ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ನಿಂದ ಉತ್ತರ ಪ್ರದೇಶದ ಜೈಲಿಗೆ ಶಾಸಕ ಅನ್ಸಾರಿ ವರ್ಗಾವಣೆ

|
Google Oneindia Kannada News

ಲಕ್ನೋ, ಏಪ್ರಿಲ್ 7: ಪಂಜಾಬ್‌ನ ಜೈಲಿನಲ್ಲಿ ಎರಡು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದ ಬಿಎಸ್‌ಪಿ ಶಾಸಕ ಮತ್ತು ಮಾಜಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶದ ಬಾಂಡಾ ಜೈಲಿಗೆ ಬುಧವಾರ ಬೆಳಿಗ್ಗೆ ಮರಳಿ ಕರೆತರಲಾಗಿದೆ.

ಶಸ್ತ್ರಾಸ್ತ್ರಗಳನ್ನು ಹಿಡಿದ ಭದ್ರತಾ ಸಿಬ್ಬಂದಿಯ ಭಾರಿ ಬಂದೋಬಸ್ತ್ ನಡುವೆ ಆಂಬುಲೆನ್ಸ್‌ನಲ್ಲಿ ಪಂಜಾಬ್‌ನ ರೂಪನಗರದಿಂದ 900 ಕಿಮೀ ಪ್ರಯಾಣದ ಬಳಿಕ ಬಾಂಡಾಕ್ಕೆ ಅನ್ಸಾರಿಯನ್ನು ಕರೆತರಲಾಯಿತು. ಬಾಂಡಾ ಕಾರಾಗೃಹಕ್ಕೆ ವರ್ಗಾಯಿಸುವ ಸಲುವಾಗಿ ಉತ್ತರ ಪ್ರದೇಶದ ಪೊಲೀಸರು ಮಂಗಳವಾರ 57 ವರ್ಷದ ಅನ್ಸಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.

ಉತ್ತರ ಪ್ರದೇಶದ ಜೈಲಿಗೆ ವರ್ಗಾವಣೆ ವೇಳೆ ಪತಿ ಹತ್ಯೆ ಸಾಧ್ಯತೆ: ಭದ್ರತೆಗಾಗಿ ಅನ್ಸಾರಿ ಪತ್ನಿ ಪತ್ರಉತ್ತರ ಪ್ರದೇಶದ ಜೈಲಿಗೆ ವರ್ಗಾವಣೆ ವೇಳೆ ಪತಿ ಹತ್ಯೆ ಸಾಧ್ಯತೆ: ಭದ್ರತೆಗಾಗಿ ಅನ್ಸಾರಿ ಪತ್ನಿ ಪತ್ರ

ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಒಬ್ಬ ಅಧಿಕಾರಿ, ಇಬ್ಬರು ಇನ್‌ಸ್ಪೆಕ್ಟರ್, ಆರು ಸಬ್ ಇನ್‌ಸ್ಪೆಕ್ಟರ್, 20 ಹೆಡ್ ಕಾನ್‌ಸ್ಟೆಬಲ್, 30 ಕಾನ್‌ಸ್ಟೆಬಲ್ ಮತ್ತು ಪಿಎಸಿ ಒಂದು ಘಟಕ ಹಾಗೂ ಆಂಬುಲೆನ್ಸ್‌ಅನ್ನು ಈ ಕಾರ್ಯಾಚರಣೆಗೆ ಬಳಸಲಾಗಿತ್ತು.

 Gangster Turned Politician Mukhtar Ansari Brought Back To Banda Jail In UP From Punjab

ಪೊಲೀಸ್ ತಂಡಕ್ಕೆ ಗುಂಡು ನಿರೋಧ ಜಾಕೆಟ್, ವಿಶೇಷ ಆಯುಧಗಳನ್ನು ಒದಗಿಸಲಾಗಿತ್ತು. ಗಲಭೆ ನಿಯಂತ್ರಣಕ್ಕೆ ಬಳಸಲಾಗುವ ಜಿಪಿಎಸ್ ವ್ಯವಸ್ಥೆಯುಳ್ಳ ವಜ್ರ ವಾಹನದಲ್ಲಿ ಅನ್ಸಾರಿಯನ್ನು ನಸುಕಿನ 4.30ರ ವೇಳೆಗೆ ಬಾಂಡಾಕ್ಕೆ ಕರೆತರಲಾಯಿತು.

ತಮ್ಮ ಪತಿಯ ಪ್ರಾಣಕ್ಕೆ ಅಪಾಯವಿದೆ. ಅವರನ್ನು ಪೊಲೀಸ್ ವಶದಲ್ಲಿರುವಾಗ ಕೊಲ್ಲಬಹುದು. ಅವರ ಜೀವಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಬೇಕು. ಅವರ ವಿರುದ್ಧ ಬಾಕಿ ಉಳಿದಿರುವ ಅಪರಾಧ ಪ್ರಕರಣಗಳ ವಿಚಾರಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೋರಿ ಅನ್ಸಾರಿ ಪತ್ನಿ ಅಫ್ಸಾನ್ ಅನ್ಸಾರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ಅನ್ಸಾರಿ ವಿರುದ್ಧ ಉತ್ತರ ಪ್ರದೇಶದ ಘಾಜಿಪುರ, ಲಕ್ನೋ ಮತ್ತು ಮಾವುಗಳಲ್ಲಿ 38 ಪ್ರಕರಣಗಳಿವೆ. ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಮುಖ್ತಾರ್ ಅಹ್ಮದ್ ಅನ್ಸಾರಿ ಅವರ ಮೊಮ್ಮಗ ಹಾಗೂ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಸಂಬಂಧಿಯೂ ಹೌದು.

English summary
Gangster turned politician, BSP MLA Mukhtar Ansari brought back to Banda jail in Uttar Pradesh from Punjab with heavy security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X