ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳ ಪುರಾಣ ಧಾರ್ಮಿಕ ಶ್ರದ್ದಾ ಕೇಂದ್ರ ವಾರಣಾಸಿಯ ಕೆಲವು ವಿಚಿತ್ರಗಳು, ವಿಶೇಷಗಳು

By ಕೆ.ಶ್ರೀಧರ ರಾವ್
|
Google Oneindia Kannada News

ವಾರಣಾಸಿ, ಬನಾರಸ್, ಕಾಶಿ ಎಂದು ಕರೆಯಲ್ಪಡುವ ಹಿಂದೂಗಳ ಪವಿತ್ರ ಧಾರ್ಮಿಕ ಶ್ರದ್ದಾ ಕೇಂದ್ರದ ವಿಶ್ವನಾಥನ ಲಿಂಗ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಗಂಗಾ ನದಿಯ ಪಶ್ಚಿಮಕ್ಕೆ ಇರುವ ಈ ದೇವಾಲಯ ಮತ್ತು ಈ ನಗರದ ಕೆಲವೊಂದು ವಿಶೇಷತೆ, ವಿಚಿತ್ರಗಳು ಈ ರೀತಿ ಇವೆ:

  • ಇಲ್ಲಿ ಹದ್ದುಗಳು ಹಾರುವುದಿಲ್ಲ, ಹಸುಗಳು ಗುಮ್ಮುವುದಿಲ್ಲ, ಹಲ್ಲಿಗಳು ಶಬ್ದ ಮಾಡುವುದಿಲ್ಲ, ಶವಗಳಿಂದ ಕೆಟ್ಟ ವಾಸನೆ ಬರುವುದಿಲ್ಲ, ಕಾಶಿಯಲ್ಲಿ ಮರಣ ಹೊಂದಿದ ಪ್ರತಿ ಜೀವಿಯ ಬಲ ಕಿವಿ ಮೇಲಕ್ಕೆ ಎದ್ದಿರುತ್ತದೆ.
  • ಕಾಶಿಯಲ್ಲಿ ಮಂದಿರದ ಸುತ್ತಲೂ ಅನೇಕ ಚಿಕ್ಕ ಪುಟ್ಟ ಸಂದುಗಳು ಇದ್ದು ಅಂತಹ ಸಂದುಗಳು ಅನೇಕ ವಲಯಾಕಾರವಾಗಿ ಸುತ್ತಿದ ಹಾಗೆ ಇದ್ದು ಒಂದು ಪದ್ಮವ್ಯೂಹದ ಹಾಗೆ ಹೊಸಬರಿಗೆ ಸುಳಿವು ಸಿಗದ ಹಾಗೆ ಇರುತ್ತದೆ.
  • ಕಾಶಿ ವಿಶ್ವೇಶ್ವರನಿಗೆ ಶವಭಸ್ಮ ಲೇಪನದಿಂದ ಪೂಜೆ ಪ್ರಾರಂಭಿಸುತ್ತಾರೆ. ಇಲ್ಲಿನ ಪರಾನ್ನ ಭುಕ್ತೇಶ್ವರನ ದರ್ಶಿಸಿದರೆ ಜೀವಿಗೆ ಪರರ ಅನ್ನ ತಿಂದ ಋಣದಿಂದ ಮುಕ್ತಿ ಲಭಿಸುತ್ತದೆ ಎನ್ನುವ ಪ್ರತೀತಿಯಿದೆ. ಮುಂದೆ ಓದಿ..

ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ

ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ

  • ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ ಇರುತ್ತದೆ. ಪಾಪ ಮಾಡಿದರೂ ಕೋಟಿ ಸಂಖ್ಯೆಯಲ್ಲಿ ಪಾಪ ಅಂಟಿಕೊಳ್ಳುತ್ತದೆ.
  • ಇಲ್ಲಿನ ಶಕ್ತಿಪೀಠ ವಿಶಾಲಾಕ್ಷಿ ಅಮ್ಮನವರು, ಜಗತ್ತಿನ ಎಲ್ಲರಿಗೂ ಅನ್ನವಿಡುವ ಅನ್ನಪೂರ್ಣ ದೇವಿ ನಿವಾಸ ಸ್ಥಳ ಕಾಶಿ. ಪ್ರಪಂಚದಲ್ಲಿ ಇರುವ ಎಲ್ಲಾ ಭಾಷೆಗಳಿಗೆ ತಾಯಿ ಆಗಿರುವ ಅತೀ ಪ್ರಾಚೀನ ಸಂಸ್ಕ್ರತ ಪೀಠ ಕಾಶಿಯಲ್ಲೇ ಇರುವುದು.
ದಶಾಶ್ವಮೇಧ ಘಾಟ್

