ಕಮಲೇಶ್ ತಿವಾರಿ ಮರಣೋತ್ತರ ವರದಿ: 15 ಬಾರಿ ಇರಿತ, ಒಮ್ಮೆ ಗುಂಡೇಟು!

ಲಕ್ನೋ, ಅಕ್ಟೋಬರ್ 23: ಭೀಕರವಾಗಿ ಹತ್ಯೆಗೊಳಗಾದ ಹಿಂದು ಪರ ಸಂಘಟನೆಯ ಮುಖಂಡ ಕಮಲೇಶ್ ತಿವಾರಿ ಮರಣೋತ್ತರ ವರದಿ ಪೊಲೀಸರಿಗೆ ಲಭ್ಯವಾಗಿದೆ. ಕಮಲೇಶ್ ಅವರನ್ನು 15 ಬಾರಿ ಚಾಕುವಿನಲ್ಲಿ ಇರಿಯಲಾಗಿತ್ತು ಮತ್ತು ಅವರ ಮೇಲೆ ಒಂದು ಬಾರಿ ಗುಂಡೇಟಿನ ದಾಳಿ ನಡೆಸಲಾಗಿತ್ತು ಎಂದು ಈ ವರದಿ ತಿಳಿಸಿದೆ.

ಅವರ ಕತ್ತು, ದವಡೆ, ಎದೆಯ ಮೇಲೆ ಚಾಕುವಿನಿಂದ ಇರಿದ 15 ಗಾಯಗಳಿದ್ದು, ತಲೆಯ ಹಿಂಭಾಗದಲ್ಲಿ ಗುಂಡೇಟಿನ ಗಾಯವಿತ್ತು. ತಲೆಗೆ ಗುಂಡೇಟು ಬಿದ್ದ ಪರಿಣಾಮ ಅವರು ಸಾವಿಗೀಡಾಗಿದ್ದಾರೆ ಎಂದು ವರದಿ ಹೇಳಿದೆ.

ಅಕ್ಟೋಬರ್ 18 ರಂದು ಉತ್ತರ ಪ್ರದೇಶದ ನಾಕಾ ಎಂಬಲ್ಲಿ 43 ವರ್ಷ ವಯಸ್ಸಿನ ತಿವಾರಿ ಅವರನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

Hindu Group leader Kamlesh Tiwaris Post Mortem Report Released

ಕಮಲೇಶ್ ಅವರ ಮನೆಯ ಹೊರಗೇ ಅವರನ್ನು ಕೊಲೆ ಮಾಡಲಾಗಿದ್ದು, ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಕ್ಯಾಮರಾ ಫೂಟೇಜ್ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ಪರಿಶೀಲಿಸಿದಾಗ ಕೊಲೆ ನಡೆಯುವ ಮುನ್ನ ಕಮಲೇಶ್ ಮನೆಯ ಬಳಿ ಮೂರು ಆಗಮಿಸಿದ್ದು ಸರೆಯಾಗಿದೆ. ಅದರಲ್ಲಿ ಇಬ್ಬರು ಪುರುಷರಿದ್ದರೆ, ಓರ್ವ ಮಹಿಳೆ ಇದ್ದಾರೆ.

ಮಹಿಳೆ ತಂದಿದ್ದ ಸ್ವೀಟ್ ಬಾಕ್ಸಿನಲ್ಲೇ ಕೊಲೆಗೆ ಬಳಸಲಾಗಿದ್ದ ಆಯುಧವನ್ನು ತರಲಾಗಿತ್ತು ಎಂಬುದು ಸಾಬೀತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+