ಕಾರ್ಯ, ಕಾರ್ಯಕರ್ತರು ಒಟ್ಟಾದರೆ ಅದ್ಭುತ ಸೃಷ್ಟಿ: ಮೋದಿ
ಲಕ್ನೋ, ಮೇ 27: ಸರ್ಕಾರದ ಕಾರ್ಯ ಹಾಗೂ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದರೆ ದೇಶದಲ್ಲಿ ಅದ್ಭುತ ಸೃಷ್ಟಿಯಾಗುತ್ತದೆ ಎಂದು ನಿಯೋಜಿತ ಪ್ರಧಾನಿ ಮೋದಿ ಹೇಳಿದರು.
ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರು ಪಕ್ಷಕ್ಕೆ ದೊಡ್ಡ ಶಕ್ತಿಯಿದ್ದಂತೆ , ಅವರು ಒಟ್ಟುಗೂಡಿದರೆ ದೇಶವೇ ಗೆಲ್ಲುತ್ತದೆ ಎಂದರು.
ಯಾವುದೇ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಇಷ್ಟು ನಿಶ್ಚಿಂತರಾಗಿರಲು ಸಾಧ್ಯವಿಲ್ಲ, ನಾಮಪತ್ರ ಸಲ್ಲಿಸುವಾಗಲೂ ಗೆಲುವು ನಿಶ್ಚಿತವಾಗಿತ್ತು, ಮತ ಎಣಿಕೆ ಸಂದರ್ಭದಲ್ಲೂ ಗೆಲುವು ನಿಶ್ಚಿತವಾಗಿತ್ತು. ಇದಕ್ಕಾಗಿ ಮತದಾನ ದಿನ ನಾನು ಕೇದಾರನಾಥಕ್ಕೆ ಹೋಗಿ ಧ್ಯಾನದಲ್ಲಿ ಕುಳಿತಿದ್ದೆ ಎಂದು ಹೇಳಿದರು.
ಏಪ್ರಿಲ್ 25 ಕ್ಕೆ ನಾನು ವಾರಣಾಸಿಗೆ ಬಂದಿದ್ದಾಗ ಒಂದು ತಿಂಗಳುಗಳ ಕಾಲ ವಾರಣಾಸಿ ಕಡೆಗೆ ತಲೆ ಹಾಕಬಾರದು ಎಂದು ವಾರಣಾಸಿ ಕಾರ್ಯಕರ್ತರು ಆದೇಶಿಸಿದ್ದರು. ಕಾರ್ಯಕರ್ತರ ಆದೇಶವನ್ನು ನಾನು ಪಾಲಿಸಿದ್ದೇನೆ. ಇಂದು ಗೆಲುವಿನ ಬಳಿಕ ಬಂದಿದ್ದೇನೆ ಇದು ಕಾರ್ಯಕರ್ತರ ಶಕ್ತಿ ಎಂದು ನುಡಿದರು.

70 ವರ್ಷಗಳಿಂದ ಆಡಳಿತ ನಡೆಸುತ್ತಿರುವವರು ಜನರ ಮನಸ್ಸಿನಲ್ಲಿ ತಪ್ಪು ಹಾಗೂ ಕೆಟ್ಟ ಅಭಿಪ್ರಾಯಗಳನ್ನು ಹರಡಿಸುತ್ತಿದ್ದಾರೆ. ಇದಕ್ಕೆ ನಾವು ಅಂತ್ಯ ಹಾಡಬೇಕಿದೆ, ನವ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಹೆಜ್ಜೆ ಇಡುವ ನಿಟ್ಟಿನಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ಕೆಲಸ ಮಾಡಬೇಕಿದೆ.-ಮೋದಿ
ಬಿಜೆಪಿ ಎರಡು ಸಂಕಟಗಳಿ ಎರಡು ಶಕ್ತಿ, ಬಿಜೆಪಿಗೆ ಹಾಗೂ ಕಾರ್ಯಕರ್ತರಿಗೆ ನೀತಿ ಹಾಗೂ ರೀತಿ ದೊಡ್ಡ ಶಕ್ತಿಗಳಿವೆ.
ಭಾರತದಲ್ಲಿ ಪ್ರತಿಯೊಂದನ್ನೂ ಮತ ಬ್ಯಾಂಕ್‌ನ ದೃಷ್ಟಿಯಿಂದಲೇ ನೋಡುತ್ತಾರೆ, ಸರ್ಕಾರ ಯಾವುದೇ ಕೆಲಸ ಮಾಡಿದ್ದರೂ ಮತಬ್ಯಾಂಕಿಗೇ ಹೋಲಿಸುತ್ತಾರೆ. ಇಲ್ಲವೇ ಮತಬ್ಯಾಂಕ್ ಮೇಲೆ ಕಣ್ಣಿಟ್ಟುಕೊಂಡೇ ಕೆಲಸ ಮಾಡುತ್ತಿವೆ. ಆದರೆ ನಾವಿಂದು ಮತಬ್ಯಾಂಕ್‌ನ್ನು ಬದಿಗಿಟ್ಟು ಆಡಳಿತ ನಡೆಸಬೇಕಿದೆ. ದೇಶದ ಅಭಿವೃದ್ಧಿಯೇ ನಮ್ಮ ಮಂತ್ರವಾಗಿರಬೇಕು.












Click it and Unblock the Notifications