ಪ್ರೀತಿಸುವವರನ್ನು ಕಳೆದುಕೊಂಡಾಗಿನ ನೋವು ನನಗೆ ಗೊತ್ತು: ಪ್ರಿಯಾಂಕಾ ಗಾಂಧಿ

ಲಕ್ನೋ, ಫೆಬ್ರವರಿ 15: 'ತೀರಾ ಪ್ರೀತಿಸುವವರನ್ನು ಕಳೆದುಕೊಳ್ಳುವ ನೋವು ನನಗೆ ಗೊತ್ತು' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಹೊರಬಂದ ಅವರನ್ನು ಸಭೆಯ ಬಗ್ಗೆ ವಿಚಾರಿಸಲು ಪತ್ರಕರ್ತರು ಹೊರಬಂದರು. ಆದರೆ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ, 'ಇದು ರಾಜಕೀಯ ಚರ್ಚೆಗೆ ಸರಿಯಾದ ಸಮಯವಲ್ಲ. ಭಯೋತ್ಪಾದಕ ದಾಳಿಯಲ್ಲಿ ಯೋಧರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೂ ನನ್ನ ಸಂತಾಪಗಳು, ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಕಷ್ಟ ಏನೆಂದು ನನಗೆ ಗೊತ್ತು. ಈ ಕಠಿಣ ಸಮಯದಲ್ಲಿ ನಿಮ್ಮೆಲ್ಲರೊಂದಿಗೂ ನಾವಿದ್ದೇವೆ' ಎಂದರು.

I know the pain of losing a loved one: Priyanka Gandhi

'ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 44 ಯೋಧರು ಭಯೋತ್ಪಾದಕ ದಾಳಿಗೆ ಬಲಿಯಾಗಿದ್ದು ತೀವ್ರ ನೋವುಂಟು ಮಾಡಿದೆ. ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಳ್ಳುವ ದುಃಖ ನನಗೆ ಅರ್ಥವಾಗುತ್ತದೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ, ಇಡೀ ದೇಶವೂ ನಿಮ್ಮೊಂದಿಗಿದೆ. ಈ ಸರ್ಕಾರ ಮುಂದೆಂದು ಭಯೋತ್ಪಾದಕ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಾವು ಆಶಿಸುತ್ತೇವೆ' ಎಂದು ಪ್ರಿಯಾಂಕಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+