Get Updates
Get notified of breaking news, exclusive insights, and must-see stories!

ರಾಜ್‌ನಾಥ್‌ಸಿಂಗ್‌ ಗೆ ಶಾಟ್‌ಗನ್ ಪತ್ನಿಯ ಸವಾಲು

ಲಕ್ನೋ,ಮೇ 6: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಪ್ರತಿನಿಧಿಸುತ್ತಿದ್ದ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತುರುಸಿನ ಸ್ಪರ್ಧೆ ಎದುರಾಗಿದೆ. ಕೇಂದ್ರ ಸಚಿವ ರಾಜನಾಥ್ ಸಿಂಗ್‌ಗೆ ನಟಿ ಹಾಗೂ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸ್ಪರ್ಧೆ ನೀಡುತ್ತಿದ್ದಾರೆ. ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಪೂನಂ ಸಿನ್ಹಾ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದಿಂದ ಪೂನಂಗೆ ಟಿಕೆಟ್ ದೊರೆತಿದೆ.

ಸತತವಾಗಿ ವಾಜಪೇಯಿ ಗೆದ್ದುಕೊಂಡು ಬಂದಿರುವ ಈ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎನಿಸಿದೆ. ಷಿಯಾ ಮುಸ್ಲಿಂ ಹಾಗೂ ಮೇಲ್ವರ್ಗಗಳ ಮತಗಳ ಮೂಲಕ ಕಳೆದ ಬಾರಿ ರಾಜನಾಥ್ ಸಿಂಗ್ ಕೂಡ ಸುಲಭವಾಗಿ ಗೆದ್ದಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ ಬ್ರಾಹ್ಮಣ ಅಭ್ಯರ್ಥಿಯನ್ನು ಹಾಕಿರವುದು ಬಿಜೆಪಿಗೆ ತಲೆನೋವಾಗಿದೆ.

ಇನ್ನೊಂದೆಡೆ ಬಿಹಾರದ ಪಟನಾ ಸಾಹಿಬ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶತ್ರುಘ್ನ ಸಿನ್ಹಾ ಪತ್ನಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿರುವುದು ರಾಜಕೀಯ ತಂತ್ರಗಾರಿಕೆ ಎನ್ನಲಾಗುತ್ತಿದೆ.

lucknow will witness fight of Rajnath singh and poonam

ರಾಹುಲ್‌ ಗಾಂಧಿ ಹಾಗೂ ಅಖಿಲೇಶ್ ನಂಟು ಬಳಸಿಕೊಂಡು ಸಿನ್ಹಾ ಕುಟುಂಬ ಈ ರಾಜಕೀಯ ಮಾಡುತ್ತಿದೆ. ಆದರೆ ಬಿಹಾರದಲ್ಲಿ ಕಾಂಗ್ರೆಸ್‌, ಲಕ್ನೋದಲ್ಲಿ ಎಸ್‌ಪಿ ಪರವಾಗಿ ಮತಯಾಚನೆ ಮಾಡುತ್ತಿರುವುದು ಸ್ಥಳೀಯ ಕಾಂಗ್ರಸ್ಸಿಗರ ಕೆಂಗಣ್ಣಿಗೂ ಗುರಿಯಾಗಿದೆ. ನಾನು ಪತ್ನಿ ಧರ್ಮ ಪಾಲಿಸುತ್ತಿದ್ದೇನೆ ಎಂದು ಶಾಟ್ ಗನ್‌ ಎಂದು ಖ್ಯಾತರಾಘಿರುವ ಶತ್ರುಘ್ನ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+