ನಿಮ್ಮ ಹತ್ತಿರ ಜಗಳಕ್ಕೆ ಬಂದವರ ಕೊಂದೇ ಬನ್ನಿ ಎಂದ ವಿ.ವಿ. ಉಪ ಕುಲಪತಿ
ನಮ್ಮ ಹತ್ತಿರ ಅಳುತ್ತಾ ದೂರು ತರಬೇಡಿ. ಯಾರಾದರೂ ಜಗಳ ಮಾಡಿದರೆ, ಹೊಡೆದು ಬನ್ನಿ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕೊಂದುಬಿಡಿ. ನಾವು ಮಿಕ್ಕಿದ್ದು ನೋಡಿಕೊಳ್ತೀವಿ ಎಂಬ ಹೇಳಿಕೆ ನೀಡುವ ಮೂಲಕ ಜೌನ್ ಪುರ್ ನಲ್ಲಿರುವ ಪೂರ್ವಾಂಚಲ್ ವಿಶ್ವವಿದ್ಯಾಲಯದ ಉಪ ಕುಲಪತಿ ವೀರ್ ಬಹಾದ್ದೂರ್ ಸಿಂಗ್ ಹೇಳಿದ್ದಾರೆ.
ಘಾಜಿಪುರ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳಿಗೆ ಬಂಡೆಗೆ ಗುದ್ದಿ ನೀರು ತರುವ ಶಕ್ತಿ ಇರುತ್ತದೆ. ತನ್ನ ಜೀವನದಲ್ಲಿ ಮಾಡಿದ ಸಂಕಲ್ಪವನ್ನು ಯಾವ ವಿದ್ಯಾರ್ಥಿ ಪೂರೈಸುತ್ತಾರೋ ಅವರೇ ಪೂರ್ವಾಂಚಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂದಿದ್ದಾರೆ.
ಜಗಳಕ್ಕೆ ಬೀಳುವ ವಿದ್ಯಾರ್ಥಿಗಳು ತಾವು ಹೊಡೆತ ತಿನ್ನಬಾರದು. ಅದರ ಬದಲು ತಾನೇ ಎದುರಿನವರಿಗೆ ಹೊಡೆಯಬೇಕು ಮತ್ತು ಸಾಧ್ಯವಾದ ಕೊಂದುಬಿಡಬೇಕು ಎಂದು ಹೇಳಿದ್ದಾರೆ.

ನೀವು ಪೂರ್ವಾಂಚಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರೆ ಅಳುತ್ತಾ ನನ್ನ ಬಳಿ ಬರಬೇಡಿ. ಯಾರೊಂದಿಗಾದರೂ ಜಗಳಕ್ಕೆ ಬಿದ್ದರೆ. ಆ ವ್ಯಕ್ತಿಯನ್ನು ನೀವೇ ಹೊಡೆಯಿರಿ. ಸಾಧ್ಯವಾದರೆ ಕೊಂದುಬಿಡಿ. ನಾವು ಮುಂದಿನ ವಿಚಾರಗಳನ್ನು ನೋಡಿಕೊಳ್ತೀವಿ ಎಂದಿದ್ದಾರೆ.
ಈ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಉಪ ಕುಲಪತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿವೆ.












Click it and Unblock the Notifications