ಪೂರ್ವಾಂಚಲದಲ್ಲಿ ನಮ್ಮ ಸಮುದಾಯವು 12-22% ಮತಗಳನ್ನು ಹೊಂದಿದ್ದು, ನಾವು ಬಿಜೆಪಿಗೆ ಮತ ಹಾಕಿದ್ದೇವೆ. ಆದರೀಗ ಅವರು ನಮ್ಮ ಮತವನ್ನು ಕಳೆದುಕೊಂಡಿದ್ದಾರೆ. ಅವರು ಪ್ರಜಾಪತಿ ಮತಗಳನ್ನು ಕಳೆದುಕೊಂಡಿದ್ದಾರೆ ಮತ್ತು 100% ಕುಶ್ವಾಹಗಳು ಕಳೆದ ಬಾರಿ ಬಿಜೆಪಿಗೆ ಮತ ಹಾಕಿದ್ದರು. ಅವರನ್ನೂ ಅವರು ಕಳೆದುಕೊಂಡಿದ್ದಾರೆ. ಪಟೇಲ್ ಮತಗಳನ್ನು ಮತ್ತು ಅವರಿಗೆ ಮತ ಹಾಕಿದ ಯಾದವ ಮತ್ತು ಮುಸ್ಲಿಮರನ್ನು ಸಹ ಅವರು ಕಳೆದುಕೊಂಡಿದ್ದಾರೆ. ಬಿಜೆಪಿಗೆ ಮತ ಹಾಕಿದ್ದ ನಿಶಾದ್, ಮಲ್ಲಾಸ್, ಮಜರ್, ಕಶ್ಯಪ್ ಮುಂತಾದವರು ಅವರಿಗೆ ಮತ ಹಾಕುವುದಿಲ್ಲ. ಈ ಲಕ್ಷಗಟ್ಟಲೆ ಜನರು ಈಗ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದರು.
{document1}












Click it and Unblock the Notifications