ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹುಟ್ಟಿನಿಂದ ಹಿಂದುಳಿದ ವರ್ಗದವರಲ್ಲ: ಮಾಯಾವತಿ

|
Google Oneindia Kannada News

Recommended Video

ಮಾಯಾವತಿ ಹೇಳಿದ್ದು ನಿಜಾನಾ?

ಜಲೌನ್, ಏಪ್ರಿಲ್ 26: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟಿನಿಂದ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದರು.

ಲೋಕಸಭಾ ಚುನಾವಣೆ ವಿಶೇಷ ಪುಟ

ಉತ್ತರ ಪ್ರದೇಶದ ಜಲೌನ್‌ನಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ತಾವು ಈಗಲೂ ಸಮಾಜದ ದುರ್ಬಲ ವರ್ಗಕ್ಕೆ ಸೇರಿದವರೆಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಮೋದಿ ಅವರು ಹುಟ್ಟಿನಿಂದಲೂ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ ಎಂದರು.

ನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿ ನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿ

ಮೋದಿ ಅವರು ಗುಜರಾತ್‌ನಲ್ಲಿ ಸರ್ಕಾರ ರಚಿಸಿದ ಬಳಿಕ ಅವರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಲಾಯಿತು. ಅವರಿಗೆ ಹಿಂದುಳಿದ ವರ್ಗಗಳ ಜನರ ಮತಗಳಷ್ಟೇ ಬೇಕು. ಅವರೊಬ್ಬ ಸುಳ್ಳುಗಾರ' ಎಂದು ಆರೋಪಿಸಿದರು.

Lok Sabha elections 2019 modi was not belong to backward class by birth Mayawati

ಮೀಸಲು ವರ್ಗಗಳ ಜನರಿಗೆ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ ಎಂದು ದೂರಿದ ಮಾಯಾವತಿ, ಮೋದಿ ಅವರು ಹಿಂದುಳಿದ ವರ್ಗದವರ ನಿಜವಾದ ಹಿತ ಚಿಂತಕರಾಗಿದ್ದರೆ ಮೀಸಲಾತಿಗೆ ಸಂಬಂಧಿಸಿದಂತೆ ನಿಮ್ಮ ಪರಿಸ್ಥಿತಿ ಇಷ್ಟು ಕೆಟ್ಟದಾಗಿ ಇರುತ್ತಿರಲಿಲ್ಲ ಎಂದರು.

ನೀವು ನಕಲಿ ಹಿಂದುಳಿದ ವರ್ಗದವರು: ಮೋದಿ ವಿರುದ್ಧ ತೇಜಸ್ವಿ ವಾಗ್ದಾಳಿನೀವು ನಕಲಿ ಹಿಂದುಳಿದ ವರ್ಗದವರು: ಮೋದಿ ವಿರುದ್ಧ ತೇಜಸ್ವಿ ವಾಗ್ದಾಳಿ

ಉತ್ತರ ಪ್ರದೇಶದ ಬಂದಾದಲ್ಲಿ ಗುರುವಾರ ಮಾತನಾಡಿದ್ದ ಮೋದಿ, ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟ ಜಾತಿ ರಾಜಕೀಯದಲ್ಲಿ ಮುಳುಗಿವೆ. ಈ ಪಕ್ಷಗಳ ಜನರು ನನ್ನ ಜಾತಿ ಪ್ರಮಾಣಪತ್ರವನ್ನು ಹಂಚುವುದರಲ್ಲಿ ಬ್ಯುಜಿಯಾಗಿದ್ದಾರೆ ಎಂದು ಆರೋಪಿಸಿದ್ದರು.

English summary
Lok Sabha elections 2019: Uttar Pradesh BSP leader Mayawati said that, Prime Minister Narendra Modi does not belong to bachward class by birth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X