• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನು 2 ಕಿಮೀವರೆಗೆ ಎಳೆದೊಯ್ದ ಚಾಲಕ

|

ಘಾಜಿಯಾಬಾದ್, ಮಾರ್ಚ್ 7: ವ್ಯಕ್ತಿಯೊಬ್ಬನನ್ನು ಸುಮಾರು 2 ಕಿ.ಮೀ ದೂರದವರೆಗೆ ಕಾರಿನ ಬಾನೆಟ್‌ ಮೇಲೆ ಎಳೆದುಕೊಂಡು ಹೋಗುವ ವಿಡಿಯೋ ಇದೀಗ ವೈರಲ್ ಆಗಿದೆ.

ಇದು ಘಾಜಿಯಾಬಾದ್‌ ರಸ್ತೆಯೊಂದರಲ್ಲಿ ನಡೆದಿರುವ ಘಟನೆಯಾಗಿದ್ದು, ವ್ಯಕ್ತಿಯೊಬ್ಬ ಕಾರಿನ ಬಾನೆಟ್‌ನ್ನು ಹಿಡಿದುಕೊಂಡಿದ್ದಾನೆ ಆದರೆ ಚಾಲಕ ಕಾರು ನಿಲ್ಲಿಸದೆ ಎರಡು ಕಿ.ಮೀ ದೂರದವರೆಗೆ ಆತನನ್ನು ಎಳೆದುಕೊಂಡು ಹೋಗಿದ್ದಾನೆ.

ಅಲ್ಲಿಯೇ ಇದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಳಿಕ ಕಾರಿನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೊದಲು ಕಾರು ವ್ಯಕ್ತಿ ಓರ್ವನಿಗೆ ಡಿಕ್ಕಿ ಹೊಡೆದಿದೆ. ಬಳಿಕ ಆತ ಓಡಿ ಹೋಗಲು ಯತ್ನಿಸಿದಾಗ ವ್ಯಕ್ತಿ ಚಾಲಕನನ್ನು ತಡೆಯಲು ಬಾನೆಟ್‌ನ್ನು ಹಿಡಿದುಕೊಂಡಿದ್ದಾನೆ.

ಆದರೆ ಅದನ್ನು ಲೆಕ್ಕಿಸದೆ ಅಪಾಯದ ಕುರಿತು ಆಲೋಚಿಸದೆ ವ್ಯಕ್ತಿಯನ್ನು ಸುಮಾರು 2 ಕಿ.ಮೀ ದೂರ ಎಳೆದುಕೊಂಡು ಹೋಗಿದ್ದಾನೆ. ಚಾಲಕನ ದುರ್ವರ್ತನೆಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

English summary
A driver of a car drove for almost 2 kilometers with a man clinging on to the car bonnet. The driver was later arrested by Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X