ದಶಾಶ್ವಮೇಧ ಘಾಟ್

> ಇಲ್ಲಿನ ಗಂಗೆಯ ತೀರದಲ್ಲಿ 84 ಘಾಟ್ ಗಳು ಇವೆ. ಇದರಲ್ಲಿ ದೇವತೆಗಳು, ಋಷಿಗಳು, ರಾಜರುಗಳೊಂದಿಗೆ, ಎಷ್ಟೋ ಜನರು ತಮ್ಮ ತಪಃ ಶಕ್ತಿಯಿಂದ ನಿರ್ಮಿಸಿರುವ ಘಾಟ್ ಗಳು ಎನ್ನುವ ನಂಬಿಕೆಯಿದೆ. ಪ್ರಮುಖ ಘಾಟ್ ಗಳು ಹೀಗಿವೆ:

1. ದಶಾಶ್ವಮೇಧ ಘಾಟ್
ಬ್ರಹ್ಮದೇವನು ಹತ್ತು ಸಾರಿ ಅಶ್ವಮೇಧಯಾಗ ಮಾಡಿರುವುದು ಇಲ್ಲೇ. ಪ್ರತಿದಿನ ಸಾಯಂಕಾಲ ವಿಶೇಷವಾದ ಗಂಗಾ ಆರತಿ ನಡೆಯುತ್ತದೆ.

2. ಪ್ರಯಾಗ್ ಘಾಟ್
ಇಲ್ಲಿ ಭೂಗರ್ಭದಲ್ಲಿ ಗಂಗೆಯೊಂದಿಗೆ ಯಮುನಾ, ಸರಸ್ವತೀ ನದಿ ಸಂಗಮವಾಗುತ್ತದೆ.

3. ಸೋಮೇಶ್ವರ ಘಾಟ್
ಚಂದ್ರನಿಂದ ನಿರ್ಮಿತವಾಗಿದೆ.

ಮಣಿಕರ್ಣಿಕಾ ಘಾಟ್

ಮಣಿಕರ್ಣಿಕಾ ಘಾಟ್

4. ಮೀರ್ ಘಾಟ್
ಸತೀದೇವಿ ಕಣ್ಣು ಬಿದ್ದ ಸ್ಥಳ, ವಿಶಾಲಾಕ್ಷಿ ದೇವಿ ಶಕ್ತಿ ಪೀಠ. ಇಲ್ಲೇ ಯಮನು ಪ್ರತಿಷ್ಠಾಪಿಸಿದ ಲಿಂಗ ಇರುವುದು.

5. ನೇಪಾಳಿ ಘಾಟ್
ಪಶುಪತಿನಾಥ್ ಮಂದಿರದ ಬಂಗಾರದ ಕಲಶವನ್ನು ನೇಪಾಳದ ರಾಜ ಕಟ್ಟಿಸಿದ ಎನ್ನುವ ಪ್ರತೀತಿ.

6. ಮಣಿಕರ್ಣಿಕಾ ಘಾಟ್
ಕಾಶಿಯ ಮೊಟ್ಟ ಮೊದಲನೆಯ ಘಾಟ್. ಇದನ್ನು ವಿಷ್ಣುದೇವನು ಸ್ವಯಂ ಸುದರ್ಶನ ಚಕ್ರದಿಂದ ಅಗೆದು ನಿರ್ಮಿಸಿದ. ಇಲ್ಲಿ ಗಂಗೆ ನಿರ್ಮಲವಾಗಿ ಹರಿಯುತ್ತಾಳೆ. ಇಲ್ಲಿ ಮಧ್ಯಾಹ್ನ ಸಮಯದಲ್ಲಿ ಯಾರಾದರೂ ಸ್ನಾನ ಮಾಡಿದರೆ ಅವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುವುದು ಎನ್ನುವ ನಂಬಿಕೆ.

ಪಂಚ ಗಂಗಾ ಘಾಟ್

ಪಂಚ ಗಂಗಾ ಘಾಟ್

7. ವಿಶ್ವೇಶ್ವರ್ ಘಾಟ್
ಇದನ್ನು ಸಿಂಧಿಯಾ ಘಾಟ್ ಎಂದೂ ಕರೆಯುತ್ತಾರೆ. ಇಲ್ಲೇ ಅಹಲ್ಯಾ ಬಾಯಿ ತಪಸ್ಸು ಮಾಡಿದ್ದು. ಇಲ್ಲಿ ಸ್ನಾನ ಮಾಡಿ ಬಿಂದು ಮಾಧವನನ್ನು ದರ್ಶಿಸುತ್ತಾರೆ ಎನ್ನುವ ಪ್ರತೀತಿ.

8. ಪಂಚ ಗಂಗಾ ಘಾಟ್
ಇಲ್ಲಿ ಭೂಗರ್ಭದಿಂದ ಗಂಗೆಯೊಳಗೆ 5 ನದಿಗಳು ಸೇರುತ್ತದೆ.

