ಗಾಜಿಯಾಬಾದ್: ಲಿಫ್ಟ್‌ನಲ್ಲಿ ಮಗುವಿಗೆ ನಾಯಿ ಕಚ್ಚಿದ ಪ್ರಕರಣ- ಮಹಿಳೆಗೆ 5,000 ರೂ. ದಂಡ

ಗಾಜಿಯಾಬಾದ್, ಸೆಪ್ಟೆಂಬರ್ 7: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಲಿಫ್ಟ್‌ನಲ್ಲಿ ಸಾಕು ನಾಯಿಯೊಂದು ಮಗುವಿಗೆ ಕಚ್ಚಿದ ಆರೋಪ ಮೇಲೆ ನಾಯಿ ಮಾಲೀಕರಿಗೆ 5,000 ರೂ ದಂಡ ಹಾಕಲಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ನಂತರ ಜನ ಮಹಿಳೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ವಿಡಿಯೋದಲ್ಲಿ ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಲಿಫ್ಟ್‌ನಲ್ಲಿದ್ದ ಮಗುವನ್ನು ನಾಯಿ ಕಚ್ಚಿದೆ. ಆಶ್ಚರ್ಯವೆಂದರೆ ನಾಯಿ ಕಚ್ಚಿದ ನಂತರ ಮಗು ನೋವಿನಿಂದ ನರಳುತ್ತಲೇ ಇರುತ್ತದೆ. ಆದರೆ ಮಹಿಳೆ ಆ ಮಗುವಿನ ಸ್ಥಿತಿಯ ಬಗ್ಗೆ ಕೇಳುವುದಿಲ್ಲ. ಬಳಿಕ ಮಗುವಿನ ತಂದೆ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ.

ಹೌಸಿಂಗ್ ಸೊಸೈಟಿ ಲಿಫ್ಟ್‌ನಲ್ಲಿ ನಾಯಿ ಕಚ್ಚಿದ ಮಹಿಳೆಗೆ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ 5,000 ರೂಪಾಯಿ ದಂಡ ವಿಧಿಸಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಗಾಜಿಯಾಬಾದ್‌ನ ರಾಜ್‌ನಗರ ಎಕ್ಸ್‌ಟೆನ್ಶನ್ ಚಾರ್ಮ್ಸ್ ಕೌಂಟಿ ಸೊಸೈಟಿಯಲ್ಲಿ ಸೆಪ್ಟೆಂಬರ್ 5 ರಂದು ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಮಹಿಳೆಯೊಂದಿಗೆ ಸಾಕು ನಾಯಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಕೆಲವು ಸೆಕೆಂಡುಗಳ ನಂತರ, ನಾಯಿ ಹಾರಿ ಚಿಕ್ಕ ಹುಡುಗನನ್ನು ಕಚ್ಚುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಮಗುವಿಗೆ ಏನಾಯ್ತು ಎಂದು ಪರೀಕ್ಷಿಸಲು ಮಹಿಳೆ ಮುಂದಾಗುವುದಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ಮಗು ನೋವಿನಿಂದ ನರಳುತ್ತಾನೆ.

 Ghaziabad: Child bitten by dog in lift- penalty to woman

ಬಾಲಕನ ಪೋಷಕರು ನಂದಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆಯ ನಂತರ, ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಮಹಿಳೆಯ ಮನೆಗೆ ತಲುಪಿದಾಗ ಸಾಕು ನಾಯಿ ನೋಂದಣಿಯಾಗಿಲ್ಲ ಎಂದು ತಿಳಿದುಬಂದಿದೆ.

"ರಾಜನಗರ ವಿಸ್ತರಣೆಯಲ್ಲಿರುವ ಚಾರ್ಮ್ಸ್ ಕ್ಯಾಸಲ್‌ನಿಂದ ವೈರಲ್ ವಿಡಿಯೊದಲ್ಲಿ, ಒಬ್ಬ ಹುಡುಗನ ಮೇಲೆ ನಾಯಿ ದಾಳಿ ಮಾಡಿತು ಮತ್ತು ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದೆ ನಿಂತಿದ್ದಳು. ಬಾಲಕನ ತಂದೆಯಿಂದ ದೂರು ದಾಖಲಾಗಿದ್ದು, ತನಿಖೆ ಇನ್ನೂ ನಡೆಯುತ್ತಿದೆ'' ಎಂದು ಸರ್ಕಲ್ ಅಧಿಕಾರಿ ಅಲೋಕ್ ದುಬೆ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+