ವೈರಲ್ ವಿಡಿಯೋ: ಹಿಂದು ಮಹಾಸಭಾದಿಂದ ಗಾಂಧಿ ಹತ್ಯೆಯ ಮರುಸೃಷ್ಟಿ!
ಲಕ್ನೋ, ಜನವರಿ 31: ಇಡೀ ದೇಶವೂ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪುಣ್ಯತಿಥಿ ಆಚರಿಸುತ್ತಿದ್ದರೆ, ಉತ್ತರ ಪ್ರದೇಶದ ಅಲಿಗಢದಲ್ಲಿ ಬಲಪಂಥೀಯ ಸಂಘಟನೆಯೊಂದು ಗಾಂಧಿ ಹತ್ಯೆಯನ್ನು ಪುನರ್ ಸೃಷ್ಟಿ ಮಾಡುವ ಮೂಲಕ ವಿವಾದ ಮೈಮೇಲೆಳೆದುಕೊಂಡಿದೆ.
ಹಿಂದು ಮಹಾಸಭಾ ಸಂಘಟನೆಯು ಗಾಂಧಿ ಹತ್ಯೆಯನ್ನು ಮರು ಸೃಷ್ಟಿ ಮಾಡಿ ತೆಗೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
1948ರ ಜನವರಿ 30 ರಂದು ಪ್ರಾರ್ಥನೆಗೆ ತೆರಳಿದ್ದ ಮಹಾತ್ಮಾ ಗಾಂಧೀಜಿ ಅವರನ್ನು ಆಗ ಹಿಂದು ಮಹಾಸಭಾದ ಸದಸ್ಯನಾಗಿದ್ದ ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದಿದ್ದ.

ಇದೀಗ ಹಿಂದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮಾ ಗಾಂಧಿಯವರ ಪ್ರತಿಕೃತಿಯನ್ನು ದಹಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ದಸರಾದಲ್ಲಿ ರಾವಣ ಪ್ರತಿಕೃತಿಯನ್ನು ದಹಿಸಿದಂತೆ, ನಾವೂ ಗಾಂಧಿ ಹತ್ಯೆಯಂದು ಅವರ ಪ್ರತಿಕೃತಿಯನ್ನು ದಹಿಸುತ್ತೇವೆ ಎಂದು ಪೂಜಾ ಹೇಳಿದ್ದಾರೆ.
India: Hindu fascists (Hindu Mahasabha) celebrate the assassination of Gandhi by shooting his effigy and honoring his Hindu fascist killer yesterday. pic.twitter.com/9LDeNd41LP
— CJ Werleman (@cjwerleman) January 30, 2019
ಗಾಂಧಿ ಹತ್ಯೆಯ ದಿನವನ್ನು ನಾವು ಶೌರ್ಯ ದಿನವನ್ನಾಗಿ ಆಚರಿಸುತ್ತೇವೆ. ನಾಥೂರಾಮ್ ಗೋಡ್ಸೆ ಅವರಿಗೆ ಈ ದಿನವನ್ನು ಸಮರ್ಪಿಸುತ್ತೇವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications