ಮಮತಾ ಬ್ಯಾನರ್ಜಿ 'ರಾಕ್ಷಸಿ', ಬಂಗಾಳ 'ಲಂಕೆ' ಎಂದ ಬಿಜೆಪಿ ನಾಯಕ
Recommended Video
ಲಕ್ನೋ, ಜೂನ್ 07: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಕ್ಷಸಿ ಎಂದು ಕರೆಯುವ ಮೂಲಕ ಬಿಜೆಪಿ ಮುಖಂಡ ಸುರೇಂದ್ರ ಸಿಂಗ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, "ಲಂಕೆಗೆ ತೆರಳಿದ್ದ ಹನುಮಂತನ ಹಾದಿಗೆ ಮುಳುವಾಗಲು ಪ್ರಯತ್ನಿಸಿದ ರಾಕ್ಷಸರಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಾದಿಗೆ ಮಮತಾ ಬ್ಯಾನರ್ಜಿ ಮುಳುವಾಗುತ್ತಿದ್ದಾರೆ" ಎಂದು ಸುರೇಂದ್ರ ಸಿಂಗ್ ಹೇಳಿದರು.
"ಈ ದೇಶವು ಯೋಗಿ ಆದಿತ್ಯನಾಥ್ ರೂಪದಲ್ಲಿ ಹನುಮಂತನನ್ನು ಹೊಂದಿದೆ. ಆತನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈಗ ರಾಕ್ಷಸಿಯನ್ನು ಸೋಲಿಸಲಾಗಿದ್ದು, ವಿಭೀಷಣನ ಯುಗ ಆರಂಭವಾಗಲಿದೆ" ಎಂದು ಸಿಂಗ್ ಹೇಳಿದರು.

ಈಗಾಗಲೇ ಟಿಎಂಸಿ ಯಿಂದ ಬಿಜೆಪಿಗೆ ಆಗಮಿಸಿದ, ಮತ್ತು ಆಗಮಿಸಲಿರುವ ಶಾಸಕರನ್ನು ವಿಭೀಷಣರು ಎಂದು ಕರೆದ ಸಿಂಗ್, ಈ ವಿಭೀಷಣತರೆಲ್ಲ ಸೇರಿ ಮಮತಾ ಅವರ ಲಂಕೆಯನ್ನು ವಶಪಡಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಇದರೊಟ್ಟಿಗೆ ಉತ್ತರ ಪ್ರದೇಶ ರಾಜಕಾರಣದ ಬಗ್ಗೆಯೂ ಮಾತನಾಡಿದ ಸಿಂಗ್, ಅಖಿಲೇಶ್ ಯಾದವ್ ಕಟುಕ ಎಂದರು. ಮಾಯಾವತಿಯೂ ಅಷ್ಟೇ, ಹಣಕ್ಕಾಗಿ ಸಮಾಜವಾದಿ ಪಕ್ಷದೊಂದಿಗೆ ಬಹುಜನ ಸಮಾಜ ಪಕ್ಷದ ಮೈತ್ರಿ ಮಾಡಿಕೊಂಡರು ಎಂದು ಅವರು ದೂರಿಸರು.











Click it and Unblock the Notifications