8 ಮಂದಿ ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಂಬಂಧಿ ಬಂಧನ
ಕಾನ್ಪುರ, ಜುಲೈ 7: ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ವಿಕಾಸ್ ದುಬೆ ಸಂಬಂಧಿಯನ್ನು ಬಂಧಿಸಲಾಗಿದೆ. ರೌಡಿ ಶೀಟರ್ ವಿಕಾಸ್ ದುಬೆ ಅಡಗಿ ಕುಳಿತಿದ್ದ ಜಾಗದ ಜಾಡು ಹಿಡಿದು 50 ಮಂದಿರ ಇರುವ ಪೊಲೀಸ್ ತಂಡ ತೆರಳಿತ್ತು. ಅದರಲ್ಲಿ ವಿಕಾಸ್ ದುಬೆ ಹಾಗೂ ಆತನ ಸಹಚರರು ಸೇರಿ ಎಂಟು ಮಂದಿ ಪೊಲೀಸರ ಮೇಲೆ ಗುಂಡು ಹಾರಿಸಿ ಹತ್ಯೆ ನಡೆಸಿದ್ದರು.
Recommended Video
ದುಬೆ ಸಂಬಂಧಿ ಶಮಾ ಹಾಗೂ ಸುರೇಶ್ ವರ್ಮಾ , ಕೆಲಸದಾಕೆ ರೇಖಾರನ್ನು ಬಂಧಿಸಲಾಗಿದೆ. ರೇಖಾ ಪತಿ ದಯಾ ಶಂಕರ್ ಅಗ್ನಿಹೋತ್ರಿ ದುಬೆ ಗ್ಯಾಂಗ್‌ನಲ್ಲಿ ಪ್ರಮುಖನಾಗಿದ್ದ. ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ಶೀಟರ್ ವಿಕಾಸ್ ದುಬೆ ಪೊಲೀಸರ ಆಯುಧಗಳನ್ನೇ ಬಳಸಿ ಹತ್ಯೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
54 ವರ್ಷದ ಪೊಲೀಸ್ ಅಧಿಕಾರಿಯೊಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಐದು ಬಾರಿ ಗುಂಡು ಹಾರಿಸಲಾಗಿದೆ. ಹಣೆ, ಎದೆ, ಹೊಟ್ಟೆ ಹಾಗೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಹಾಗೆಯೇ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಹತ್ಯೆ ಮಾಡಿದ ಬಳಿಕ ಹಿಂಸೆ ನೀಡಿದ್ದಾರೋ ಅಥವಾ ಹಿಂಸೆ ನೀಡಿ ಬಳಿಕ ಹತ್ಯೆ ಮಾಡಿದ್ದಾರೋ ಎಂದು ತಿಳಿದುಬಂದಿಲ್ಲ.

ವಿಕಾಸ್ ದುಬೆ ಮತ್ತು ಆತನ ಸಹಚರರನ್ನು ಹಿಡಿಯಲು 50 ಮಂದಿ ಪೊಲೀಸ್ ತಂಡ ತೆರಳಿತ್ತು. ಪೊಲೀಸರನ್ನು ಅವರ ಆಯುಧದ ಮೂಲಕವೇ ಹತ್ಯೆ ಮಾಡಲಾಗಿದೆ. 2 9ಎಂಎಂ ಪಿಸ್ತೂಲ್, ಎಕೆ-47, ಇನ್ಸಾಸ್ ರೈಫಲ್ ಸೇರಿದಂತೆ ಹಲವು ಆಯುಧಗಳನ್ನು ಪೊಲೀಸರಿಂದ ಕಿತ್ತುಕೊಂಡಿದ್ದರು. ಇದೀಗ ವಿಕಾಸ್ ದುಬೆ ಇರುವ ಮಾಹಿತಿ ನೀಡಿದರೆ 2.5 ಲಕ್ಷ ಇನಾಮು ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.












Click it and Unblock the Notifications