9. ಗಾಯ್ ಘಾಟ್
ಗೋ ಪೂಜೆ ನಡೆಯುವ ಘಾಟ್

ಅಸ್ಸಿ ಘಾಟ್

ಅಸ್ಸಿ ಘಾಟ್

10. ತುಳಸಿ ಘಾಟ್
ತುಳಸೀದಾಸ್ ಸಾಧನೆ ಮಾಡಿ ರಾಮಚರಿತ ಮಾನಸ್ ಬರೆಯುವಂತೆ ಶಿವನು ಇವರಿಗೆ ಆದೇಶ ಮಾಡಿದನು ಎನ್ನುವ ನಂಬಿಕೆ.

11. ಹನುಮಾನ್ ಘಾಟ್
ಇಲ್ಲಿ ರಾಮದೇವರ ಪ್ರವಚನ ಕೇಳಲು ಹನುಮಂತನು ಬರುತ್ತಾನೆ ಎನ್ನುವ ನಂಬಿಕೆ.ಇಲ್ಲೇ ಸೂರ್ಯನು ತಪಸ್ಸು ಮಾಡಿ ಅನೇಕ ಶಕ್ತಿಗಳನ್ನು ಹೊಂದಿರುವ ಲೋಲಾರ್ಕ್ ಕುಂಡ ಇರುವುದು. ಇಲ್ಲೇ ಶ್ರೀ ವಲ್ಲಭಾಚಾರ್ಯರು ಜನಿಸಿರುವುದು.

12. ಅಸ್ಸಿ ಘಾಟ್
ಪೂರ್ವದಲ್ಲಿ ದುರ್ಗಾದೇವಿ ಶುಂಭ, ನಿಶುಂಭ ಎನ್ನುವ ರಾಕ್ಷಸರನ್ನು ಸಂಹರಿಸಿದ ಖಡ್ಗವನ್ನು ಈ ಘಾಟ್ ನಲ್ಲಿ ಹಾಕಿದ್ದರಿಂದ ಇಲ್ಲಿ ಒಂದು ತೀರ್ಥ ಉದ್ಭವಿಸಿದೆ.

ಹರಿಶ್ಚಂದ್ರ ಘಾಟ್

ಹರಿಶ್ಚಂದ್ರ ಘಾಟ್

13. ಹರಿಶ್ಚಂದ್ರ ಘಾಟ್
ಸರ್ವವನ್ನು ಕಳೆದುಕೊಂಡ ಹರಿಶ್ಚಂದ್ರನು ಇಲ್ಲಿ ಶವದಹನ ಕೂಲಿಯಾಗಿ ಕೆಲಸ ಮಾಡಿ ದೈವ ಪರೀಕ್ಷೆಯಲ್ಲಿ ಗೆದ್ದು ತನ್ನ ರಾಜ್ಯವನ್ನು ಮರಳಿ ಪಡೆದುಕೊಂಡನು. ಇಂದಿಗೂ ಇಲ್ಲಿ ನಿತ್ಯ ಚಿತೆ ಉರಿಯುತ್ತಲೇ ಇರುತ್ತದೆ.

14. ಮಾನಸ ಸರೋವರ ಘಾಟ್
ಇಲ್ಲಿ ಕೈಲಾಸ ಪರ್ವತದಿಂದ ಭೂಗರ್ಭ ಜಲಧಾರೆ ಸೇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಕೈಲಾಸ ಪರ್ವತ ಸುತ್ತಿದ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ.

15. ನಾರದ ಘಾಟ್
ನಾರದನು ಇಲ್ಲಿ ಲಿಂಗ ಸ್ಥಾಪಿಸಿದ್ದಾನೆ ಎನ್ನುವ ಪ್ರತೀತಿ

ಅಹಲ್ಯಾ ಬಾಯಿ ಘಾಟ್

ಅಹಲ್ಯಾ ಬಾಯಿ ಘಾಟ್

16. ಚೌತಸ್ಸಿ ಘಾಟ್
ಇಲ್ಲೇ ಸ್ಕಂದ ಪುರಾಣದ ಪ್ರಕಾರ ಇಲ್ಲಿ 64 ಯೋಗಿನಿಯರು ತಪಸ್ಸು ಮಾಡಿದ್ದಾರೆ. ಇದು ದತ್ತಾತ್ರೇಯರಿಗೆ ಪ್ರೀತಿ ಪಾತ್ರ ಸ್ಥಳ.

17. ರಾನಾ ಮಹಲ್ ಘಾಟ್
ಬ್ರಹ್ಮದೇವನು ಸೃಷ್ಟಿ ಕಾರ್ಯದಲ್ಲಿ ಬರುವ ವಿಘ್ನಗಳನ್ನು ತೊಲಗಿಸುವಂತೆ ವಿನಾಯಕನನ್ನು ತಪಸ್ಸು ಮಾಡಿರುವ ಸ್ಥಳ ಎನ್ನುವ ನಂಬಿಕೆ

18. ಅಹಲ್ಯಾ ಬಾಯಿ ಘಾಟ್

English summary
Shivaratri Special: Here we taking about the religious center of the world of Hindus Varanasi specialties and rituals. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X