Get Updates
Get notified of breaking news, exclusive insights, and must-see stories!

ಹಿಜಾಬ್‌ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ

ಲಕ್ನೋ, ಫೆಬ್ರವರಿ 14: ಕರ್ನಾಟಕದ ಹಿಜಾಬ್‌ ವಿವಾದ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಈ ವಿವಾದವನ್ನು ಮುಂದಿನ ವಿಧಾನಸಭೆ ಚುನಾವಣೆಯ ದಾಳವನ್ನಾಗಿಯೂ ಬಳಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಹಿನ್ನೆಲೆ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾಳೆ," ಎಂದು ಹೇಳಿದ್ದಾರೆ.

ತಾನು ಉತ್ತರ ಪ್ರದೇಶದಲ್ಲಿ ಮಾಡಿದ ಚುನಾವಣಾ ಭಾಷಣವನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟ್ವೀಟ್‌ ಮಾಡಿದ್ದಾರೆ. ಈ 43 ಸೆಕೆಂಡುಗಳ ವೀಡಿಯೊದಲ್ಲಿ ಕಾಲೇಜುಗಳಲ್ಲಿ ತಮಗೆ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಸದ್ಯ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯರ ಪರವಾದ ನಿಲುವು ಕಂಡು ಬಂದಿದೆ.

Recommended Video

      ಹಿಜಾಬ್ ಧಾರಿಣಿ ಮುಂದಿನ ಪ್ರಧಾನಿಯಾಗೋದು ಗ್ಯಾರೆಂಟಿ ಎಂದ ಓವೈಸಿ | Oneindia Kannada

      "ಹೆಣ್ಣು ಹಿಜಾಬ್ ಧರಿಸಲು ನಿರ್ಧರಿಸಿ ತಾನು ಹಿಜಾಬ್‌ ಧರಿಸಲು ನಿರ್ಧಾರ ಮಾಡಿದಾಗ, ಈ ಬಗ್ಗೆ ಪೋಷಕರಲ್ಲಿ ಹೇಳಿದಾಗ, ಆಕೆಯ ಪೋಷಕರು ಅದನ್ನು ಧರಿಸಲು ಅನುಮತಿಸಿದಾಗ, ಯಾರು ಅದನ್ನು ಧರಿಸುವುದನ್ನು ತಡೆಯಬಹುದು?," ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಶ್ನೆ ಮಾಡಿದ್ದಾರೆ.

      Hijab Row: A Girl in Hijab Will Be Country’s PM One Day Says Asaduddin Owaisi

      "ಹೆಣ್ಣು ಮಕ್ಕಳು ವೈದ್ಯರು, ಕಲೆಕ್ಟರ್‌ಗಳು ಆಗುತ್ತಾರೆ"

      "ಹುಡುಗಿಯರು ಹಿಜಾಬ್ ಧರಿಸುತ್ತಾರೆ, ನಿಖಾಬ್ ಧರಿಸುತ್ತಾರೆ ಮತ್ತು ಕಾಲೇಜುಗಳಿಗೆ ಹೋಗುತ್ತಾರೆ. ನಮ್ಮ ಹೆಣ್ಣು ಮಕ್ಕಳು ವೈದ್ಯರು, ಕಲೆಕ್ಟರ್‌ಗಳು, ಎಸ್‌ಡಿಎಂಗಳು ಮತ್ತು ಉದ್ಯಮಿಗಳಾಗುತ್ತಾರೆ," ಎಂದು ಒವೈಸಿ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ತಿಳಿಸಿದ್ದಾರೆ. "ನೀವೆಲ್ಲರೂ ನೆನಪಿನಲ್ಲಿಡಿ, ಬಹುಶಃ ನಾನು ಬದುಕಿಲ್ಲದಿರುವಾಗ, ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾಳೆ," ಎಂದು ಕೂಡಾ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಿಜಾಬ್‌ ಬಗ್ಗೆ ತನ್ನ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ.

      ಸಹೋದರಿಯರು ಹೋರಾಟದಲ್ಲಿ ಯಶಸ್ವಿಯಾಗಲಿ ಎಂದಿದ್ದ ಓವೈಸಿ

      ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಈ ಹಿಂದೆ ಜನರು ತಮ್ಮ ಮೇಲೆ ದ್ವೇಷ ಸಾಧಿಸುವ ಮತ್ತು ಗುಂಡಿನ ದಾಳಿ ನಡೆಸುವವರ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣ ಸಂವಿಧಾನದ 15, 19 ಮತ್ತು 21 ನೇ ವಿಧಿಯ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು. "ಗಡ್ಡ ಮತ್ತು ಟೋಪಿಯೊಂದಿಗೆ ಸಂಸತ್ತಿಗೆ ಹೋಗಬಹುದಾದರೆ, ಮುಸ್ಲಿಂ ಹುಡುಗಿಯರು ಹಿಜಾಬ್ ಅಥವಾ ನಿಖಾಬ್ ಧರಿಸಿ ಶಾಲೆಗೆ ಏಕೆ ಹೋಗಬಾರದು?" ಎಂದು ಪ್ರಶ್ನಿಸಿದ ಅಸಾದುದ್ದೀನ್ ಓವೈಸಿಯು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಖಂಡಿಸಿದರು.

      ಮುಂದುವರೆದು, ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ನಮ್ಮ ಸಹೋದರಿಯರು ತಮ್ಮ ಹೋರಾಟದಲ್ಲಿ ಯಶಸ್ವಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕರ್ನಾಟಕದಲ್ಲಿ ಸಂವಿಧಾನದ 15, 19 ಮತ್ತು 21ರ ಘೋರ ಉಲ್ಲಂಘನೆಯಾಗುತ್ತಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಈ ನಿರ್ಧಾರವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

      ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದದ ಕುರಿತು ಭಾರತಕ್ಕೆ ಪಾಕಿಸ್ತಾನ ಹೇಳಿದ ಪಾಠದ ವಿರುದ್ಧವೂ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದರು. ನಮ್ಮ ದೇಶದ ಹುಡುಗಿಯರು ಇಲ್ಲಿ ಓದುತ್ತಾರೆ ಮತ್ತು ಅವರ ಭದ್ರತೆಗೆ ನಾವು ಹೊಣೆಗಾರರಾಗಿರುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಮ್ಮ ದೇಶಕ್ಕೆ ಪಾಠ ಮಾಡುವುದು ಬೇಡ ಎಂದು ಓವೈಸಿ ಖಾರವಾಗಿಯೇ ಹೇಳಿದ್ದರು. ಪಾಕಿಸ್ತಾನದಲ್ಲಿ ಮಹಿಳಾ ಶಿಕ್ಷಣ ಹೋರಾಟಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸುಫ್ ಜಾಯ್ ಮೇಲೆ ದಾಳಿ ನಡೆದಿದ್ದು, ತಮ್ಮ ದೇಶದ ಹೆಣ್ಣುಮಕ್ಕಳಿಗೆ ಭದ್ರತೆ ನೀಡಲು ವಿಫಲರಾಗಿರುವ ನೀವು ಈಗ ಭಾರತಕ್ಕೆ ಪಾಠ ಹೇಳುವುದು ಬೇಡ ಎಂದು ಓವೈಸಿ ತಿರುಗೇಟು ನೀಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+