• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂಮಿ ವ್ಯಾಜ್ಯದಲ್ಲಿ 9 ಮಂದಿಯನ್ನು ಗುಂಡು ಹಾರಿಸಿ ಕೊಂದರು

|

ಸೋನ್ ಭದ್ರ(ಉತ್ತರಪ್ರದೇಶ), ಜುಲೈ 17: ಉತ್ತರಪ್ರದೇಶ ಪೂರ್ವಭಾಗದ ಸೋನ್ ಭದ್ರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಒಂಬತ್ತು ಮಂದಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಭೂ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದ್ದು, ಶೂಟೌಟ್ ನಲ್ಲಿ ಇತರ ಹತ್ತೊಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.

"ಸೋನ್ ಭದ್ರ ಜಿಲ್ಲೆಯ ಉಭ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಹಳ್ಳಿ ಮುಖ್ಯಸ್ಥ ಯಗ್ಯಾ ದತ್ ಎರಡು ವರ್ಷದ ಹಿಂದೆ ಮೂವತ್ತಾರು ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಬುಧವಾರದಂದು ಯಗ್ಯಾ ದತ್ ಮತ್ತು ಇತರರು ಆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ತೆರಳಿದ್ದಾರೆ. ಅದಕ್ಕೆ ಸ್ಥಳೀಯ ಹಳ್ಳಿಗರು ವಿರೋಧಿಸಿದ್ದಾರೆ.

ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ನೀಡಲಿಲ್ಲ ಎಂದು ಇಬ್ಬರನ್ನು ಢಂ ಎನಿಸಿದ

"ಆಗ ಹಳ್ಳಿಯ ಮುಖ್ಯಸ್ಥನ ಜತೆಗೆ ಬಂದಿದ್ದವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆ ವೇಳೆ ಒಂಬತ್ತು ಮಂದಿ ಹಳ್ಳಿಗರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಸಹ ಇದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

"ಹಳ್ಳಿಯ ಪ್ರಧಾನ ತನ್ನ ಜತೆಗೆ ಟ್ರ್ಯಾಕ್ಟರ್ ನಲ್ಲಿ ಹಲವು ಮಂದಿಯನ್ನು ಕರೆತಂದಿದ್ದ. ಭೂಮಿಯನ್ನು ವಶಕ್ಕೆ ಪಡೆಯಲು ಆರಂಭಿಸಿದ. ಆ ವೇಳೆಗೆ ಹಳ್ಳಿಗರು ವಿರೋಧಿಸಲು ಆರಂಭಿಸಿದ್ದರಿಂದ ಆತ ಮತ್ತು ಸಹಚರರು ಹಳ್ಳಿಗರ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಸೋನ್ ಭದ್ರ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.

ಈ ಹಿಂದಿನಿಂದಲೂ ಹಳ್ಳಿಗರು ಮತ್ತು ಹಳ್ಳಿ ಮುಖ್ಯಸ್ಥನ ಮಧ್ಯೆ ಭೂ ವಿವಾದ ಇದ್ದು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿ ಆಗಲು ಅದೇ ಕಾರಣ ಎಂದು ಹೇಳಲಾಗಿದೆ. ಈ ಘಟನೆ ಬಗ್ಗೆ ತಿಳಿದ ಕೂಡಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಉತ್ತರಪ್ರದೇಶ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

English summary
Land dispute in Uttar Pradesh Sonabhadra district, including 3 woman 9 shot dead. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X