• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಸನ್ಯಾಸಿ, ಮತ ಹಾಕದಿದ್ದರೆ ಶಾಪ ಕೊಡ್ತೀನಿ: ಸಾಕ್ಷಿ ಮಹಾರಾಜ್ ಮತ್ತೆ ವಿವಾದ

|

ಲಕ್ನೋ, ಏಪ್ರಿಲ್ 12: ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದ ಉನ್ನಾವೊದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಬೆದರಿಕೆ ಒಡ್ಡುವ ಮತ್ತೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಮತಯಾಚನೆಗೆ ಅಭ್ಯರ್ಥಿಗಳು ಮುಂದಾದರೆ ಸಾಕ್ಷಿ ಮಹಾರಾಜ್ ಮತ ಹಾಕುವಂತೆ ವಿಶಿಷ್ಟ ರೀತಿಯಲ್ಲಿ ಹೇಳಿದ್ದಾರೆ.

ಜುಮಾ ಮಸೀದಿಯನ್ನು ಧ್ವಂಸಗೊಳಿಸಿ: ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

ತಮಗೆ ಮತ ಹಾಕದೆ ಇದ್ದರೆ ತಾವು ಶಾಪ ನೀಡುವುದಾಗಿ ಸಾಕ್ಷಿ ಮಹಾರಾಜ್ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

'ನಾನೊಬ್ಬ ಸನ್ಯಾಸಿ. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ. ಮತ್ತು ನಿಮಗೆ ಶಾಪ ಹಾಕುತ್ತೇನೆ' ಎಂದು ಸಾಕ್ಷಿ ಮಹಾರಾಜ್ ಹೇಳಿರುವುದಾಗಿ ಎಬಿಪಿ ಸುದ್ದಿವಾಹಿನಿ ವರದಿ ಮಾಡಿದೆ.

'ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ನಾನು ದೇವಸ್ಥಾನದಲ್ಲಿ ಭಜನೆ, ಕೀರ್ತನೆ ಮಾಡಿಕೊಂಡಿರುತ್ತೇನೆ. ಆದರೆ, ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದೇನೆ. ನಾನೊಬ್ಬ ಸನ್ಯಾಸಿ. ನಿಮ್ಮ ಮನೆ ಬಾಗಿಲಿನ ಬಳಿ ಬೇಡಲು ಬಂದಿದ್ದೇನೆ. ಸನ್ಯಾಸಿಯನ್ನು ನೀವು ನಿರಕಾರಿಸಿದರೆ ನಿಮಗೆ ಶಾಪ ನೀಡುತ್ತೇನೆ' ಎಂದಿದ್ದಾರೆ.

ಉನ್ನಾವೋದಲ್ಲಿ ಟಿಕೆಟ್, ಪಕ್ಷಕ್ಕೆ ಎಚ್ಚರಿಕೆ ನೀಡಿಲ್ಲ : ಸಂಸದ ಸಾಕ್ಷಿ ಮಹಾರಾಜ್

2019ರಲ್ಲಿ ಮೋದಿ ಸುನಾಮಿ ಇದ್ದು, ಇದರ ಬಳಿಕ ಮತ್ತೆ ಚುನಾವಣೆಗಳು ನಡೆಯುವ ಅಗತ್ಯವೇ ಇರುವುದಿಲ್ಲ ಎಂದು ಸಾಕ್ಷಿ ಮಹಾರಾಜ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

'ನಾನೊಬ್ಬ ತಪಸ್ವಿ. ನನ್ನ ಮನಸಿಗೆ ಏನು ಬರುತ್ತದೆಯೋ ಅದನ್ನು ಹೇಳುತ್ತೇನೆ. ಈ ಚುನಾವಣೆಯ ಬಳಿಕ 2024ರಲ್ಲಿ ಚುನಾವಣೆಯೇ ಇರುವುದಿಲ್ಲ. ಇದೊಂದೇ ಚುನಾವಣೆ ಇರುವುದು. ಇದು ದೇಶದ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟ ಎಂದು ಅವರು ಹೇಳಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2014ರಲ್ಲಿ ಮೋದಿ ಅಲೆ ಇತ್ತು. ಆದರೆ 2019ರಲ್ಲಿ ಮೋದಿ ಸುನಾಮಿ ಇದೆ. ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದರಿಂದ ಜಗತ್ತಿನಲ್ಲಿ ಯಾವ ಶಕ್ತಿಯೂ ಅವರನ್ನು ತಡೆಗಟ್ಟಲಾರರು ಎಂದಿದ್ದರು.

English summary
Lok Sabha elections 2019 : Uttar Pradesh Unnao BJP MP Sakshi Maharaj said, 'I am a monk. I will curse if you don't vote for me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X